ಬಿಗ್ ಬಾಸ್ ಮನೆಯಲ್ಲಿ ಈವರೆಗೂ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿದ್ದು ಅರುಣ್ ಸಾಗರ್. ಅವರನ್ನೂ ಮೀರಿಸುವಂತಹ ಪ್ರಯತ್ನ ನಿನ್ನೆ ನಡೆದಿದೆ. ಸದಾ ಜಗಳ ಮಾಡುತ್ತಲೇ ಏರುಧ್ವನಿಯಲ್ಲಿ ಮಾತಾಡುವ ಮೂಲಕ ಫೇಮಸ್ ಆಗಿದ್ದ ಪ್ರಶಾಂತ್ ಸಂಬರಗಿ, ಫ್ರಾಕ್ ಹಾಕಿಕೊಂಡು ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಪಿಂಕ್ ಫ್ರಾಕಿನಲ್ಲಿ ಅವರು ಸಖತ್ ಆಗಿ ಕಾಣಿಸಿಕೊಂಡು ಮನರಂಜನೆ ನೀಡಿದ್ದಾರೆ.
ಪ್ರಶಾಂತ್ ಸಂಬರಗಿ ಈ ಅವತಾರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಒಂದು ಕಾರಣವೂ ಇದೆ. ಸಹಸ್ಪರ್ಧಿ ಅನುಪಮಾ ಗೌಡ ಮನೆಯಲ್ಲಿದ್ದ ಗ್ಲಾಸು ಒಡೆದು ಹಾಕಿದರು. ಹಾಗಾಗಿ ಬಿಗ್ ಬಾಸ್ ಅವರಿಗೆ ಶಿಕ್ಷೆಯೊಂದನ್ನು ನೀಡಿದರು. ಅನುಪಮಾ ನೀರು ಕುಡಿಯಬೇಕು ಅಂದರೆ, ಪುರುಷ ಸ್ಪರ್ಧಿಗಳಿಗೆ ಡಾನ್ಸ್ ಹೇಳಿಕೊಡಬೇಕು ಎನ್ನುವುದು ಟಾಸ್ಕ್ ಆಗಿತ್ತು. ಹಾಗಾಗಿ ಅವರು ಡಾನ್ಸ್ ಕಲಿಸಲು ಪ್ರಶಾಂತ್ ಸಂಬರಗಿ ಮತ್ತು ರೂಪೇಶ್ ರಾಜಣ್ಣ ಅವರನ್ನು ಆಯ್ಕೆ ಮಾಡಿಕೊಂಡರು.
ಈ ಡಾನ್ಸ್ ಕಲಿಯುವುದಕ್ಕಾಗಿಯೇ ಪ್ರಶಾಂತ್ ಸಂಬರಗಿ ಫ್ರಾಕ್ ಹಾಕಿಕೊಳ್ಳಬೇಕಾದ ಸನ್ನಿವೇಶ ಎದುರಾಯಿತು. ಅನುಪಮಾ ಗೌಡರಿಗೆ ನೀರು ಕುಡಿಸಲೆಂದೇ ಅವರು ಫ್ರಾಕ್ ಹಾಕಿಕೊಂಡು ಅವರಿಂದ ನೃತ್ಯ ಕಲಿತರು. ಪ್ರಶಾಂತ್ ಪಾಶ್ಚಾತ್ಯ ಸಂಗೀತ ಕಲಿತರೆ, ರೂಪೇಶ್ ರಾಜಣ್ಣಗೆ ಬೆಲ್ಲಿ ಡಾನ್ಸ್ ಹೇಳಿಕೊಟ್ಟಿದ್ದಾರೆ. ಇಬ್ಬರ ಡಾನ್ಸ್ ನೋಡಿದ ಬಿಗ್ ಬಾಸ್ ಮನೆಯ ಸದಸ್ಯರು ನಕ್ಕು ನಕ್ಕು ಸುಸ್ತಾಗಿದ್ದು ಮಾತ್ರ ಸುಳ್ಳಲ್ಲ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist