ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರತಿಪಕ್ಷ ನಾಯಕರ ಬಂಧನದ ಬಗ್ಗೆ ಪ್ರಧಾನಿ ಜೊತೆ ಮಾತನಾಡುತ್ತೇನೆ: ಶರದ್ ಪವಾರ್

Twitter
Facebook
LinkedIn
WhatsApp
WhatsApp Image 2022 12 29 at 12.50.46 PM e1672298485877 696x387 1

ನವದೆಹಲಿ: ಸಾಲಾಗಿ ಪ್ರತಿ ಪಕ್ಷ ನಾಯಕರ ಬಂಧನವು ಕೇಂದ್ರವು ಹೇಗೆ ತನ್ನ ತನಿಖಾ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆ, ಈ ವಿಷಯವನ್ನು ಪ್ರಧಾನಿಯವರನ್ನು ಕಂಡು ನೇರ ಮಾತನಾಡಲಿದ್ದೇನೆ ಎಂದು ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ- ಎನ್’ಸಿಪಿ ನಾಯಕ ಅನಿಲ್ ದೇಶಮುಖ್ ಒಂದು ವರ್ಷದ ಜೈಲು ವಾಸದ ಬಳಿಕ ಬಿಡುಗಡೆಯಾದ ಸಂದರ್ಭದಲ್ಲಿ ಶರದ್ ಪವಾರ್ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಅನಿಲ್ ದೇಶಮುಖ್, ಶಿವಸೇನೆಯ ಸಂಜಯ್ ರಾವುತ್ ಅವರಂತಹ ನಾಯಕರ ಬಂಧನಕ್ಕೆ ಅಧಿಕಾರ ದುರುಪಯೋಗದ ಹೊರತಾಗಿ ಯಾವುದೇ ಬಲವಾದ ಕಾರಣಗಳು ಇರಲಿಲ್ಲ ಎಂದು ಅವರು ದೂರಿದರು.
“ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಬಾರದು ಎನ್ನುವುದಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ನೇರವಾಗಿ ಕಂಡು ಮಾತನಾಡಲಿದ್ದೇನೆ” ಎಂದು ಪವಾರ್ ಹೇಳಿದರು.
ಅನಿಲ್ ದೇಶಮುಖ್ ಅವರು ಉದ್ದವ್ ಠಾಕ್ರೆ ಸಂಪುಟದಲ್ಲಿ ಸಚಿವರಾಗಿದ್ದರು. ಆ ಸರಕಾರವನ್ನು ದುರ್ಬಲಗೊಳಿಸಲು ಅವರನ್ನು ಬಂಧಿಸಲಾಗಿತ್ತು. ಕೊನೆಗೆ ಜೂನ್ ತಿಂಗಳಲ್ಲಿ ಅಡ್ಡ ಹಾದಿಯಿಂದ ಬಿಜೆಪಿಯು ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿದೆ ಎಂದೂ ಅವರು ಆರೋಪಿಸಿದರು.

ಭ್ರಷ್ಟಾಚಾರ ಆರೋಪದ ಮೇಲೆ ದೇಶಮುಖ್’ರನ್ನು ಬಂಧಿಸಲಾಗಿತ್ತು. ಒಂದು ವರ್ಷದ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಬಿಡುಗಡೆಯಾದ ದೇಶಮುಖ್ ಮನೆಗೆ ಹೋಗುವುದಕ್ಕೆ ಮೊದಲು ತೆರೆದ ಜೀಪಿನಲ್ಲಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿದ ಶರದ್ ಪವಾರ್ ಅವರ ಜೊತೆ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಇದ್ದರು.
ಇದಕ್ಕೆ ಮೊದಲು ಶಿವಸೇನೆ ನಾಯಕ ಸಂಜಯ್ ರಾವುತ್’ರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರು ಮೂರು ತಿಂಗಳು ಸೆರೆಮನೆಯಲ್ಲಿ ಕಳೆದು ನವೆಂಬರ್’ನಲ್ಲಿ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ. ಅವರನ್ನು ಬಂಧಿಸಿದ ಬಗ್ಗೆ ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯ ಕಠಿಣ ಶಬ್ದಗಳಿಂದ ಪ್ರಶ್ನಿಸಿತ್ತು.
ಅನಿಲ್ ದೇಶ್ ಮುಖ್ ಮತ್ತು ಸಂಜಯ್ ರಾವುತ್ ಅವರು ಇದು ಬಿಜೆಪಿಯ ದ್ವೇಷ ರಾಜಕೀಯವೇ ಹೊರತು ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದರು.
ಮಹಾರಾಷ್ಟ್ರ ಮಾತ್ರವಲ್ಲ, ಜಾರ್ಖಂಡ್ ಹಾಗೂ ದೆಹಲಿ ಪ್ರತಿ ಪಕ್ಷಗಳ ನಾಯಕರು ಕೂಡ ಮೋದಿ ಮತ್ತು ಅಮಿತ್ ಶಾರ ಸರಕಾರದಲ್ಲಿ ಇಡಿ ಮತ್ತು ಸಿಬಿಐ ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ದುರುಪಯೋಗ ಆಗುತ್ತಿದೆ ಎಂದು ಹೇಳಿದ್ದರು.
ಬಾಂಬೆ ಹೈ ಕೋರ್ಟಿನಲ್ಲಿ ಭ್ರಷ್ಟಾಚಾರ ಸಂಬಂಧ ಸಿಬಿಐ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ದೇಶಮುಖ್ ಅವರು ಜಾಮೀನು ಪಡೆದಿದ್ದಾರೆ. ತಾನು ಸುಪ್ರೀಂ ಕೋರ್ಟಿಗೆ ಹೋಗುವವರೆಗೆ 10 ದಿನ ಸಮಯಾವಕಾಶವನ್ನು ನೀಡುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟು ಸಿಬಿಐ ಮೇಲ್ಮನವಿಯನ್ನು ಚಳಿಗಾಲದ ರಜೆಯ ಬಳಿಕ ಜನವರಿಯಲ್ಲಿ ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಸದ್ಯ ದೇಶಮುಖ್ ಜಾಮೀನಿನಿಂದ ಬಿಡುಗಡೆ ಹೊಂದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ