ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!

Twitter
Facebook
LinkedIn
WhatsApp
ಪ್ರಜ್ವಲ್‌ ರೇವಣ್ಣಗ ಪ್ರಜ್ವಲ್‌ ರೇವಣ್ಣಗೆ

ಬೆಂಗಳೂರು: ಸತತ ಮೂರು ವಾರಗಳಿಂದ ವಿದೇಶದಲ್ಲಿ ಅಡಗಿಕೊಂಡು ಲೈಂಗಿಕ ದೌರ್ಜನ್ಯದ ಪ್ರಕರಣಗಳ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಬೆಂಗಳೂರಿನ ನ್ಯಾಯಾಲವು ಬಂಧನದ ವಾರೆಂಟ್‌ ಜಾರಿಗೊಳಿಸಿದೆ. ವಾರೆಂಟ್‌ ಜಾರಿ ಹಿನ್ನೆಲೆಯಲ್ಲಿ ರೇವಣ್ಣ ಅವರ ಬಂಧನಕ್ಕೆ ರೆಡ್‌ಕಾರ್ನರ್‌ ನೊಟೀಸ್‌ ಅನ್ನು ವಿಶೇಷ ತನಿಖಾ ತಂಡ ಜಾರಿಗೊಳಿಸುವ ಸಾಧ್ಯತೆಯಿದೆ. ಈಗಾಗಲೇ ಲುಕ್‌ಔಟ್‌ ನೊಟೀಸ್‌ ಹಾಗೂ ಬ್ಲೂಕಾರ್ನರ್‌ ಮಾಹಿತಿ ಜಾರಿಗೊಳಿಸಲಾಗಿತ್ತು. ಯಾವುದೇ ದೇಶದಲ್ಲಿದ್ದರೂ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜ್ವಲ್‌ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪಗಳಿ ಕೇಳಿ ಬರುವ ಮುನ್ನವೇ ಅಂದರೆ ಏಪ್ರಿಲ್‌ 27ರಂದು ದೇಶದಿಂದ ಪರಾರಿಯಾಗಿದ್ದರು. ಮರುದಿನವೇ ಪ್ರಜ್ವಲ್‌ ಹಾಗೂ ರೇವಣ್ಣ ವಿರುದ್ದ ಹೊಳೆ ನರಸೀಪುರದಲ್ಲಿ ಲೈಂಗಿಕ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ಆನಂತರ ಅತ್ಯಾಚಾರಕ್ಕೆ ಸಂಬಂಧಿಸಿ ಎರಡು ಪ್ರಕರಣಗಳು ಪ್ರಜ್ವಲ್‌ ವಿರುದ್ದ ದಾಖಲಾಗಿವೆ.

ಆನಂತರ ಎಸ್‌ಐಟಿ ರಚನೆಯಾಗಿ ನೊಟೀಸ್‌ ಜಾರಿಗೊಳಿಸಿದರೂ ಪ್ರಜ್ವಲ್‌ ಹಾಜರಾಗದೇ ಒಂದು ವಾರದ ಸಮಯವನ್ನು ವಕೀಲರ ಮೂಲಕ ಕೇಳಿಕೊಂಡಿದ್ದರು. ವಾರದ ನಂತರವೂ ಬಂದಿರಲಿಲ್ಲ. ಈಗಾಗಲೇ ನಿಯಮಾವಳಿಯಂತೆಯೇ ಲುಕ್‌ ಔಟ್‌ ನೊಟೀಸ್‌, ಬ್ಲೂಕಾರ್ನರ್‌ ನೊಟೀಸ್‌ ಜಾರಿಗೊಳಿಸಿದ್ದರೂ ಪ್ರಜ್ವಲ್‌ ಬಂದಿರಲಿಲ್ಲ. ಎರಡು ಬಾರಿ ಟಿಕೆಟ್‌ ಬುಕ್‌ ಮಾಡಿಸಿ ರದ್ದು ಮಾಡಿದ್ದು ಕಂಡು ಬಂದಿತ್ತು.

ಈ ಪ್ರಕರಣದಲ್ಲಿ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಪ್ರಜ್ವಲ್‌ ರೇವಣ್ಣ ಅವರ ಪ್ರಕರಣಗಳ ಈವರೆಗಿನ ಸ್ಥಿತಿಗತಿ ವರದಿಯನ್ನು ಕೇಳಿತ್ತು. ಬಳಿಕ ಎಸ್‌ಐಟಿ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಈಗಾಗಲೇ ಪ್ರಜ್ವಲ್‌ ಅವರಿಗೆ ನೊಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಅವರು ವಿಚಾರಣೆಗೂ ಹಾಜರಾಗಿಲ್ಲ. ಅವರ ಬಂಧನಕ್ಕೆ ಜಾರ್ಜ್‌ ಶೀಟ್‌ ಅಗತ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು ಪ್ರಜ್ವಲ್‌ ವಿರುದ್ದ ಅರೆಸ್ಟ್‌ ವಾರೆಂಟ್‌ ಜಾರಿಗೊಳಿಸಲು ಸೂಚಿಸಿತು.

ಸಿಬಿಐ ಮೂಲಕ ಮುಂದುವರಿಕೆ

ಈ ಪ್ರಕರಣದಲ್ಲಿ ಇನ್ನು ರೆಡ್‌ಕಾರ್ನರ್‌ ನೊಟೀಸ್‌ ಜಾರಿಗೊಳಿಸುವುದು ಬಾಕಿಯಿದೆ. ನ್ಯಾಯಾಲಯವು ಬಂಧನ ವಾರೆಂಟ್‌ಗೆ ಅನುಮತಿ ನೀಡಿರುವುದರಿಂದ ಈಗ ರೆಡ್‌ಕಾರ್ನರ್‌ ನೊಟೀಸ್‌ ಜಾರಿ ಸುಲಭವಾಗಲಿದೆ. ಇದಕ್ಕಾಗಿ ಸಿಬಿಐ ನೆರವನ್ನು ಕರ್ನಾಟಕ ವಿಶೇಷ ತನಿಖಾ ತಂಡ ಪಡೆಯಬೇಕಾಗುತ್ತದೆ. ಸಿಬಿಐ ಮೂಲಕವೇ ರೆಡ್‌ ಕಾರ್ನರ್‌ನೊಟೀಸ್‌ ಜಾರಿಯಾಗಲಿದೆ. ಇದಾದ ನಂತರ ಇಂಟರ್‌ ಪೋಲ್‌ ನೆರವಿನೊಂದಿಗೆ ಪ್ರಜ್ವಲ್‌ ಇರುವಿಕೆ ಪತ್ತೆ ಮಾಡಿ ಬಂಧಿಸಲು ಸಹಕಾರಿಯಾಗಲಿದೆ ಎನ್ನುವುದು ಪೊಲೀಸ್‌ ಮೂಲಗಳ ವಿವರಣೆ.

ಇದಲ್ಲದೇ ಪ್ರಜ್ವಲ್‌ ರೇವಣ್ಣ ಸಂಸದರಾಗಿರುವ ಕಾರಣದಿಂದ ಹೊಂದಿರುವ ಡಿಪ್ಲೊಮೆಟಿಕ್‌ ಪಾಸ್‌ಪೋರ್ಸ್‌ ಕೂಡ ರೆಡ್‌ಕಾರ್ನರ್‌ ನೊಟೀಸ್‌ ಜಾರಿಯಾದರೆ ರದ್ಧಾಗಲಿದೆ. ಆಗ ಪಾಸ್‌ಪೋರ್ಟ್‌ ಇಲ್ಲದೇ ಬಂಧನವೂ ಸುಲಭವಾಗಬಹುದು ಎನ್ನಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist