ಗುರುವಾರ, ಏಪ್ರಿಲ್ 25, 2024
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!-Gold Rate: ಬಹಳ ದಿನಗಳ ಬಳಿಕ ಕೊಂಚ ಇಳಿಕೆ ಕಂಡ ಚಿನ್ನದ ದರ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪೆಟ್ಟು ತಿಂದ್ದಿದ್ದೇನೆ, ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುದಿಲ್ಲ ; ಲೋಕಸಭೆಗೆ ಸ್ಪರ್ಧೆ ಮಾಡೋದಿಲ್ಲ - ವಿ. ಸೋಮಣ್ಣ

Twitter
Facebook
LinkedIn
WhatsApp
v somanna dh 1199870 1678760923 1200801 1679010494 1211486 1682042426

ಬೆಂಗಳೂರು (ಜೂ.08): ‘ನಾನು ಲೋಕಸಭಾ ಚುನಾವಣೆಯ ಆಕಾಂಕ್ಷಿ ಅಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ಮೊನ್ನೆಯಾಗಿರುವ ಪೆಟ್ಟು ತಡೆದುಕೊಂಡರೆ ಸಾಕಾಗಿದೆ. ಮತ್ತೆ ಅಂತಹ ಪೆಟ್ಟು ತಿನ್ನಲು ಹೋಗುವುದಿಲ್ಲ’ ಎಂದು ಮಾಜಿ ಸಚಿವ ವಿ.ಸೋಮಣ್ಣ ಮಾರ್ಮಿಕವಾಗಿ ನುಡಿದಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಸಂಸದ ಜಿ.ಎಸ್‌.ಬಸವರಾಜ ಅವರು ಹಿರಿಯರಾಗಿದ್ದು, ಅವರೊಂದಿಗೆ 40 ವರ್ಷದ ಒಡನಾಟ ಇದೆ. ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದಕ್ಕೆ ಅವರಿಗೆ ಋುಣಿಯಾಗಿದ್ದೇನೆ. 

ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‌ ಗಾಂದಿ, ವಾಜಪೇಯಿ, ನರೇಂದ್ರ ಮೋದಿ ಅವರ ಆಡಳಿತ ವ್ಯವಸ್ಥೆಯನ್ನು ಗಮನಿಸಿದ್ದಾರೆ. ಎಲ್ಲವನ್ನೂ ಬಲ್ಲವರಾಗಿದ್ದು, ಅವರ ಹೇಳಿಕೆಯು ದೊಡ್ಡತನ ತೋರಿಸುತ್ತದೆ ಎಂದರು. ನಾನು ಯಾವುದೇ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಲ್ಲ, ಅದರ ಅವಶ್ಯಕತೆಯೂ ಇಲ್ಲ. ನನಗೆ 72 ವರ್ಷವಾಗಿದ್ದು, ಮುಂದಿನ ತಿಂಗಳು 73 ವರ್ಷವಾಗಲಿದೆ. ಚುನಾವಣೆಗೆ ಸ್ಪರ್ಧಿಸಿದ್ದು ಒತ್ತಡ ಎನ್ನುವುದಕ್ಕಿಂತ ನಾಯಕರ ಸಂದೇಶವನ್ನು ತಲೆಮೇಲೆ ಹೊತ್ತುಕೊಂಡು ಹೋಗಿ ಕೆಲಸ ಮಾಡಿದ್ದೇನೆ. ಪುಣ್ಯಾತ್ಮರು ಒಳ್ಳೆಯ ಕೆಲಸ ಮಾಡಿದ್ದಾರೆ.

ಯಾವ ಹುತ್ತದಲ್ಲಿ ಯಾವ ಹಾವಿದೆ ಎಂಬುದನ್ನು ಹುಡುಕಲು ಆಗಲಿಲ್ಲ, ಹುಡುಕುವ ಪರಿಸ್ಥಿತಿಗೂ ಬಂದಿಲ್ಲ. ಒಬ್ಬ ಒಳ್ಳೆಯ ಕೆಲಸಗಾರನಾಗಿ ಬೆಳಗ್ಗೆ 4 ಗಂಟೆಯಿಂದ ತಡರಾತ್ರಿಯವರೆಗೆ ದುಡಿದಿದ್ದೇನೆ. ಅವರ ಮಾತನ್ನು ನಂಬಿ ಹೋಗಿದ್ದೆ. ಹೊಸಕೋಟೆಯಲ್ಲಿ ಒಂದು ಮಾತನ್ನು ಹೇಳಿದ್ದು, ಸೋಮಣ್ಣ ಗೆದ್ದರೆ ರಾಜ್ಯದಲ್ಲಿ ಪಕ್ಷವು ಒಂದು ದೊಡ್ಡ ಸ್ಥಾನ ನೀಡಲಿದೆ ಎಂದಿದ್ದರು. ಆದಾದ ಮೇಲೆ ನಡೆದ ಕೆಲವು ನೋವುಗಳು ಎಂದಿಗೂ ಮಾಸುವುದಿಲ್ಲ. ಭಗವಂತ ಉತ್ತರ ನೀಡುತ್ತಾನೆ. ಕಾದು ನೋಡೋಣ, ಪಕ್ಷದ ಸಂದೇಶ ದೊಡ್ಡದು ಎಂದು ಬೇಸರ ವ್ಯಕ್ತಪಡಿಸಿದರು.

ವರುಣ ಮತ್ತು ಚಾಮರಾಜನಗರದಲ್ಲಿ ನನ್ನನ್ನು ಸೋಲಿಸಬೇಕೆಂದು ‘ಅಲ್ಲಿಂದಲೇ’ ನಿರ್ದೇಶನ ಬಂದಿತ್ತು ಎಂದು ಯಾರ ಹೆಸರೆತ್ತದೆ ಮಾಜಿ ಸಚಿವ ವಿ.ಸೋಮಣ್ಣ ತಮ್ಮ ಎರಡೂ ಕ್ಷೇತ್ರಗಳಲ್ಲಿ ಪರಾಭವಕ್ಕೆ ಕಾರಣ ತೆರೆದಿಟ್ಟು, ನನ್ನ ಸೋಲಿಗೆ ನನ್ನ ಸಮುದಾಯದವರೇ, ಅದರಲ್ಲೂ ಮುಂಚೂಣಿ ನಾಯಕರೇ ಕಾರಣ ಎಂದು ಮಾರ್ಮಿಕವಾಗಿ ಹೇಳಿದರು. ನಗರದಲ್ಲಿ ಆಯೋಜಿಸಿದ್ದ ವರುಣಾ ಕ್ಷೇತ್ರದ ಬಿಜೆಪಿ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಸೋಲಿಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಯಾರೆಂಬು ದೂ ನನಗೆ ಗೊತ್ತಿದೆ.

ನಂಬಿದವರೇ ನನ್ನ ಕತ್ತು ಕೊಯ್ದರು. ಅದರ ಬಗ್ಗೆ ಬರೆದರೆ ಒಂದು ಪುಸ್ತಕವಾದೀತು. ಚಾಮುಂಡೇಶ್ವರಿ ತಾಯಿಯೇ ನನ್ನ ವಿರುದ್ಧದ ಅಪಪ್ರಚಾರವನ್ನು ನೋಡಿ ಕೊಳ್ಳುತ್ತಾಳೆ ಎಂದು ದುಖಿಃತರಾಗೇ ಹೇಳಿದರು. ಇನ್ನು, ಚಾಮರಾಜಜಗರದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ರಾಜಕೀಯ ನಿಂತ ನೀರಲ್ಲ, ನನ್ನ ಸೋಲಿನ ಕಾರಣವೂ ಮುಂದೊಂದು ದಿನ ತಾನೇ ಹೊರಗೆ ಬರುತ್ತದೆ ಎಂದರಲ್ಲದೇ, ಬಿ.ವೈ.ವಿಜಯೇಂದ್ರ ಆಪ್ತ ರುದ್ರೇಶ್‌ ವಿರುದ್ಧವೂ ಇದೇ ವೇಳೆ ಕಿಡಿಕಾರಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ