ಪುತ್ತೂರು : ಸಾನಿಯಾ ಅಯ್ಯರ್ ಕೈ ಹಿಡಿದು ಎಳೆದು, ಧರ್ಮದೇಟು ತಿಂದ ಅಭಿಮಾನಿ
ಪುತ್ತೂರಿನ (Puttur) ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆದ 30ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ (Kambala)ಕೂಟದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ನ ಕೈ ಹಿಡಿದು ಎಳೆದ ಪ್ರಸಂಗ ನಡೆದಿದೆ. ಶನಿವಾರ ರಾತ್ರಿ ನಡೆದ ಕಂಬಳ ಕೂಟಕ್ಕೆ ಸಾನಿಯಾ (Sanya Iyer) ಅತಿಥಿಯಾಗಿ ಆಗಮಿಸಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು’ ಎಂದು ಘೋಷಣೆಯೊಂದಿಗೆ ಮಾತುಗಳನ್ನು ಆಡಿದ್ದರು. ಈ ಮಾತುಗಳೇ ಹುಡುಗರನ್ನು ಕೆರಳಿಸಿದ್ದವು.
ಸಾನಿಯಾ ‘ಐ ಲವ್ ಯೂ ಪುತ್ತೂರು’ ಎಂದು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಯೇ ಕೂತಿದ್ದ ಅಭಿಮಾನಿ ‘ಐ ಲವ್ ಯೂ ಸಾನಿಯಾ’ (I Love You Sanya) ಎಂದು ಪ್ರತಿಯಾಗಿ ಕೂಗಿದ್ದಾನೆ. ಐದಾರು ಬಾರಿ ಈ ರೀತಿ ಆಗಾಗ್ಗೆ ಹೇಳಿದ್ದಾನೆ. ಸಾನಿಯಾ ಭಾಷಣ ಮುಗಿದಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಆ ಅಭಿಮಾನಿಯು ಸೆಲ್ಫಿ ನೆಪದಲ್ಲಿ ಬಂದು ಸಾನಿಯಾರ ಕೈ ಹಿಡಿದಿದ್ದಾನೆ. ಸಾನಿಯಾ ಕೋಪದಿಂದಲೇ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ.
ಆ ಹುಡುಗನ ಈ ನಡೆ ಅಲ್ಲಿದ್ದವರಿಗೆ ಕೋಪ ತರಿಸಿದೆ. ಅಲ್ಲದೇ ಆ ಹುಡುಗ ನಶೆಯಲ್ಲಿ ಇದ್ದ ಎಂದು ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವನಿಗೆ ಧರ್ಮದೇಟು ನೀಡಿದ್ದಾರೆ. ಕಂಬಳದಿಂದಲೇ ಅವನನ್ನು ಆಚೆ ಕಳುಹಿಸಿದ್ದಾರೆ. ಧರ್ಮದೇಟು ತಿಂದ ಆ ಹುಡುಗ ಅಳುತ್ತಲೇ ಮನೆಯತ್ತ ಸಾಗಿದ ಎನ್ನುತ್ತಾರೆ ಸ್ಥಳೀಯರು. ಆದರೆ , ಈ ಕುರಿತು ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ ಎನ್ನುತ್ತಾರೆ ಪೊಲೀಸ್ ಮೂಲಗಳು.