ಪುತ್ತೂರು: ವಿವಾಹಿತ ಮಹಿಳೆಯೊಂದಿಗಿನ ಅಕ್ರಮ ಸಂಬಂಧ ಬಹಿರಂಗ; ವ್ಯಕ್ತಿ ಆತ್ಮಹತ್ಯೆಗೆ ಶರಣು!
ಪುತ್ತೂರು: ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ಅಕ್ರಮ ಸಂಬಂಧ ಬಹಿರಂಗವಾದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ವಜ್ರಮೂಲೆ ದಿ. ಕೊರಗರವರ ಪುತ್ರ 50 ವರ್ಷದ ಶೀನಪ್ಪ ಎಂದು ಗುರುತಿಸಲಾಗಿದೆ.
ತನ್ನ ಗಂಡನ ಜೊತೆ ಯಾಕೆ ಮಾತನಾಡುತ್ತೀಯಾ ಎಂದು ನೆರೆಮನೆಯ ಮಹಿಳೆಗೆ ಶೀನಪ್ಪ ಪತ್ನಿ ಕೇಳಿದ್ದಾರೆ. ಈ ವೇಳೆ ಅಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಗಲಾಟೆ, ಕೂಗಾಟ ಜೋರಾಗಿದೆ. ಏನೆಂದು ನೋಡಲು ಶೀನಪ್ಪ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ತನ್ನ ಪತ್ನಿ ಜೊತೆ ಮಾತಿನ ಚಕಮಿಕಿ ನಡೆದಿದೆ. ಅಲ್ಲದೆ ಪತ್ನಿಗೆ ಹೊಡೆಯಲು ಮುಂದಾಗಿದ್ದಾನೆ. ಈ ವೇಳೆ ಪಕ್ಕದ ಮನೆಯ ಮಹಿಳೆ ಇದನ್ನು ತಡೆದಿದ್ದಾಳೆ.
ಈ ಘಟನೆಯಿಂದ ಕೋಪಗೊಂಡಿದ್ದ ಶೀನಪ್ಪ ನಿನ್ನೆ ರಾತ್ರಿ ಮನೆಯಿಂದ ಹೊರಹೋಗಿದ್ದಾರೆ. ರಾತ್ರಿ 10 ಗಂಟೆಯಾದರು ಪತಿ ಮನೆಗೆ ಬಾರದಿದ್ದರಿಂದ ಸಂಶಯಗೊಂಡು ಹುಡುಕಾಡಲು ಮುಂದಾಗಿದ್ದಾರೆ. ಈ ವೇಳೆ ತಮ್ಮ ತೋಟದ ಪಕ್ಕದಲ್ಲಿರುವ ಮಾವಿನ ಮರದ ಬಳಿ ಹೋಗಿ ನೋಡಿದಾಗ ಶೀನಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಸಂಬಂಧ ಶೀನಪ್ಪ ಪತ್ನಿ ದೂರು ನೀಡಿದ್ದು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.