ಚಿಕ್ಕಮಗಳೂರು: ಭದ್ರಾ ವನ್ಯಜೀವಿ ವ್ಯಾಪ್ತಿಯ ಮುತ್ತೋಡಿ ವಿಭಾಗದಲ್ಲಿ ಪುಟ್ಟ ಮರಿಯೊಂದಿಗಿದ್ದ ಆನೆಗಳ ಸಮೀಪ ಕಿಡಿಗೇಡಿಗಳು ಜೆಸಿಬಿ ನುಗ್ಗಿಸಿ ಬೆದರಿಸಿ ಘಾಸಿಗೊಳಿಸಿದ ಘಟನೆ ನಡೆದಿದೆ.
ಭದ್ರಾ ವನ್ಯಜೀವಿ ವಿಭಾಗದಲ್ಲಿ ಕಾರ್ಯನಿಮಿತ್ತ ತೆರಳುತ್ತಿದ್ದ ಜೆಸಿಬಿಗೆ ಮರಿಯೊಂದಿಗಿದ್ದ ಆನೆ ಎದುರಾಗಿದೆ. ಈ ವೇಳೆ ಚಾಲಕ ಆನೆಯ ತೀರಾ ಸಮೀಪಕ್ಕೆ ಜೆಸಿಬಿ ತೆಗೆದುಕೊಂಡು ಹೋಗುವ ಮೂಲಕ ಆನೆಗಳನ್ನು ಭೀತಿಗೊಳಿಸಿದ್ದಾನೆ.
ಆನೆಗಳು ಬೆದರುವ ದೃಶ್ಯವನ್ನ ಮೊಬೈಲ್ ನಲ್ಲಿ ಸೆರೆಹಿಡಿದು ಶೇರ್ ಮಾಡಿಕೊಳ್ಳುವ ಮೂಲಕ ವಿಕೃತವಾಗಿ ವರ್ತಿಸಿರುವ ಕಿಡಿಗೇಡಿ ಯುವಕರ ವರ್ತನೆಗೆ ಪರಿಸರವಾದಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾಬರಿಗೊಂಡ ಆನೆಗಳು ಮರಿಯನ್ನು ರಕ್ಷಿಸಿಕೊಳ್ಳಲು ಜೆಸಿಬಿಗೆ ಅಡ್ಡ ನಿಂತು ಘೀಳಿಡುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ವನ್ಯಜೀವಿಗಳನ್ನು ಸುಖಾಸುಮ್ಮನೆ ಹಿಂಸಿಸಿ ವಿಕೃತ ಆನಂದ ಪಡೆಯುವ ಇಂತಹ ಘಟನೆಗಳು ತೀವ್ರ ಖಂಡನೀಯ. ಈ ಕುರಿತು ಸೂಕ್ತ ತನಿಖೆ ನಡೆಸಿ, ತಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಅಷ್ಟಕ್ಕೂ ವನ್ಯಜೀವಿ ವಿಭಾಗದೊಳಗೆ ಜೆಸಿಬಿಗಳಿಗೆ ಏನು ಕೆಲಸ? ಮಲೆನಾಡಿನ ಉದ್ದಕ್ಕೂ ಅರಣ್ಯ ಇಲಾಖೆ ಲೋಕೋಪಯೋಗಿ ಇಲಾಖೆಯ ಶಾಖೆಯಂತೆ ಕಾರ್ಯನಿರ್ವಹಿಸುತ್ತಿದೆ. ಅರಣ್ಯ ಸಂರಕ್ಷಣೆಗಿಂತ ಇತರ ಚಟುವಟಿಕೆಗಳ ಮೇಲೆಯೇ ಅರಣ್ಯಾಧಿಕಾರಿಗಳಿಗೆ ಆಸಕ್ತಿ ಹೆಚ್ಚಾಗಿರುವುದು ದುರಂತ.
ಮನುಷ್ಯ ಎಷ್ಟೇ ಬುದ್ಧಿಜೀವಿ ಎಂದೆನಿಸಿಕೊಂಡರೂ ಆತ ತೋರಿಸುವ ದುರ್ಬುದ್ಧಿ ಮಿಕ್ಕೆಲ್ಲಾ ಜೀವಿಗಳ ಬದುಕನ್ನೂ ಹದಗೆಡಿಸಬಲ್ಲದು. ಕೆಲವರು ತಮ್ಮ ದಾಷ್ಟ್ಯಕ್ಕೆ ಮೂಕ ಪ್ರಾಣಿಗಳನ್ನು ಹಿಂಸಿಸುವ ಪರಿ ನೋಡಿದರೆ ಸಂಕಟವಾಗುತ್ತದೆ. ಪ್ರಾಣಿಗಳಿಗೂ ಕುಟುಂಬವಿರುವುದಿಲ್ಲವೇ? ವನ್ಯ ಜೀವಿಗಳ ರಕ್ಷಣೆಗೆಂದೇ ಅಭಯಾರಣ್ಯಗಳನ್ನು ಮಾಡಲಾಗಿದೆ. ದಿನದಿಂದ ದಿನಕ್ಕೆ ವನ್ಯಜೀವಿ-ಮಾನವ ಸಂಘರ್ಷಗಳು ಹೆಚ್ಚಾಗುತ್ತಿವೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist