ಪುಂಜಾಲಕಟ್ಟೆ :ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಪೋಷಕರ ಹಾಗೂ ದಾನಿಗಳ ನೆರವಿನಿಂದ ಅತ್ಯಾಧುನಿಕ ಶೌಚಾಲಯ ನಿರ್ಮಾಣ. ಜಿಲ್ಲೆಯಲ್ಲೇ ಅತಿ ದೊಡ್ಡ ಶೌಚಾಲಯ!

ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಸರಕಾರಿ ಶಾಲೆ ಎಂದರೆ ಪೋಷಕರು ದೂರ ಸರಿಯುತ್ತಿದ್ದಾರೆ ಹಾಗೂ ಮಕ್ಕಳ ದಾಖಲಾತಿ ತೀರ ಕಡಿಮೆ. ಶಿಕ್ಷಣದಲ್ಲಿ ಬದಲಾವಣೆ ಬಂದ ನಂತರ ಅದೆಷ್ಟೋ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮಕ್ಕೆ ಮುಖ ಮಾಡಿದ್ದಾರೆ. ಇಂತಹದರಲ್ಲಿ ಪುಂಜಾಲಕಟ್ಟೆ ಶಾಲೆ ಇದಕ್ಕೆ ತದ್ವಿರುದ್ಧ. ಸರ್ಕಾರಿ ಶಾಲೆ ಒಂದರಲ್ಲಿ ಎಲ್ಲರೂ ಒಗ್ಗಟ್ಟಾಗಿ ಸೇರಿ ಶಾಲೆಗೆ ಗುಣಮಟ್ಟದ ಅತ್ಯಾಧುನಿಕ ಶೌಚಾಲಯ ನಿರ್ಮಾಣ ವನ್ನು ಮಾಡಿ ಇಂದು ಉದ್ಘಾಟನೆಯನ್ನು ಮಾಡಲಾಗಿದೆ . ಅದ್ಯಾವುದಂತೀರ ಇಲ್ಲಿದೆ ವರದಿ. ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯಲ್ಲಿ ಸರ್ಕಾರಿ ಶಾಲೆಯು ಆರಂಭವಾಗಿ 90 ವರ್ಷಕ್ಕೂ ಹೆಚ್ಚು ಇತಿಹಾಸ ಒಂದಿದೆ. ಅದೆಷ್ಟೋ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿ ಬದುಕನ್ನು ರೂಪಿಸಿದ್ದಾರೆ. ಇಂತಹ ಶಾಲೆಯಲ್ಲಿ ಪೋಷಕರು, ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳ ನೆರವಿನಿಂದ 14 ಲಕ್ಷ ವೆಚ್ಚದ ಸುಮಾರು 1100 ವಿದ್ಯಾರ್ಥಿಗಳು ಹೊಂದಿರುವ ಶಾಲೆಗೆ 40 ಶೌಚದ ವ್ಯವಸ್ಥೆಯನ್ನು ಸರ್ಕಾರದ ನೆರವಿಲ್ಲದೆ ಇಂದು ಉದ್ಘಾಟನೆ ಮಾಡಲಾಗಿದೆ.

ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪೋಷಕರ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲ್ಪಟ್ಟ ನಮ್ಮ ಶೌಚಾಲಯ”ದ ಉದ್ಘಾಟನೆ ಕಾರ್ಯಕ್ರಮ ಜು.14 ರಂದು ಶಾಲಾ ವಠಾರದಲ್ಲಿ ನಡೆಯಿತು. ಮಡಂತ್ಯಾರು ರೋಟರಿ ಕ್ಲಬ್ ನ ಅಧ್ಯಕ್ಷ, ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ್ ರಾವ್ ದೀಪ ಬೆಳಗಿಸಿ, ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಕೆ ಪಿ ಎಸ್ ಪ್ರಾಥಮಿಕ ಶಾಲೆಯ ಪ್ರಾಧ್ಯಾಪಕರಾದ ಸುರೇಶ್ ಶೆಟ್ಟಿ ಅವರ ವಿಶೇಷ ಶ್ರಮ ಹಾಗೂ ಮುಂದಾಲೋಚನೆ ಯ ಪ್ರಯುಕ್ತ ಈ ಶೌಚಾಲಯ ನಿರ್ಮಾಣಗೊಂಡಿದೆ. ವಿಶೇಷ ಆಸಕ್ತಿಯಿಂದ ಶೌಚಾಲಯದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿದ ಸುಧಾಕರ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಪ್ರಭಾ, ಉಪಾಧ್ಯಕ್ಷೆ ಸಂಗೀತ ಶೆಟ್ಟಿ, ಬಿ.ಇ.ಓ ವಿರೂಪಾಕ್ಷಪ್ಪ, ಕೆ.ಪಿ.ಎಸ್.ಪ್ರಾಂಶುಪಾಲರು ಡಾ.ಸರೋಜಿನಿ ಆಚಾರ್, ಕೆ.ಪಿ.ಎಸ್.ಹೈಸ್ಕೂಲ್ ಉಪಪ್ರಾಂಶುಪಾಲ ಉದಯ್ ಕುಮಾರ್ ಬಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ ಪ್ರಸಾದ್ ಸಂಪಿಗೆತ್ತಾಯ, ಡಾಕ್ಟರ್ ಗುರುಪ್ರಸಾದ್, ಉದ್ಯಮಿ ಗೋವರ್ಧನ ಬಾಳಿಗ, ನಿವೃತ್ತ ಅಂಚೆ ಮಾಸ್ಟರ್ ಮೋನಪ್ಪ ಶಾಲಾ ನಿವೃತ್ತ ಶಿಕ್ಷಕ ಮೋನಪ್ಪ ಜೆ.ಸಿ.ಐ.ಮಂಡತ್ಯಾರ್ ನ ಅಧ್ಯಕ್ಷ ಅಶೋಕ್, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜ್ ಶೇಖರ್ ಶೆಟ್ಟಿ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ನೆಲ್ವಿಸ್ಟರ್ ಪಿಂಟೊ,, ಪಿಲಾತಬೆಟ್ಟು ಸೊಸೈಟಿಯ ನಿವೃತ್ತ ಮಂಜಪ್ಪ ಮೂಲ್ಯ, ಸೇವ್ ಲೈಫ್ ಟ್ರಸ್ಟ್ ಮಂಗಳೂರಿನ ಅರ್ಜುನ್ ಭಂಡಾರ್ಕರ್, ಮುರುಘೇಂದ್ರ ಮಂಡಳಿಯ ಅಧ್ಯಕ್ಷ ಮಂಡತ್ಯಾರು ಗ್ರಾ.ಪಂ.ಸದಸ್ಯ ವಿಶ್ವನಾಥ್, ಪುನೀತ್, ಮಾಲಾಡಿ ಗ್ರಾ.ಪಂ.ಸದಸ್ಯ ಸಿ.ಆರ್.ಪಿ.ಚೇತಾನ, ಕುಶಾಲ್, ದಿವಾಕರ ಶೆಟ್ಟಿ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ,ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಿಇಒ ವಿರೂಪಾಕ್ಷಪ್ಪ ಮಾತನಾಡಿ ,ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಸಾಲ ವಿಭಾಗದಲ್ಲಿ ಇದು ಅತಿ ದೊಡ್ಡ ಶೌಚಾಲಯ ಎಂದು ಹೇಳಿದರು .ಪೋಷಕರಿಗೆ ಹಾಗೂ ದಾನಿಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಶೌಚಾಲಯಕ್ಕೆ ಕೊಡುಗೆ ನೀಡಿದ ಎಲ್ಲಾ ದಾನಿಗಳನ್ನು ಗುರುತಿಸಲಾಯಿತು. ಕೆಪಿಎಸ್ ಹೈಸ್ಕೂಲು ವಿಭಾಗದ ಉಪ ಪ್ರಾಂಶುಪಾಲರು ಮಾತನಾಡಿ, ಪ್ರಾಥಮಿಕ ವಿಭಾಗದಲ್ಲಿ 1100 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು. ಪೋಷಕರು, ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲ ಅಭಿವೃದ್ಧಿ ಸಮಿತಿಯ ಸದಸ್ಯರ ಸಹಕಾರದಿಂದ ಇದು ಸಾಧ್ಯ ಎಂದರು..
98 ವರ್ಷಗಳ ಹಳೆಯ ಶಾಲೆ ಇದು. 2025ರಲ್ಲಿ ಶತಮಾನೋತ್ಸವವನ್ನು ಪೂರೈಸಲಿದೆ. ಪ್ರಸ್ತುತ ಕೆಪಿಎಸ್ ಪಂಜಾಲ್ಕಟ್ಟೆ ಶಾಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮ ದಲ್ಲಿ ಶಿಕ್ಷಣ ನೀಡಲಾಗುತ್ತದೆ.
ಶೌಚಾಲಯ ಸುಮಾರು 70 ಪಿಟ್ ಉದ್ದವಿದ್ದು 20 ಪೀಟ್ ಅಗಲವಿದೆ ಹಾಗೂ ಅತ್ಯಾಧುನಿಕ ಟೈಲ್ಸ್ ಹಾಗೂ ಮಾರ್ಬಲ್ಸ್ ನಿಂದ ನಿರ್ಮಿಸಲ್ಪಟ್ಟಿದೆ ವಿದ್ಯಾರ್ಥಿನಿಯರಿಗೆ ನ್ಯಾಪ್ಕಿನ್ ಬಾರ್ನರಿನ ವ್ಯವಸ್ಥೆ ಮಾಡಲಾಗಿದೆ. ಹುಡುಗಿಯರಿಗೆ 23 ಹಾಗೂ ಹುಡುಗರಿಗೆ 23 ಶೌಚಾದ ವ್ಯವಸ್ಥೆ ಇದ್ದು ಕೈ ತೊಳೆಯಲು ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 14 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಪೋಷಕರು ಊರ ಬಾಂಧವರು ಸಂಘಟನೆಯವರು ಶ್ರಮದಾನದ ಮೂಲಕ ಉಚಿತವಾಗಿ ಕೆಲಸ ಕಾರ್ಯವನ್ನು ನಿರ್ವಹಿಸಿದ್ದಾರೆ. ಬಿಸಿಊಟ ಹಾಗೂ ಶೌಚಾಲಯದ ಹೊರಗಡೆ ಇಂಟರ್ಲಾಕ್ ಅಳವಡಿಸಿದ್ದು ಶಾಲೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ.