
ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ (PSI Recruitment scam) ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ (PSI) ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರಿರುವ ಕೆಲವರು ನಾಪತ್ತೆಯಾಗಿದ್ದು, ಹಲವರು ನಾಪತ್ತೆಯಾದ ಅಭ್ಯರ್ಥಿಗಳಿಗಾಗಿ ಸಿಐಡಿ ಶೋಧ ಕಾರ್ಯ ಮುಂದುವರೆದಿದೆ. ಬಂಧಿತ ಕಿಂಗ್ಪಿನ್ಗಳು ಹಲವು ಅಭ್ಯರ್ಥಿಗಳ ಹೆಸರು ಹೇಳಿದ್ದರು. ಪರೀಕ್ಷಾ ಅಕ್ರಮಕ್ಕೆ ನೆರವು ನೀಡಿದ್ದಾಗಿ ಕಿಂಗ್ಪಿನ್ಗಳು ಹೇಳಿದ್ದರು. ಕಿಂಗ್ಪಿನ್ಗಳು ನೀಡಿರುವ ಮಾಹಿತಿ ಮೇರೆಗೆ ಪೊಲೀಸರು ಶೋಧ ಮಾಡಲಾಗುತ್ತಿದೆ. ಕಳೆದ 1 ತಿಂಗಳಿಂದ ಅಭ್ಯರ್ಥಿ ಶಾಂತಿಬಾಯಿ ನಾಪತ್ತೆಯಾಗಿದ್ದು, PSI ಪರೀಕ್ಷೆಯಲ್ಲಿ ಅಕ್ರಮವೆಸಗಿ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ.
ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಮತ್ತೊಂದು ಕಿಲಾಡಿ ಮುಖ ಅನಾವರಣವಾಗಿದ್ದು, ಆರೋಪ ಬಂದ್ರೆ ಅದರಿಂದ ಹೊರಬರಲಿಕ್ಕೆ ಮಾಸ್ಟರ್ ಐಡಿಯಾ ರೂಪಿಸಲಾಗಿದೆ. ತನ್ನ ಮೂರ್ನಾಲ್ಕು ಸಹಚರರ ಹೆಸರನ್ನು ಪೊಲೀಸರಿಗೆ ನೀಡುತ್ತಿದ್ದ ಕಿಲಾಡಿ ರುದ್ರಗೌಡ, ಆತನ ಮೇಲೆ ಆರೋಪವಿದ್ರು, ಮಾಡಿದವರು ಬೇರೆ ಇದ್ದಾರೆ ಅಂತ ಹೇಳುತ್ತಿದ್ದ. ಅದಕ್ಕಾಗಿಯೇ ಮೂರ್ನಾಲ್ಕು ಜನರನ್ನು ಇಟ್ಟುಕೊಂಡಿದ್ದ. ಇವರು ರುದ್ರಗೌಡ ಪಾಟೀಲ್ಗಾಗಿ ಜೈಲಿಗೆ ಹೋಗಲು ಕೂಡಾ ಸಿದ್ದವಾಗಿರುತ್ತಿದ್ದರು. ಅವರ ಖರ್ಚು ವೆಚ್ಚಗಳನ್ನು ರುದ್ರಗೌಡ ಪಾಟೀಲ್ ತಾನೇ ನೋಡಿಕೊಳ್ಳುತ್ತಿದ್ದ. ಪೊಲೀಸರ ಜೊತೆಯೇ ಡೀಲ್ ಕುದುರಿಸಿ, ಕೇಸ್ನಿಂದ ಹೊರಬರ್ತಿದ್ದ. ಈ ಹಿಂದೆ ನಡೆದ ಅನೇಕ ಪರೀಕ್ಷಾ ಅಕ್ರಮದ ವೇಳೆ ರುದ್ರಗೌಡ ಪಾಟೀಲ್ ಹೆಸರು ಕೇಳಿ ಬಂದಿತ್ತು. ಆದ್ರು ತನ್ನ ಚಾಲಾಕಿ ಐಡಿಯಾ ಬಳಸಿ ಪ್ರಕರಣದಲ್ಲಿ ತನ್ನ ಹೆಸರು ಬರದಂತೆ ರುದ್ರಗೌಡ ಪಾಟೀಲ್ ನೋಡಿಕೊಂಡಿದ್ದ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist