ಮುಂಬೈ: ಮಹಾರಾಷ್ಟ್ರದ (Maharashtra) ಸೊಲ್ಲಾಪುರ ಜಿಲ್ಲೆಯ ಮಲ್ಶಿರಾಸ್ ತಾಲೂಕಿನ ಅಕ್ಲುಜ್‌ನಲ್ಲಿ ಐಟಿ ಎಂಜಿನಿಯರ್ (IT Engineer) ಆಗಿರುವ ಅವಳಿ ಸಹೋದರಿಯರಿಬ್ಬರು ಒಬ್ಬನೇ ವ್ಯಕ್ತಿಯನ್ನು ಮದುವೆಯಾದರು (Marriage). ಇದೀಗ ಮದುವೆಯಾದ ಮನ್ಮಥನಿಗೆ ಜೈಲಿನ ಭೀತಿ ಎದುರಾಗಿದೆ.
ಅವಳಿ ಸಹೋದರಿಯರನ್ನ ವರಿಸಿದ್ದ ಮಲಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಮದುವೆ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೀಡಿಯೋ ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು (Police) ಅತುಲ್ ವಿರುದ್ಧ ದ್ವಿಪತ್ನಿತ್ವದ ಆರೋಪ ಹೊರಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, 7 ವರ್ಷ ಶಿಕ್ಷೆಗೆ ಗುರಿಯಾಗಬಹುದು. ಅತುಲ್ ವಿರುದ್ಧ ಐಪಿಸಿ ಸೆಕ್ಷನ್ 494 (ಸಂಗಾತಿ ಜೀವಂತವಾಗಿರುವಾಗ ಮತ್ತೆ ಮದುವೆಯಾಗುವುದು) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಶಿರೀಶ್ ಸರ್ದೇಶಪಾಂಡೆ ತಿಳಿಸಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ (National Women’s Commission)ಮತ್ತು ಮಹಾರಾಷ್ಟ್ರ ಮಹಿಳಾ ಸಂಘ ಸಂಸ್ಥೆಗಳು ಕೂಡ ಮೂವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿವೆ.
ಏನಿದು ಮ್ಯಾರೇಜ್ ಸ್ಟೋರಿ?
ಹೌದು ಇತ್ತೀಚೆಗಷ್ಟೇ ಐಟಿ ಎಂಜಿನಿಯರ್‌ಗಳಾದ (IT Engineer) ಅವಳಿ ಸಹೋದರಿ ಪಿಂಕಿ ಮತ್ತು ರಿಂಕಿ ಪ್ರಸ್ತುತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ರಿಂಕಿ ಮತ್ತು ಪಿಂಕಿ ಬಾಲ್ಯದಿಂದಲೂ ಒಟ್ಟಿಗೆ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಇಬ್ಬರಿಗೂ ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವಿರಲಿಲ್ಲ. ಇದರಿಂದಾಗಿ ಮದುವೆ ಆಗುವುದಾದರೇ ಇಬ್ಬರು ಒಂದೇ ವ್ಯಕ್ತಿಯನ್ನು ಮದುವೆಯಾಗಬೇಕು ಎಂದು ನಿರ್ಧರಿಸಿದ್ದರು.
ಮಲ್ಶಿರಾಸ್ ತಾಲೂಕಿನ ನಿವಾಸಿ ಅತುಲ್ ಉತ್ತಮ್ ಔತಾಡೆ ಎಂಬಾತ ಇವರಿಬ್ಬರಿಗೂ ಪರಿಚಯವಾಗಿದ್ದ. ಅದೇ ಸಮಯಕ್ಕೆ ಪಿಂಕಿ ಮತ್ತು ರಿಂಕಿಯ ತಂದೆಯು ಮರಣ ಹೊಂದಿದ್ದು, ತಾಯಿಯು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಳು. ಈ ವೇಳೆ ರಿಂಕಿ ಮತ್ತು ಪಿಂಕಿಯ ಸಹಾಯಕ್ಕೆ ಅತುಲ್ ಧಾವಿಸುತ್ತಿದ್ದ. ಇದೇ ಪರಿಚಯ ಪ್ರೀತಿಗೆ ತಿರುಗಿ ಮೂವರು ಮದುವೆ ಆಗಲು ನಿರ್ಧರಿಸಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ಮದುವೆ ಆದರು.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist