ಬುಧವಾರ, ಏಪ್ರಿಲ್ 24, 2024
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!-ಗುಣಮಟ್ಟದ ಉದ್ದೇಶದಿಂದ MDH ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರೀಕ್ಷೆಗೆ ಮುಂದಾದ FSSAI..!-ನಾನು ಯಾವುದೇ ಉಚ್ಛಾಟನೆಗೆ ಹೆದರುವುದಿಲ್ಲ; ಕೆಎಸ್ ಈಶ್ವರಪ್ಪ-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ.!-ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಆಗ್ರಹ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪಾನ್ - ಆಧಾರ್ ಲಿಂಕ್ ಅವಧಿ ಜೂನ್ 30 ರವರೆಗೆ ವಿಸ್ತರಣೆ

Twitter
Facebook
LinkedIn
WhatsApp
dead body1651226556 7

ನವದೆಹಲಿ (ಮಾ.28): ಪಾನ್‌ ಕಾರ್ಡ್‌ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು 2023ರ ಜೂನ್ 30 ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಮಂಗಳವಾರ ಹೊರಡಿಸಲಾದ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದೆ. ಪ್ರಸ್ತುತ ಇರುವ ಗಡುವು ಮಾರ್ಚ್‌ 31ಕ್ಕೆ ಅಂತ್ಯಗೊಳ್ಳಲಿದೆ. ಆದರೆ, ಇನ್ನೂ ಸಾಕಷ್ಟು ಜನರು ಪಾನ್‌ ಕಾರ್ಡ್‌ ಜೊತೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಲ್ಲ ಹಾಗಾಗಿ ಈ ನಿರ್ಧಾರ ಮಾಡಲಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ ಪ್ಯಾನ್ ಕಾರ್ಡ್‌ಗಳು ಜುಲೈ 1 ರಿಂದ ನಿಷ್ಕ್ರಿಯಗೊಳ್ಳುತ್ತವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

“ಅಂತಹ PAN ಗಳ ವಿರುದ್ಧ ಯಾವುದೇ ಮರುಪಾವತಿಯನ್ನು ಮಾಡಲಾಗುವುದಿಲ್ಲ. PAN ನಿಷ್ಕ್ರಿಯವಾಗಿರುವ ಅವಧಿಗೆ ಅಂತಹ ಮರುಪಾವತಿಗೆ ಬಡ್ಡಿಯನ್ನು ಪಾವತಿಸಲಾಗುವುದಿಲ್ಲ ಮತ್ತು ಟಿಡಿಎಸ್‌ ಮತ್ತು ಟಿಸಿಎಸ್‌ ಅನ್ನು ಹೆಚ್ಚಿನ ದರದಲ್ಲಿ ಕಡಿತಗೊಳಿಸಲಾಗುತ್ತದೆ ಎಂದು ಹಣಕಾಸು ಇಲಾಖೆ ತಿಳಿಸಿದೆ. ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿದ 1 ಸಾವಿರ ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಪಾನ್‌ ಮತ್ತು ಆಧಾರ್ ಲಿಂಕ್ ಮಾಡುವುದನ್ನು ಪೂರ್ಣ ಮಾಡಬಹುದಾಗಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ 51 ಕೋಟಿಗೂ ಹೆಚ್ಚು ಪಾನ್‌ ಕಾರ್ಡ್‌ಗಳು ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಮಾಡಲಾಗಿದೆ. ಕಳೆದ ವಾರ ವಿರೋಧ ಪಕ್ಷದ ನಾಯಕರು ಪಾನ್‌-ಆಧಾರ್ ಲಿಂಕ್ ಮಾಡುವ ಗಡುವನ್ನು ವಿಸ್ತರಿಸಲು ಮತ್ತು 1,000 ರೂಪಾಯಿಗಳ ಶುಲ್ಕವನ್ನು ಮನ್ನಾ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ