ಬುಧವಾರ, ಮಾರ್ಚ್ 12, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಪಾಕಿಸ್ತಾನ ಜೈಲಿನಲ್ಲಿದ್ದ 198 ಮೀನುಗಾರರು ಬಿಡುಗಡೆ ; ಮರಳಿ ಭಾರತಕ್ಕೆ!

Twitter
Facebook
LinkedIn
WhatsApp
mcms 1

ನವದೆಹಲಿ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆಗಳ ನಡುವೆ, 198 ಭಾರತೀಯ ಮೀನುಗಾರರನ್ನು (183 ಗುಜರಾತ್‌ನವರು) ಪಾಕಿಸ್ತಾನ ಸರ್ಕಾರ ಗುರುವಾರ ತಡರಾತ್ರಿ ಕರಾಚಿಯ ಜೈಲಿನಿಂದ ಅವರ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಿದೆ.

ಗುರುವಾರ ಬಿಡುಗಡೆಯಾದ ಮೀನುಗಾರರು 500 ಭಾರತೀಯ ಕೈದಿಗಳ ಗುಂಪಿನ ಭಾಗವಾಗಿದ್ದು- 499 ಮೀನುಗಾರರು ಮತ್ತು ಒಬ್ಬ ನಾಗರಿಕ – ಅವರನ್ನು ಪಾಕಿಸ್ತಾನವು ಈ ವರ್ಷ ಜುಲೈ 3 ರೊಳಗೆ ಬಿಡುಗಡೆ ಮಾಡಿ ವಾಪಸು ಕಳುಹಿಸಲಿದೆ. ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನಿ ಮೀನುಗಾರರನ್ನು ಬಿಡುಗಡೆ ಮಾಡುವ ಮೂಲಕ ಭಾರತವು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಪಾಕಿಸ್ತಾಣ ಮೂಲದ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಒಟ್ಟಾರೆಯಾಗಿ, ಓರ್ವ ನಾಗರಿಕ ಕೈದಿ ಸೇರಿದಂತೆ 200 ಜನರನ್ನು ಗುರುವಾರ ಬಿಡುಗಡೆ ಮಾಡಬೇಕಿತ್ತು. ಆದಾಗ್ಯೂ, ಆ ನಾಗರಿಕ ಮತ್ತು ಒಬ್ಬ ಮೀನುಗಾರ ಅನುಕ್ರಮವಾಗಿ ಶನಿವಾರ ಮತ್ತು ಸೋಮವಾರ ಸಾವನ್ನಪ್ಪಿದ್ದಾರೆ. ಅವರ ಪಾರ್ಥಿವ ಶರೀರವನ್ನು ಯಾವಾಗ ಭಾರತಕ್ಕೆ ಹಿಂದಿರುಗಿಸಲಾಗುತ್ತದೆ ಎಂಬ ವಿಚಾರ ಅನಿಶ್ಚಿತವಾಗಿದೆ.

ಬಂಧಿತರು ಎಲ್ಲಿಯವರು?

ಬಿಡುಗಡೆಯಾದ 198 ಮೀನುಗಾರರಲ್ಲಿ 183 ಜನರು ಗುಜರಾತ್‌ನವರಾಗಿದ್ದು, ಮಹಾರಾಷ್ಟ್ರದ ಐವರು, ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ಉತ್ತರ ಪ್ರದೇಶದ ತಲಾ ನಾಲ್ವರು ಮತ್ತು ಆಂಧ್ರಪ್ರದೇಶದ ಒಬ್ಬರು ಮತ್ತು ಇತರ ರಾಜ್ಯದ ಒಬ್ಬರು ಸೇರಿದ್ದಾರೆ.

“ಒಬ್ಬ ನಾಗರಿಕ ಕೈದಿ, ಜುಲ್ಫಿಕರ್, ಗುರುವಾರ ಬಿಡುಗಡೆಯಾಗಬೇಕಿತ್ತು. ಆದರೆ ಅವರು ಶನಿವಾರ ಜೈಲಿನಲ್ಲಿ ನಿಧನರಾದರು. ಗುಜರಾತ್‌ನ ಒಬ್ಬ ಮೀನುಗಾರರೂ ಸೋಮವಾರ ನಿಧನರಾದರು. ಅವರಿಬ್ಬರ ಪಾರ್ಥೀವ ಶರೀರವನ್ನು ಯಾವಾಗ ಸ್ವದೇಶಕ್ಕೆ ತರಲಾಗುವುದು ಎಂಬುದರ ಕುರಿತು ಇನ್ನೂ ಯಾವುದೇ ವಿಚಾರ ಮಾತುಕತೆ ಆಗಿಲ್ಲ”ಎಂದು ಮುಂಬೈ ಮೂಲದ ಪತ್ರಕರ್ತ ದೇಸಾಯಿ ಹೇಳಿದ್ದಾರೆ.

ಇಷ್ಟೆಲ್ಲಾ ಸಮಸ್ಯೆ ಆಗೋದಕ್ಕೆ ಕಾರಣ ಗಡಿ!4ಅರೇಬಿಯನ್ ಸಮುದ್ರದಲ್ಲಿ ಕಾಲ್ಪನಿಕ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಬೌಂಡರಿ ಲೈನ್ (IMBL) ಜೋಡಣೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಭಿನ್ನಾಭಿಪ್ರಾಯಗಳನ್ನು ಹೊಂದಿವೆ. ಪಾಕಿಸ್ತಾನದ ಕಡಲ ಭದ್ರತಾ ಸಂಸ್ಥೆಯು ತನ್ನ ಪ್ರಾದೇಶಿಕ ಜಲವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪ್ರತಿ ವರ್ಷ ಕೆಲವು ನೂರು ಭಾರತೀಯ ಮೀನುಗಾರರನ್ನು ಬಂಧಿಸುತ್ತದೆ. ಮತ್ತೊಂದೆಡೆ, ಭಾರತೀಯ ಏಜೆನ್ಸಿಗಳು ಪ್ರತಿ ವರ್ಷ ಕೆಲವು ಡಜನ್ ಪಾಕಿಸ್ತಾನಿ ಮೀನುಗಾರರನ್ನು IMBL ನ ಭಾರತದ ಕಡಲ್​ಗಡಿ ದಾಟಿದ ಆರೋಪದ ಮೇಲೆ ಬಂಧಿಸುತ್ತವೆ. ಈ ವರ್ಷದ ಜನವರಿ 1 ರ ಹೊತ್ತಿಗೆ, 654 ಭಾರತೀಯ ಮೀನುಗಾರರು ಮತ್ತು 51 ಭಾರತೀಯ ನಾಗರಿಕರು ಪಾಕಿಸ್ತಾನದ ಜೈಲುಗಳಲ್ಲಿದ್ದಾರೆ. ಅದೇ ರೀತಿ 95 ಪಾಕಿಸ್ತಾನಿ ಮೀನುಗಾರರು ಮತ್ತು 339 ಪಾಕಿಸ್ತಾನಿ ನಾಗರಿಕರು ಭಾರತದ ಜೈಲುಗಳಲ್ಲಿದ್ದರು.

4ದೇಸಾಯಿ ಅವರ ಪ್ರಕಾರ, 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಅವರ ರಾಷ್ಟ್ರೀಯತೆಯನ್ನು ಪರಿಶೀಲಿಸಲಾಗಿದೆ. 631 ಜನರಲ್ಲಿ 498 ಮಂದಿಯನ್ನು ಬಿಡುಗಡೆ ಮಾಡಿ ಸ್ವದೇಶಕ್ಕೆ ಕಳುಹಿಸಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist