ಶನಿವಾರ, ಏಪ್ರಿಲ್ 20, 2024
ಬಂಟ್ವಾಳದಲ್ಲಿ ಮತ್ತೊಬ್ಬ ಬಿಲ್ಲವ ನಾಯಕನನ್ನು ಸೆಳೆದ ಬಿಜೆಪಿ. ಪುರಸಭಾ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆ!-ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

 ಪಾಕಿಸ್ತಾನದಲ್ಲಿ ಪ್ರಬಲ ಭೂಕಂಪ 9 ಸಾವು, 150ಕ್ಕೂ ಹೆಚ್ಚು ಜನರಿಗೆ ಗಾಯ

Twitter
Facebook
LinkedIn
WhatsApp
file7kz3ooflvhwsmtlldoy1679439394

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ (Pakistan) ಹಲವೆಡೆ ಪ್ರಬಲ ಭೂಕಂಪ (Earthquake) ಸಂಭವಿಸಿ 9 ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮಂಗಳವಾರ (ಮಾ.21) ರಾಜಧಾನಿ ಇಸ್ಲಾಮಾಬಾದ್​​ (Islamabad) , ಲಾಹೋರ್ (Lahore), ಪೇಶಾವರ, ರಾವಲ್ಪಿಂಡಿ ಸೇರಿ ಹಲವು ನಗರಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ. ಭೂಮಿಯ 180 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟೆರ್​ ಮಾಪಕದಲ್ಲಿ ತೀರ್ವತೆ 6.8ರಷ್ಟಿದೆ. ಗುಜ್ರಾನ್‌ವಾಲಾ, ಗುಜರಾತ್‌, ಸಿಯಾಲ್‌ಕೋಟ್‌, ಕೋಟ್‌ ಮೊಮಿನ್‌, ಮಧ್‌ ರಂಝಾ, ಚಕ್ವಾಲ್‌, ಕೊಹತ್‌ ಮತ್ತು ಗಿಲ್ಗಿಟ್‌-ಬಾಲ್ಟಿಸ್ತಾನ್‌ ಪ್ರದೇಶಗಳಲ್ಲಿಯೂ ಪ್ರಬಲ ಕಂಪನ ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಂಪನದಿಂದ ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿದ್ದಾರೆ. ಸ್ವಾತ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರೇ ಮತ್ತು 150 ಮಂದಿ ಗಾಯಗೊಂಡಿದ್ದಾರೆ, ಅವರನ್ನು ಚಿಕಿತ್ಸೆಗಾಗಿ ಸೈದು ಬೋಧನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭೂಕಂಪದ ಸಮಯದಲ್ಲಿ, ರಾವಲ್ಪಿಂಡಿಯ ಮಾರುಕಟ್ಟೆಗಳಲ್ಲಿ ಕಾಲ್ತುಳಿತ ಸಂಭವಿಸಿದೆ.

ಪಾಕಿಸ್ತಾನ ಹೊರತಾಗಿ, ಭಾರತ, ಅಫ್ಘಾನಿಸ್ತಾನ, ತುರ್ಕಮೆನಿಸ್ತಾನ್, ಕಜಕಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ ಮತ್ತು ಕಿರ್ಗಿಸ್ತಾನ್‌ನಲ್ಲಿಯೂ ಕಂಪನದ ಅನುಭವವಾಗಿದೆ ಅಂತರಾಷ್ಟ್ರೀಯ ಭೂಕಂಪನ ಕೇಂದ್ರ ಹೇಳಿದೆ. ಈ ವರ್ಷಜನವರಿಯಲ್ಲಿ ಇಸ್ಲಾಮಾಬಾದ್‌ನಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ