ಪಲಿತಾಂಶಕ್ಕೂ ಮುನ್ನವೇ ಸರ್ಕಾರ ರಚನೆಗೆ ಬಿಜೆಪಿ ಪ್ಲಾನ್? ಬಹುಮತ ಸಾಬೀತಾಗದಿದ್ದರೆ ಮತ್ತೊಮ್ಮೆ ಆಪರೇಷನ್ ಕಮಲ...!

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೂ (Karnataka Assembly Election Results) ಮೊದಲೇ ಸರ್ಕಾರ ರಚನೆಗೆ ಬಿಜೆಪಿ (BJP) ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ತಿದೆ ಎಂದು ತಿಳಿದು ಬಂದಿದೆ. ಫಲಿತಾಂಶ ಏನೇ ಬಂದರೂ ನಮ್ಮದೇ ಸರ್ಕಾರ (Government) ರಚನೆ ಆಗಬೇಕು ಎಂದು ಶತಾಗತಯ ಪ್ರಯತ್ನ ಮಾಡುತ್ತಿರುವ ಬಿಜೆಪಿ ಗೆಲ್ಲಬಹುದಾದ ಪಕ್ಷೇತರ ಅಭ್ಯರ್ಥಿಗಳ (Independent Candidate) ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿದೆಯಂತೆ. ಅದರ ಜೊತೆ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಬಂಡಾಯ ಬಾವುಟ ಹಿಡಿದು ಸ್ಪರ್ಧೆ ಮಾಡಿರೋ ನಾಯಕರ ಜೊತೆಯಲ್ಲಿಯೂ ಬಿಜೆಪಿ ಸಂಪರ್ಕ ಸಾಧಿಸುತ್ತಿದೆಯಂತೆ. ಅವಶ್ಯಕತೆ ಬಂದರೆ ಅವರ ಕ್ಷೇತ್ರಗಳಿಗೆ ತೆರಳಿ ಅಭ್ಯರ್ಥಿಗಳನ್ನು ಹೈಜಾಕ್ ಮಾಡಲು ಎಲ್ಲಾ ಸಿದ್ಧತೆಗಳನ್ನು ಬಿಜೆಪಿ ಮಾಡಿಕೊಂಡಿದೆ ಎನ್ನಲಾಗಿದೆ.
ಪಕ್ಷೇತರರಿಗೆ ಗೆಲುವಿನ ಲೀಡ್ ಸಿಗುತ್ತಿದ್ದಂತೆ ಅವರನ್ನು ಕರೆ ತರಲು ಬಿಜೆಪಿ ತಯಾರಾಗಿದೆ. ಪಕ್ಷೇತ ಅಭ್ಯರ್ಥಿಗಳನ್ನು ಅವರ ಕ್ಷೇತ್ರಕ್ಕೆ ಹೋಗಿ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಹಂಚಿಕೆ ಮಾಡಲಾಗಿದೆಯಂತೆ.ಒಂದು ವೇಳೆ ಅತಂತ್ರ ಪರಿಸ್ಥಿತಿ ಬಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆದ್ದ ಅಭ್ಯರ್ಥಿಗಳನ್ನು ಸೆಳೆಯುವ ಪ್ರಯತ್ನಕ್ಕೆ ಬಿಜೆಪಿ ಮುಂದಾಗುವ ಸಾಧ್ಯತೆಗಳಿವೆ.
ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ನಾಯಕರ ಆಗಮನ
ಒಂದು ವೇಳೆ ಅತಂತ್ರ ಸ್ಥಿತಿ ಬಂದ್ರೆ ವರಿಷ್ಠರ ಜೊತೆ ಚರ್ಚಿಸಿ ಮೈತ್ರಿ ಬಗ್ಗೆ ಮುಂದುವರಿಯಲು ಬಿಜೆಪಿ ನಿರ್ಧಾರ ಮಾಡಿದೆ. ವಿಧಾನಸಭೆ ಚುನಾವಣೆಯ ಫಲಿತಾಂಶ ಹಿನ್ನೆಲೆ ಇಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಹಲವಾರು ಆಗಮಿಸಲಿದ್ದಾರೆ.