ಪದ್ಮರಾಜ್ ಕೈಹಿಡಿಯದ ಬಿಲ್ಲವರು; ಬಿಲ್ಲವರು ಹೆಚ್ಚು ಸಂಖ್ಯೆಯಲ್ಲಿರುವ ಮೂಡಬಿದ್ರಿಯಲ್ಲಿ 28,188, ಬೆಳ್ತಂಗಡಿಯಲ್ಲಿ 23,307 ಲೀಡ್ ಪಡೆದು ಪಾರಮ್ಯ ಮೆರೆದ ಬ್ರಿಜೇಶ್ ಚೌಟ!
ಮಂಗಳೂರು: ಮಂಗಳೂರು ಲೋಕಸಭೆ ಅಭ್ಯರ್ಥಿ ಪದ್ಮರಾಜ್ ರವರನ್ನು ಬಿಲ್ಲವರ ಕೈ ಹಿಡಿಯುತ್ತಾರೆ ಎಂದು ಕಾಂಗ್ರೆಸ್ ಹೈಕಮಾಂಡ್ ಬಹುವಾಗಿ ನಂಬಿತ್ತು. ಆದರೆ ಆ ನಂಬಿಕೆಯನ್ನು ಫಲಿತಾಂಶ ಬುಡಮೇಲು ಮಾಡಿದೆ.
ಬಿಲ್ಲವರು ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬೆಳ್ತಂಗಡಿಯಲ್ಲಿ ಬಿಜೆಪಿ ಬರೋಬ್ಬರಿ 23,307 ಮತಗಳ ಲೀಡ್ ಅನ್ನು ಪಡೆದಿದೆ. ಇನ್ನೊಂದು ಬಿಲ್ಲವರ ಬಾಹಳ್ಯದ ಪ್ರದೇಶವಾದ ಮೂಡಬಿದ್ರಿಯಲ್ಲಿ 28,188 ಲೀಡನ್ನು ಬಿಜೆಪಿ ಪಡೆದಿದೆ.
ಈ ಮೂಲಕ ಬಿಲ್ಲವರ ಹೆಚ್ಚು ಜನಸಂಖ್ಯೆ ಇರುವ ಎರಡು ಪ್ರದೇಶಗಳಲ್ಲಿ ಬಿಜೆಪಿ ಆಶ್ಚರ್ಯ ಪಲಿತಾಂಶವನ್ನು ದಾಖಲಿಸಿರುವುದು ಬಿಲ್ಲವರು ಪದ್ಮರಾಜ್ ರವರನ್ನು ಕೈ ಹಿಡಿಯದೆ ಇರುವ ಸ್ಪಷ್ಟ ಸೂಚನೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಒಳ ಜಗಳ ಬಹಿರಂಗವಾಗಿತ್ತು. ಎಸ್ ಡಿ ಪಿ ಐ ಸ್ಪರ್ಧಿಸಿರಲಿಲ್ಲ. ಕಮ್ಯುನಿಸ್ಟ್, ಆಮ್ ಆದ್ಮಿ ಪಕ್ಷಗಳು ಕಾಂಗ್ರೆಸ್ ಗೆ ಬೆಂಬಲ ನೀಡಿತ್ತು. ಕಾಂಗ್ರೆಸ್ ನಾಯಕರುಗಳು ಒಗ್ಗಟ್ಟಿನ ಮಂತ್ರವನ್ನು ಜಪಿಸಿದ್ದರು. ಈ ಎಲ್ಲ ನೆಲೆಯ ಆಧಾರದ ಮೇಲೆ ಬಿಲ್ಲವರ ಮತಗಳು ಸೇರಿದರೆ ಕಾಂಗ್ರೆಸ್ ಜಯಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಮೂಡಬಿದ್ರಿ ಬೆಳ್ತಂಗಡಿ ಸೇರಿದಂತೆ ಯಾವುದೇ ಭಾಗದಲ್ಲಿ ಸ್ಪಷ್ಟವಾಗಿ ಬಿಲ್ಲವರು ಕಾಂಗ್ರೆಸ್ ಅಭ್ಯರ್ಥಿಯನ್ನು ಕೈ ಹಿಡಿಯದೆ ಇರುವುದು ಫಲಿತಾಂಶ ಬಹಿರಂಗಪಡಿಸಿದೆ.