ಪತ್ನಿ ಮಕ್ಕಳನ್ನು ಕೊಲ್ಲಲು ಹೋಗಿ ತಾನೇ 300 ಅಡಿ ಪ್ರಪಾತಕ್ಕೆ ಬಿದ್ದ NRI
Twitter
Facebook
LinkedIn
WhatsApp
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಐಷಾರಾಮಿ ಟೆಸ್ಲಾ ಕಾರಿನಲ್ಲಿ ಹೋಗುತ್ತಿದ್ದಾಗ ಉದ್ದೇಶಪೂರ್ವಕವಾಗಿಯೇ ಕಾರನ್ನು ರಭಸವಾಗಿ ಚಲಾಯಿಸಿ ಎತ್ತರದ ಪ್ರದೇಶದಿಂದ 250-300 ಅಡಿ ಕೆಳಗೆ ಬೀಳಿಸಿದ್ದಾನೆ.
ಆದರೆ ಘಟನೆಯಲ್ಲಿ ಎಲ್ಲರೂ ಸುದೈವವಶಾತ್ ಪಾರಾಗಿದ್ದಾರೆ. ಇದೆ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕೊಲೆ ಯತ್ನ ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದಡಿ ಕಾರು ಚಾಲನೆ ಮಾಡುತ್ತಿದ್ದ ಧರ್ಮೇಶ್ ಎ ಪಟೇಲ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಬಳಿಕ ಕೂಡಲೇ ಕಾರಿನಲ್ಲಿದ್ದ 4 ವರ್ಷದ ಹೆಣ್ಣು ಮತ್ತು 9 ವರ್ಷದ ಗಂಡು ಮಕ್ಕಳು ಸೇರಿ ದಂಪತಿಯನ್ನು ರಕ್ಷಿಸಲಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗಿದೆ.
ಇಷ್ಟುಎತ್ತರದಿಂದ ಕಾರು ಬಿದ್ದರೂ ಪ್ರಾಣಾಪಾಯದಿಂದಾಗಿ ಪಾರಾಗಿದ್ದು ಆಶ್ಚರ್ಯವೆಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಧರ್ಮೇಶ್ ವರ್ತನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.