ಚಾಮರಾಜನಗರ: ಪತಿಯ ಅಕ್ರಮ ಸಂಬಂಧ (Illicit Relationship) ಪ್ರಶ್ನಿಸಿದ್ದಕ್ಕೆ ಪತ್ನಿ ಕೊಲೆಯಾದ ಘಟನೆ ಚಾಮರಾಜನಗರ (Chamarajanagar) ತಾಲೋಕು ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ.
ಎಂ.ಸಿ.ಸೌಮ್ಯ (27) ಕೊಲೆಯಾದ ಮಹಿಳೆ. ಏಳು ವರ್ಷಗಳ ಹಿಂದೆ ಸೌಮ್ಯಳನ್ನು ವಿವಾಹವಾಗಿದ್ದ ಮಹೇಶ್ ಚಂದ್ರಗುರು ಪರಸ್ತ್ರೀಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ತಿಳಿದ ಸೌಮ್ಯಾ, ಪತಿಯನ್ನು ಪ್ರಶ್ನೆ ಮಾಡಿದ್ದಾರೆ.