ಪತಿ ಚಾಕೊಲೆಟ್ ತಂದುಕೊಡದ್ದಕ್ಕೆ ಪತ್ನಿ ನೇಣು ಬಿಗಿದು ಆತ್ಮಹತ್ಯೆ!
ಬೆಂಗಳೂರು (ಏ.7) ಪತಿ ಚಾಕಲೆಟ್ ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನೊಂದುಕೊಂಡ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಂದಿನಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ನಂದಿನಿಗೆ ಇಬ್ಬರು ಮಕ್ಕಳು. ಪತಿ ಸೆಲೂನ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ.
ನಿನ್ನೆ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದ ಪತಿ. ಈ ವೇಳೆ ಚಾಕಲೆಟ್ ತಂದುಕೊಡುವಂತೆ ಹೇಳಿದ್ದ ಪತ್ನಿ ನಂದಿನಿ. ಚಾಕಲೇಟ್ ತರುವುದಾಗಿ ಕೆಲಸ ಹೋಗಿದ್ದ ಪತಿ. ಮಧ್ಯಾಹ್ನವಾದರೂ ಚಾಕಲೆಟ್ ತಂದಿಲ್ಲ ಎಂದು ನೊಂದುಕೊಂಡಿದ್ದ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು.
ಇತ್ತ ಪತಿ ಮಧ್ಯಾಹ್ನ ವೇಳೆ ನಂದಿನಿಗೆ ಕರೆ ಮಾಡಿದ್ದಾನೆ. ಆದರೆ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ, ಪತ್ನಿ ನೇಣು ಹಾಕಿಕೊಂಡಿರುವುದು ನೋಡಿ ಶಾಕ್ ಆಗಿದ್ದಾನೆ. ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿರುವ ಪತಿ. ಆದರೆ ಅಷ್ಟರಲ್ಲಾಗಲೇ ನಂದಿನಿ ಸಾವನ್ನಪ್ಪಿರುವುದು ಗೊತ್ತಾಗಿದೆ.
ಸಣ್ಣಪುಟ ವಿಚಾರಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.