ಪತಿಯನ್ನು ಹೆದರಿಸಲು ಸೀಮೆಎಣ್ಣೆ ಸುರಿದುಕೊಂಡ ಗರ್ಭಿಣಿ ಗಂಭೀರ-ಮಗು ಹೊಟ್ಟೆಯಲ್ಲೇ ಸಾವು
ಕೊಚ್ಚಿ, ಜ 05 : ಪತಿಯನ್ನು ಹೆಸರಿಸುವುದಕ್ಕಾಗಿ ಗರ್ಭಿಣಿಯೊಬ್ಬಳು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಇನ್ನು ಮಗು ಹೊಟ್ಟೆಯಲ್ಲೇ ಪ್ರಾಣ ಕಳೆದುಕೊಂಡಿದ್ದು, ಹೊರತೆಗೆಯಲು ಕಳೆದ ಮೂರು ದಿನಗಳಿಂದ ಪ್ರಯತ್ನ ನಡೆಯುತ್ತಿದೆ.
ಅರುಣಿಮಾ (27) ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ. ಯೋಧನಾಗಿರುವ ಪತಿ ಅಜಯ್ ಪ್ರಕಾಶ್ ಅವರು ಘಟನೆ ನಡೆದ ದಿನದಂದು ಮನೆಯಲ್ಲಿದ್ದರು. ಸೇನೆಯಿಂದ ರಜೆಯಲ್ಲಿ ಊರಿಗೆ ಬಂದಿದ್ದ ವೇಳೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪತಿಗೆ ಬೆದರಿಕೆ ಹಾಕುವುದಕ್ಕಾಗಿ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆಕೆಯನ್ನು ಆಸ್ಪತ್ರೆಗೆ ಸೇರಿಸುವ ವೇಳೆ ಗ್ಯಾಸ್ ಸ್ಪೋಟದಿಂದ ಘಟನೆ ನಡೆದಿದೆ ಎಂದು ಪತಿ ಹೇಳಿದ್ದರು. ಆದರೆ ಬಳಿಕ ಆಕೆಯ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಆಕೆಯನ್ನು ಪರಸ್ಸಾಲಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಯಿತು. ಇದೀಗ ಆಕೆಯ ಸ್ಥಿತಿ ಗಂಭೀರವಾಗಿದ್ದು, ಮಗು ಹೊಟ್ಟೆಯೊಳಗೆ ಮೃತಪಟ್ಟಿದೆ. ಮೃತ ಮಗುವನ್ನು ಹೊರ ತೆಗೆಯಲು ಕಳೆದ ಮೂರು ದಿನಗಳಿಂದ ಆಸ್ಪತ್ರೆ ವೈದ್ಯರು ಪ್ರಯತ್ನದಲ್ಲಿ ತೊಡಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.