ಚೆನ್ನೈ: ಚೆನ್ನೈನ ಗ್ರೌಂಡ್ ಏರ್‌ಪೋರ್ಟ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿಯೇ (wife) ಕೊಲೆ ಮಾಡಿದ ಘಟನೆ ತಮಿಳುನಾಡಿನ ( Tamil Nadu) ಪುದುಕೊಟ್ಟೈನಲ್ಲಿ ನಡೆದಿದೆ.
ಆರೋಪಿ ಮಹಿಳೆಯನ್ನು ಭಾಗ್ಯಲಕ್ಷ್ಮಿ (39) ಎಂದು ಗುರುತಿಸಲಾಗಿದೆ. ವಿಲ್ಲುಪುರಂ ನಿವಾಸಿ ಜಯನಂದನ್ ಮೃತ ವ್ಯಕ್ತಿ. ಜಯನಂದನ್ ತನ್ನ ಸಹೋದರಿಯೊಂದಿಗೆ ನಂಗನಲ್ಲೂರಿನಲ್ಲಿ ವಾಸವಾಗಿದ್ದ. ಆದರೆ ಮಾ. 18ರಂದು ಆತ ತನ್ನ ಮನೆಗೆ ಹೋಗುವುದಾಗಿ ಸಹೋದರಿಗೆ ಹೇಳಿ ಮನೆಯಿಂದ ಹೋಗಿದ್ದಾನೆ.