ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!
ಮಂಗಳೂರು: ಕಾರು ಚಾಲಕನ ನಿರ್ಲಕ್ಷದ ಚಾಲನೆಗೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ನಿಂತಿದ್ದ ಅಮಾಯಕರೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆ ಮುಂಭಾಗದ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಮೃತರನ್ನು ನಮ್ಮ ಕುಡ್ಲ – ವಿಜಾರ್ಡ್ ಕೇಬಲ್ ನೆಟ್ವರ್ಕ್ ನಲ್ಲಿ ಟೆಕ್ನೀಶಿಯನ್ ಆಗಿದ್ದ, ತೊಕ್ಕೊಟ್ಟು ಬಳಿಯ ಕಲ್ಲಾಪು ನಿವಾಸಿ ಹರೀಶ್ (43) ಎಂದು ಗುರುತಿಸಲಾಗಿದೆ. ಇವರು ರಸ್ತೆ ಬದಿ ಬೈಕ್ ನಿಲ್ಲಿಸಿ ಮಾತನಾಡುತ್ತಿದ್ದ ವೇಳೆ ಬಂಟ್ವಾಳ ಕಡೆಯಿಂದ ಹೆದ್ದಾರಿಯಲ್ಲಿ ಬಂದ ಡಸ್ಟರ್ ಕಾರು ನಿಯಂತ್ರಣ ತಪ್ಪಿ ಬಲಬದಿಯ ಡಿವೈಡರ್ ಗೆ ಡಿಕ್ಕಿಯಾಗಿ ಹರೀಶ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯಿಂದ ದೂರಕ್ಕೆ ಎಸೆಯಲ್ಪಟ್ಟು ತಲೆಯ ಭಾಗಕ್ಕೆ ತೀವ್ರ ಗಾಯಗೊಂಡಿದ್ದ ಹರೀಶ್ ಅವರನ್ನು ಕೂಡಲೇ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತ ಹರೀಶ್ ಪತ್ನಿ , ಇಬ್ಬರು ಗಂಡು ಮಕ್ಕಳು, ತಾಯಿ, ಓರ್ವ ಸಹೋದರ, ಇಬ್ಬರು ಸಹೋದರಿಯರನ್ನ ಅಗಲಿದ್ದಾರೆ.
ಬೆಳ್ತಂಗಡಿ: ಚಾರ್ಮಾಡಿ ರಸ್ತೆಯಲ್ಲಿ ಸಿಲುಕಿದ ಬೃಹತ್ ಕಂಟೈನರ್ ಲಾರಿ; ವಾಹನ ಸಂಚಾರ ಅಸ್ತವ್ಯಸ್ತ
ಬೆಳ್ತಂಗಡಿ: ಚಾರ್ಮಾಡಿ ರಸ್ತೆಯ ತಿರುವಿನಲ್ಲಿ ಮುಂದೆ ಸಾಗಲಾಗದೇ 32 ಚಕ್ರದ ಬೃಹತ್ ಕಂಟೈನರ್ ಲಾರಿಯೊಂದು ಸಿಲುಕಿ ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತವಾದ ಘಟನೆ ಭಾನುವಾರ ನಡೆದಿದೆ.
ಲಾರಿಯ ಮುಂಭಾಗ ಮಣ್ಣಿನಲ್ಲಿ ಹೂತು ಹೋದ ಪರಿಣಾಮ ರಸ್ತೆಯ ತಿರುವಿನಲ್ಲಿ ಸಿಲುಕಿಕೊಂಡಿದೆ. ಲಾರಿಯ ಬದಿ ಇದ್ದ ಸ್ವಲ್ಪ ಜಾಗದಲ್ಲಿ ಬೇರೆ ವಾಹನಗಳು ಸಂಚಾರ ಮಾಡುತ್ತಿದ್ದವು. ಬಳಿಕ ಈ ಜಾಗದಲ್ಲಿ ಕೆಎಸ್ಆರ್ ಟಿಸಿ ಬಸ್ ಹೂತು ಹೋಗಿ ರಸ್ತೆ ಬಂದ್ ಆಗಿದೆ. ಪರಿಣಾಮ ಸುಮಾರು 3 ಕಿ. ಮೀ ನಷ್ಟು ದೂರ ವಾಹನಗಳು ನಿಂತಿದ್ದವು.
ಇನ್ನು ಭಾನುವಾರ ರಾತ್ರಿ ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಕೆಎಸ್ಆರ್ ಟಿಸಿ ಬಸ್ ರಸ್ತೆ ಮಧ್ಯೆ ಕೆಟ್ಟು ನಿಂತಿದೆ. ಪರಿಣಾಮ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.