ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!

ಮಂಗಳೂರು: ಬೆಳ್ತಂಗಡಿ , ಸುಳ್ಯ ಹಾಗೂ ಪುತ್ತೂರಿನಲ್ಲಿ ಅತಿ ಹೆಚ್ಚು ನೋಟಾ ಮತ ಚಲಾವಣೆಯಾಗಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿಕೊಂಡಿದೆ.
ಈ ನಡುವೆ ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಅಲ್ಪಸಂಖ್ಯಾತರ ಮತಗಳು ಚಲಾವಣೆಯಾಗಿದೆ ಎಂಬ ಆಧಾರದ ಮೇಲೆ ಕಾಂಗ್ರೆಸ್ ಗೆಲುವಿನ ನೀರಿಕ್ಷೆಯನ್ನು ಇಟ್ಟುಕೊಂಡಿದೆ.
ಅಲ್ಲದೆ ಬಿಲ್ಲವರ ಹೆಚ್ಚು ಮತಗಳಿರುವ ಬೆಳ್ತಂಗಡಿ ಹಾಗೂ ಮೂಡಬಿದ್ರಿಯಲ್ಲಿ ಪದ್ಮರಾಜ್ ರವರಿಗೆ ಹೆಚ್ಚು ಬಿಲ್ಲವರ ಮತಗಳು ಚಲಾವಣೆಯಾಗಿದೆ ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಮಾಡುತಿದೆ.
ಈ ಮೂರು ಅಂಶಗಳ ಆಧಾರದ ಮೇಲೆ ಕಾಂಗ್ರೆಸ್ ಪದ್ಮರಾಜ್ ರವರ ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದು ಕಾಂಗ್ರೆಸ್ನ ಮೂಲಗಳು ಸ್ಪಷ್ಟಪಡಿಸಿವೆ.
ಆದರೆ ಬಿಜೆಪಿಯ ಲೆಕ್ಕಾಚಾರಗಳು ಹೇಳುವುದೇ ಬೇರೆ. ಬಿಲ್ಲವರ ಅತಿ ಹೆಚ್ಚು ಸಂಖ್ಯೆ ಇರುವ ಮೂಡಬಿದ್ರೆ ಹಾಗೂ ಬೆಳ್ತಂಗಡಿಯಲ್ಲಿ ಬಿಲ್ಲವರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಚಲಾವಣೆಯಾಗಿದೆ ಎಂಬ ವಾದವನ್ನು ಮಂಡಿಸುತ್ತಾರೆ. ಅಲ್ಲದೆ ನೋಟಾ ಮತಗಳು ಕೊನೆ ಹಂತದಲ್ಲಿ ಚಲಾವಣೆಯಾಗದೆ ಬಿಜೆಪಿಗೆ ಚಲಾವಣೆಯಾಗಿದೆ ಎಂಬ ವಾದವನ್ನು ಬಿಜೆಪಿ ಮಂಡಿಸುತ್ತಿದೆ.
ಅಲ್ಪಸಂಖ್ಯಾತರ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರ ಮತಗಳು ಕಳೆದ ಬಾರಿಗಿಂತ ಹೆಚ್ಚು ಬಿಜೆಪಿಗೆ ಚಲಾವಣೆಯಾಗಿದೆ ಎಂಬ ವಾದವನ್ನು ಬಿಜೆಪಿ ಒಪ್ಪಿಕೊಳ್ಳುತ್ತಿದೆ. ಈ ಲೆಕ್ಕಾಚಾರಗಳು ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದ್ದು ಏನಾಗುತ್ತದೆ ಎಂಬುದನ್ನು ಈಗ ಕಾದು ನೋಡಬೇಕಾಗಿದೆ.