ಶನಿವಾರ, ಮಾರ್ಚ್ 15, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನೈನಾಡಿ ನ ಯಕ್ಷಮಿತ್ರ ಬಳಗ ದಿಂದ 12ನೇ ವರ್ಷದ ಅದ್ದೂರಿ ಯಕ್ಷಗಾನ .

Twitter
Facebook
LinkedIn
WhatsApp
ನೈನಾಡಿ ನ ಯಕ್ಷಮಿತ್ರ ಬಳಗ ದಿಂದ 12ನೇ ವರ್ಷದ ಅದ್ದೂರಿ ಯಕ್ಷಗಾನ.

ಯಕ್ಷಮಿತ್ರ ಬಳಗ ನಯನಾಡು ಇವರ ವತಿಯಿಂದ ನಯನಾಡಿನ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಹತ್ತಿರ ನಡೆದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿಯ ಯಕ್ಷಗಾನ ಕಾರ್ಯಕ್ರಮದಲ್ಲಿ ಔಚಿತ್ಯ ಪೂರ್ಣ ಸನ್ಮಾನ ಸಮಾರಂಭ ನಡೆಯಿತು. ಪಿಲಾತಬೆಟ್ಟು ವ್ಯ.ಸೇ.ಸಹಕಾರಿ ಸಂಘದ ಪ್ರಭಂಧಕರಾದ ಮಂಜಪ್ಪ ಮೂಲ್ಯ ಅತ್ತಾಜೆ ಹಾಗೂ ನಯನಾಡಿನ ಯುವ ಪ್ರತಿಭೆ ಯಶು ಸ್ನೇಹಗಿರಿಯವರಿಗೆ ಅದ್ದೂರಿ ಯ ಸನ್ಮಾನ ವನ್ನು ಮಾಡಲಾಯಿತು.

ಸತತ ಹನ್ನೆರಡು ವರ್ಷಗಳಿಂದ ಯಕ್ಷಮಿತ್ರ ಬಳಗ ನಯನಾಡು ಎಂಬ ಸಂಘಟನೆ ಯ ಮುಖೇನಾ ಶ್ರೀಯುತ ಅಶೋಕ್ ಪೂಜಾರಿ ತಿಮರಡ್ಡ ರವರು ಕಲಾಮಾತೆಯ ಆರಾಧನೆಯಲ್ಲಿ ತೊಡಗಿಸಿಕೊಂಡವರು. ಪ್ರತೀ ವರ್ಷ ಸಾಮಾಜಿಕ ಧುರೀಣ ರನ್ನು, ಕಲಾವಿದರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಹಾಕಿಕೊಂಡವರು. ಈ ಬಾರಿ ಸರಳ ಸಜ್ಜನಿಕೆಯ ಸಾತ್ವಿಕ ಸ್ನೇಹ ಸ್ವಭಾವದ , ಸಂಘಟನಕಾರ, ನಾಟಕ ಕಲಾವಿದ, ವ್ಯವಸಾಯ ಸೇವಾ ಸಹಕಾರಿ ಸಂಘದ ಬ್ಯಾಂಕಿನ ಪ್ರಭಂಧಕರಾದ ಮಂಜಪ್ಪ ಮೂಲ್ಯ ಅತ್ತಾಜೆ ಯವರ ಜೊತೆಗೆ ನಯನಾಡಿನ ಕಣ್ಮಣಿ, ಯುವ ಗಾಯಕ, ಸಂಗೀತ ವಾದಕ, ಚಿತ್ರಕಲಾ ಶಿಕ್ಷಕ, ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದ ಚಾಣಕ್ಯ ಪ್ರಶಸ್ತಿ ಪುರಸ್ಕೃತ, ಯಶ್ವಂತ್ ಸ್ನೇಹಗಿರಿ ಯವರನ್ನು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಯುತ ಯಂ.ತುಂಗಪ್ಪ ಬಂಗೇರಾ, ಪಿಲಾತಬೆಟ್ಟು ವ್ಯ.ಸೇ. ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಉಡುಪ, ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕ ಹರೀಂದ್ರ ಟಿ ಪೈ, ಪಂಚಾಯತ್ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ್, ಉಪಾಧ್ಯಕ್ಷರಾದ ಲಕ್ಷ್ಮೀ ನಾರಾಯಣ ಹೆಗ್ಡೆ, ಸದಸ್ಯರಾದ ನೆಲ್ವಿಸ್ಟರ್ ಪಿಂಟೋ, ಕಾಂತಪ್ಪ ಪೂಜಾರಿ, ಶ್ರೀ ರಾಮ ಭಜನಾ ಮಂದಿರದ ಮಾಜಿ ಅಧ್ಯಕ್ಷ ದುಗ್ಗಪ್ಪ ಹಂಜಾರು, ಕಲಾಪ್ರೇಮಿಗಳಾದ ಜನಾಬ್ ಅಬೂಬಕ್ಕರ್ ನಯನಾಡು, ಅಚ್ಯುತ ಆಚಾರ್ಯ ಕಲ್ಲುಬೆಟ್ಟು, ಕಲಾ ಸಂಘಟಕ ಅಶೋಕ್ ಪೂಜಾರಿ ತಿಮರಡ್ಡ ರವರ ಉಪಸ್ಥಿತಿಯಲ್ಲಿ ಶಾಲು,ಪೇಟಾ, ಹೂ ಹಾರ, ಸ್ಮರಣಿಕೆ, ಸನ್ಮಾನ ಪತ್ರ, ಫಲಪುಷ್ಪ ನೀಡಿ ಗಣ್ಯರ ಹಾಗೂ ಅಪಾರವಾದ ಕಲಾಭಿಮಾನಿಗಳ ಸಮ್ಮುಖದಲ್ಲಿ, ಗೌರವಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಹರೀಂದ್ರ ಪೈ ಯವರು ಕಲಾಸೇವೆಗೆ, ಧಾರ್ಮಿಕ ಸೇವೆಗೆ, ಸಮಾಜ ಮುಖಿ ಸೇವೆಯಲ್ಲಿ ತೊಡಗಿಕೊಳ್ಳುವವರಿಗೆ ಯಥಾ ಸಾಧ್ಯ ತನ್ನ ಸಹಕಾರ ಇದೆಯೆಂದರು. ಅತಿಥಿಗಳಾದ ಲಕ್ಷ್ಮೀ ನಾರಾಯಣ ಉಡುಪ ರು, ಹರ್ಷಿಣಿ ಪುಷ್ಪಾನಂದ್ , ಶುಭ ನುಡಿಗಳನ್ನಾಡಿದರು. ಸಭಾಧ್ಯಕ್ಷರಾದ ತುಂಗಪ್ಪ ಬಂಗೇರಾ ರು ಯಕ್ಷಮಿತ್ರರ ಕಲಾರಾಧನೆಗೆ, ಹಾಗೂ ಸನ್ಮಾನಿತರಿಗೆ ಶುಭವನ್ನು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜಪ್ಪ ಮೂಲ್ಯ ರು ಈ ಗೌರವ ತಾನು ದುಡಿಯುತ್ತಿರುವ, ತನಗೊಂದು ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಸಂಸ್ಥೆಗೆ , ಸಂಸ್ಥೆಯ ಆಡಳಿತ ಮಂಡಳಿಗೆ ಸಲ್ಲಿಸಲಾದ ಗೌರವ ಎಂಬುದಾಗಿ ಸನ್ಮಾನ ವನ್ನು ಸ್ವೀಕರಿಸಿದ್ದೇನೆ ಎಂದರು.
ಯಶು ಸ್ನೇಹಗಿರಿಯವರು ಮಾತಾನಾಡುತ್ತಾ ತನ್ನ ಹುಟ್ಟೂರಾದ ನಯನಾಡಿನ ಎಲ್ಲಾ ಕಲಾ ಪೋಷಕರ ಸಹಕಾರ, ಪ್ರೋತ್ಸಾಹ ದಿಂದಾಗಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಕಲಾಮಾತೆಯ ಸೇವೆ ಮಾಡುವ ಅವಕಾಶ ವನ್ನು ನನ್ನೂರಿನ ಸಮಾಜ ಅನುಗ್ರಹಿಸಿತು.
ನಾನೇನು ಮಾಡಿಲ್ಲ, ಇನ್ನೂ ಸಾಧನೆ ಮಾಡೋಕೆ ತುಂಬಾ ಇದೆ. ತಮ್ಮೆಲ್ಲರ ಪ್ರೀತಿಯ ಹಾರೈಕೆ ನನ್ನ ಕಲಾಸೇವೆಗೆ ಶ್ರೀ ರಕ್ಷೆ ಯಾಗಿರಲಿ ಎಂದರು.
ಸಭಾ ಕಾರ್ಯಕ್ರಮದ ನಂತರ ಹನುಮಗಿರಿ ಮೇಳದವರಿಂದ ಶುಕ್ರನಂದನೆ ಯಕ್ಷಗಾನ ಪ್ರದರ್ಶನ ನಡೆಯಿತು. ಕಲಾಭಿಮಾನಿ ಬಂಧುಗಳಿಗೆ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕ ರಾದ ಶ್ರೀಮತಿ ಮತ್ತು ಶ್ರೀ ಹರೀಂದ್ರ ಟಿ ಪೈ ಯವರ ವತಿಯಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಜಯಕರ ಮಂಗಳತೇರು ನಿರ್ವಹಿಸಿದರು.
ಸನ್ಮಾನಿತರ ಸನ್ಮಾನ ಪತ್ರವನ್ನು ಪ್ರಭಾಕರ ಪಿ.ಯಂ. ದೈಕಿನಕಟ್ಟೆಯವರು ವಾಚಿಸಿದರು. ಅಭ್ಯಾಗತರನ್ನು ಹರೀಶ್ ಶೆಟ್ಟಿ ಸಿರಿಮನೆ ನಯನಾಡು ರವರು ಸ್ವಾಗತಿಸಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು