ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವು!
Twitter
Facebook
LinkedIn
WhatsApp
ಚಿಕ್ಕಮಗಳೂರು: ಕಾಲುವೆ ನೀರಿನಲ್ಲಿ ಆಟವಾಡುವಾಗ ಆಯತಪ್ಪಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಡ್ಯಾಂ ಪಕ್ಕದ ಕಾಲುವೆಯಲ್ಲಿ ನಡೆದಿದೆ. ರವಿ(31), ಅನನ್ಯ(17), ಶಾಮವೇಣಿ(16) ಮೃತ ದುರ್ದೈವಿಗಳು. ರವಿ ಮೂಲತಃ ಲಕ್ಕವಳ್ಳಿ ನಿವಾಸಿ.
ಅನನ್ಯ ಮತ್ತು ಶಾಮವೇಣಿ ರವಿಯ ಸಹೋದರಿಯರ ಮಕ್ಕಳು. ಅನನ್ಯ ಮೂಲತಃ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರು. ರಜೆ ನಿಮಿತ್ತ ಅನನ್ಯ ಮತ್ತ ಶಾಮವೇಣಿ ಲಕ್ಕವಳ್ಳಿ ಸಂಬಂಧಿ ಮನೆಗೆ ಬಂದಾಗ ಘಟನೆ ಸಂಭವಿಸಿದೆ. ರವಿ ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ. ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.