ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

Twitter
Facebook
LinkedIn
WhatsApp
ನೀಟ್‌ ಪಿಜಿ ಕೌನ್ಸಲಿಂಗ್‌ ವಿಳಂಬ ವಿರೋಧಿಸಿ ದೆಹಲಿ ವೈದ್ಯರ ತೀವ್ರ ಪ್ರತಿಭಟನೆ

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಕೌನ್ಸಲಿಂಗ್‌ ವಿಳಂಬ ಆಗುತ್ತಿರುವುದನ್ನು ಖಂಡಿಸಿ ದೆಹಲಿಯಲ್ಲಿ ವೈದ್ಯರ ಪ್ರತಿಭಟನೆ ತೀವ್ರಗೊಂಡಿದೆ.

ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಯ ನೀಟ್‌ ಪರೀಕ್ಷೆ ಬರೆದು ಸೀಟು ಹಂಚಿಕೆಗಾಗಿ ಕೌನ್ಸಲಿಂಗ್‌ ಎದುರು ನೋಡುತ್ತಿರುವ ಸ್ಥಾನೀಕ ವೈದ್ಯರ ಸಂಘಗಳ ಮಹಾಒಕ್ಕೂಟ (ಫೋರ್ಡಾ) ದೆಹಲಿ ಪ್ರತಿಭಟನೆ ತೀವ್ರಗೊಳಿಸಿದೆ. ಸೋಮವಾರ ತಮ್ಮ “ಲ್ಯಾಬ್‌ ಕೋಟ್”ಗಳನ್ನು ಸಾಂಕೇತಿಕವಾಗಿ ಮರಳಿಸಿದ ವೈದ್ಯರು, ಸರ್ಕಾರ ಕೂಡಲೇ ಕೌನ್ಸಲಿಂಗ್‌ ಆರಂಭಿಸದಿದ್ದರೆ ಬುಧವಾರದಿಂದ ಚಿಕಿತ್ಸೆ ನೀಡುವುದನ್ನು ಪರಿಪೂರ್ಣವಾಗಿ ನಿಲ್ಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಫೋರ್ಡಾ ಪ್ರತಿಭಟನೆಗೆ ಏಮ್ಸ್‌ ಸ್ಥಾನೀಕ ವೈದ್ಯರ ಅಸೋಸಿಯೇಷನ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಬುಧವಾರದಿಂದ ತುರ್ತು ಚಿಕಿತ್ಸೆ ಬಿಟ್ಟು ಉಳಿದ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
ಫೋರ್ಡಾ ಒಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸೋಮವಾರ ಇದು ತೀವ್ರಗೊಂಡಿತು. ಸರೋಜಿನಿ ನಗರ್‌ ಪೊಲೀಸ್ ಠಾಣೆಯ ಮುಂದೆ ನಾಲ್ಕು ಸಾವಿರ ವೈದ್ಯರು ಸೋಮವಾರ ರಾತ್ರಿ ಕೂಡ ಕೊರೊನಾ ನಿಮಿತ್ತ ವಿಧಿಸಿರುವ ನಿರ್ಬಂಧ ಕ್ರಮಗಳನ್ನು ಲೆಕ್ಕಿಸಿದೆ ಪ್ರತಿಭಟನೆ ನಡೆಸಿದರು.
ಡಿಸೆಂಬರ್‌ನ ಚಳಿ ಲೆಕ್ಕಿಸದೆ ಅಧಿಕ ಸಂಖ್ಯೆಯಲ್ಲಿ ವೈದ್ಯೆಯರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯ ವೇಳೆ ತಮ್ಮ ಮೇಲೆ ಬಲಪ್ರಯೋಗ ಮಾಡಲಾಯಿತು ಎಂದು ವೈದ್ಯೆಯರು ದೂರಿದ್ದಾರೆ.
ಸ್ಥಾನೀಕ ವೈದ್ಯರ ಈ ಪ್ರತಿಭಟನೆಯಿಂದ  ದೆಹಲಿಯಲ್ಲಿ ಮೂರು ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಾದ ಸಫ್ದಾರ್‌ಜಂಗ್‌, ಆರ್‌ಎಂಎಲ್‌, ಲೇಡಿ ಹಾರ್ಡಿಂಜ್‌ ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯವಾಗಿದೆ. ಇದರಿಂದ ರೋಗಿಗಳು ಪರದಾಡುವಂತೆ ಆಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು