ನಿಶ್ಚಿತಾರ್ಥ ಮಾಡಿಕೊಂಡ ಯುವಕನಿಗೆ ಚಾಕು ಇರಿದ ಅಪ್ರಾಪ್ತ ಬಾಲಕಿ
ಹಾವೇರಿ: ಪ್ರೀತಿಸಿದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡ ಯುವಕನ ಕುತ್ತಿಗೆಗೆ ಅಪ್ರಾಪ್ತ ಬಾಲಕಿಯೊಬ್ಬಳು ಚಾಕು ಇರಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ ನಡೆದಿದೆ. ಹೌದು ಅಪ್ರಾಪ್ತ ಬಾಲಕಿ ಭಾವಿ ಪತಿಗೆ ಪಾರ್ಕ್ಗೆ ಕರೆದಿದ್ದಾಳೆ. ನಿನಗೆ ಒಂದು ಗಿಪ್ಟ್ ಕೊಡಬೇಕು ರೀಲ್ಸ್ ಮಾಡೋಣ ನಿನ್ನ ಕೈ ಕಟ್ಟಿ ಪೋಟೊ ತೆಗೆಯುತ್ತೇನೆ ಎಂದಿದ್ದು, ಯುವಕ ಕೂಡ ಪ್ರೀತಿಯಿಂದ ಹೇಳುತ್ತಿದ್ದಾಳೆ ಎಂದು ಒಪ್ಪಿದ್ದಾನೆ. ಇದಕ್ಕೆ ಒಪ್ಪಿಕೊಂಡು ಶಿಲುಬೆ ಥರ ಕೈ ಕಟ್ಟಿಸಿಕೊಂಡಿದ್ದ ನಿಶ್ಚಿತಾರ್ಥದವಾದ ಯುವಕನಿಗೆ ‘ ನೋಡು ನನ್ನ ಗಿಪ್ಟ್ ಎಂದು ದೇವೆಂದ್ರಗೌಡ ಎಂಬ ಯುವಕನ ಕುತ್ತಿಗೆಗೆ 17 ವರ್ಷದ ಅಪ್ರಾಪ್ತ ಬಾಲಕಿ ಚೂರಿ ಹಾಕಿದ್ದಾಳೆ.
ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ದೇವೆಂದ್ರಗೌಡ ಎಂಬ ಯುವಕ ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್ ಮನ್ ಆಗಿ ಕೆಲಸ ಮಾಡುತ್ತಿದ್ದ, ಮಾರ್ಚ್ 3 ರಂದು ಅಪ್ರಾಪ್ತ ಬಾಲಕಿ ಜೊತೆ ಎಂಗೇಜ್ಮೇಂಟ್ ಆಗಿದ್ದನು.
ಆದರೀಗ ಲವ್ ಮಾಡಿದ್ದ ಹುಡುಗನಿಗಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದವನನ್ನೆ ಕೊಲ್ಲಲು ಯತ್ನಿಸಿದ ಈ ಖತರ್ನಾಕ್ ಬಾಲಕಿಯ ಕೃತ್ಯಕ್ಕೆ ಪೋಲಿಸರೇ ಬೆಚ್ಚಿಬಿದ್ದಿದ್ದಾರೆ. ಯುವಕನ ಪೋಷಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ದೂರು ಕೊಡಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನಲೆ ಆರೋಪಿ ಯುವತಿಯನ್ನ ಅರೆಸ್ಟ್ ಮಾಡಲಾಗಿದೆ. ಈ ಕುರಿತು ಹಲಗೇರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.