ನಿರ್ಮಾಪಕ ಸಂದೀಪ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ ನಟಿ ಸ್ವಸ್ತಿಕಾ
ನಟಿ ಸ್ವಸ್ತಿಕಾ (Swastika) ನಿರ್ಮಾಪಕರೊಬ್ಬರ ವಿರುದ್ಧ ಲೈಂಗಿಕ ಕಿರುಕುಳದ (Sexual Harassment) ಆರೋಪ ಮಾಡಿದ್ದಾರೆ. ಕೇವಲ ಆರೋಪ ಮಾತ್ರವಲ್ಲ, ಆತನ ವಿರುದ್ಧ ದೂರು ಕೂಡ ನೀಡಿದ್ದಾರೆ. ಈ ದೂರು ಬೆಂಗಾಲಿ (Bengali) ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ನಿರ್ಮಾಪಕ ಸಂದೀಪ್ ಸರ್ಕಾರ್ (Sandeep) ಎನ್ನುವವರು ಯಾರು ಎಂಬುದು ಗೊತ್ತಿಲ್ಲದಿದ್ದರೂ, ಬೆದರಿಕೆಯ ಇ ಮೇಲ್ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬೆಂಗಾಲಿ ನಟಿ ಸ್ವಸ್ತಿಕಾ ಇತ್ತೀಚೆಗಷ್ಟೇ ‘ಶಿಬ್ತುರ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ನಿರ್ಮಾಪಕನೇ ಸಂದೀಪ್ ಸರ್ಕಾರ್. ಸಿನಿಮಾ ಮುಗಿಯುವತನಕ ಸಂದೀಪ್ ಒಂದು ಬಾರಿಯೂ ಆ ನಟಿಯೊಟ್ಟಿಗೆ ಮಾತನಾಡಿಲ್ಲವಂತೆ. ಮುಖ ಕೂಡ ನೋಡಿಲ್ಲವಂತೆ. ಸಿನಿಮಾ ಮುಗಿದ ನಂತರ ಇ ಮೇಲ್ ಮೂಲಕ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದಾರಂತೆ. ಅವರು ಅಮೆರಿಕಾದ ನಿವಾಸಿಯಾಗಿದ್ದು, ಅಲ್ಲಿಂದಲೇ ಹಲವು ಇಮೇಲ್ ಗಳನ್ನು ಬರೆದಿದ್ದಾರಂತೆ.
ಸ್ವಸ್ತಿಕಾಗೆ ಮಾತ್ರವಲ್ಲ ಅವರ ಮ್ಯಾನೇಜರ್ ಗೂ ಸಂದೀಪ್ ಬೆದರಿಕೆಯ ಇ ಮೇಲ್ ಕಳುಹಿಸಿದ್ದಾನೆ ಎಂದು ದೆಹಲಿ (Delhi) ಪೊಲೀಸರಿಗೆ ನೀಡಿದ ದೂರಿನಲ್ಲಿ ಸ್ವಸ್ತಿಕಾ ತಿಳಿಸಿದ್ದಾರೆ. ನನ್ನ ಫೋಟೋ ಎಡಿಟ್ ಮಾಡಿ, ಇ ಮೇಲ್ ಹ್ಯಾಕ್ ಮಾಡುವುದಾಗಿಯೂ ಸಂದೀಪ್ ಬೆದರಿಸಿದ್ದಾನಂತೆ. ದೂರು ಸ್ವೀಕರಿಸಿರುವ ಪೊಲೀಸರು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.