ಸೋಮವಾರ, ಜೂನ್ 24, 2024
Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ-ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಗುಡ್ ನ್ಯೂಸ್; ಜಾಮೀನು ಮಂಜೂರು..!-ದರ್ಶನ್ ಸೇರಿದಂತೆ 17 ಆರೋಪಿಗಳ ಕಸ್ಟಡಿ ಅಂತ್ಯ; ಇಂದು ನ್ಯಾಯಾಲಯಕ್ಕೆ ಹಾಜರು.!-ರಾಜ್ಯದಲ್ಲಿ ಮುಂಗಾರು ಚುರುಕು; ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ.!-ಅಶ್ಲೀಲ ವಿಡಿಯೋ ಪ್ರಕರಣ; ಪ್ರಜ್ವಲ್ ರೇವಣ್ಣಗೆ ಮತ್ತೆ ನ್ಯಾಯಾಂಗ ಬಂಧನ.!-4 ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 3 ವಿಕೆಟ್ ಕಬಳಿಸಿ ದಾಖಲೆ ಬರೆದ ಲಾಕಿ ಫರ್ಗುಸನ್..!-ದರ್ಶನ್ ಫಾರಂ ಹೌಸ್ ಮ್ಯಾನೇಜರ್ ನಿಗೂಢ ಸಾವು; ಅನುಮಾನಾಸ್ಪದ ಸಾವು ಪ್ರಕರಣ ದಾಖಲು.!-ಶತಕದತ್ತ ಟೊಮೆಟೊ ದರ; ಮತ್ತಷ್ಟು ಏರಿಕೆಯಾಗಲಿದೆಯೇ ಟೊಮೆಟೊ ಬೆಲೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಿರ್ಮಲಾ ಸೀತಾರಾಮನ್ ಗೆ ಈ ಬಾರಿಯೂ ಹಣಕಾಸು ಖಾತೆ; ಕೃಷಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ಕುಮಾರಸ್ವಾಮಿಗೆ ಖಾತೆ ಮಿಸ್..!

Twitter
Facebook
LinkedIn
WhatsApp
ನಿರ್ಮಲಾ ಸೀತಾರಾಮನ್ ಗೆ ಈ ಬಾರಿಯೂ ಹಣಕಾಸು ಖಾತೆ; ಕೃಷಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ಕುಮಾರಸ್ವಾಮಿಗೆ ಖಾತೆ ಮಿಸ್..!

ನರೇಂದ್ರ ಮೋದಿ ಸಂಪುಟದಲ್ಲಿ ಈ ಬಾರಿ ಕರ್ನಾಟಕದಿಂದ ಆಯ್ಕೆಯಾದ ಐವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ಮೂವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕರೆ, ಇನ್ನುಳಿದ ಇಬ್ಬರಿಗೆ ರಾಜ್ಯ ಖಾತೆ ಸಿಕ್ಕಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಧಾರವಾಡದ ಪ್ರಲ್ಹಾದ್ ಜೋಶಿ, ಮಂಡ್ಯದ ಎಚ್​ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಕ್ಷೇತ್ರದ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರೆತಿದೆ.

ಮಂಡ್ಯದಿಂದ ಗೆದ್ದು ಸಂಸತ್ ಪ್ರವೇಶ ಮಾಡಿರುವ ಜೆಡಿಎಸ್​-ಬಿಜೆಪಿ ಮೈತ್ರಿ ಸಂಸದ ಎಚ್​ಡಿ ಕುಮಾರಸ್ವಾಮಿ ಅವರು ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್​ ದರ್ಜೆ ಸಚಿವರಾಗಿದ್ದಾರೆ. ಆದ್ರೆ, ಕುಮಾರಸ್ವಾಮಿ ಬಯಸಿದ್ದ ಖಾತೆ ಮಿಸ್ ಆಗಿದೆ. ಕೃಷಿ ಖಾತೆ ಮೇಲೆ ಕಣ್ಣಿಟ್ಟಿದ್ದ ಕುಮಾರಸ್ವಾಮಿ ಅವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಇನ್ನು ಕೃಷಿ ಖಾತೆ ಶಿವರಾಜ್ ಸಿಂಗ್ ಚೌಹಾಣ್ ಪಾಲಾಗಿದೆ.

ಕರ್ನಾಟಕ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರೂ ಸಹ ಎರಡನೇ ಬಾರಿಗೆ ಮೋದಿ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದು, ಈ ಬಾರಿಯೂ ಸಹ ಅವರಿಗೆ ಹಣಕಾಸು ಇಲಾಖೆ ನೀಡಲಾಗಿದೆ. ಕಳೆದ ಬಾರಿ ಸರ್ಕಾರದಲ್ಲೂ ನಿರ್ಮಲಾ ಸೀತಾರಾಮಾನ್ ಅವರು ಹಣಕಾಸು ಇಲಾಖೆ ಖಾತೆ ಸಚಿವೆಯಾಗಿದ್ದರು.

ಕಳೆದ ಬಾರಿ ಸಂಸದೀಯ ವ್ಯವಹಾರ ಖಾತೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಈ ಬಾರಿ ಬದಲಾವಣೆ ಮಾಡಲಾಗಿದ್ದು, ಇದೀಗ ಅವರಿಗೆ ಮಹತ್ವದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿದೆ. ಇದರ ಜೊತೆಗೆ ನವೀಕರಿಸಬಹುದಾದ ಇಂಧನ ಇಲಾಖೆಯ ಜವಾಬ್ದಾರಿ ಸಹ ನೀಡಲಾಗಿದೆ.

ಬೆಂಗಳೂರು ಉತ್ತರದಿಂದ ಗೆದ್ದು ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಸೂಕ್ಷ್ಮ, ಸಣ್ಣ ,ಮಧ್ಯಮ ಕೈಗಾರಿಕೆ ರಾಜ್ಯ ಖಾತೆ ನೀಡಲಾಗಿದೆ. ಕಳೆದ ಬಾರಿ ಸರ್ಕಾರದಲ್ಲಿ ರಾಜ್ಯ ಕೃಷಿ ಖಾತೆ ನೀಡಲಾಗಿತ್ತು.

ಜಲ ಶಕ್ತಿ ರಾಜ್ಯ ಖಾತೆ ಮತ್ತು ರೈಲ್ವೆ ಸಚಿವಾಲಯದ ರಾಜ್ಯ ಖಾತೆ ನೀಡಲಾಗಿದೆ. ಸೋಮಣ್ಣ ಅವರಗೆ ಎರೆಡೆರಡು ರಾಜ್ಯ ಖಾತೆ ನೀಡುವುದು ವಿಶೇಷವಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ