ಭಾನುವಾರ, ಡಿಸೆಂಬರ್ 22, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಿಂಬೆ ಹಣ್ಣಿನ ಕೃಷಿಯಿಂದ ಪಡೆಯಿರಿ ಹೆಚ್ಚಿನ ಲಾಭ

Twitter
Facebook
LinkedIn
WhatsApp
types of lemons 2

ನಿಂಬೆ ಹಣ್ಣು ಬಹು ಉಪಯೋಗಿ ಹಣ್ಣಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ ಈ ತೋಟಗಾರಿಕಾ ಬೆಳೆಯಾದ ನಿಂಬೆಹಣ್ಣನ್ನು ಇಳುವರಿಯೊಂದಿಗೆ ಉತ್ತಮ ಆದಾಯ ಗಳಿಸಬಹದು. ಹೊಸದಾಗಿ ನಿಂಬೆ ಕೃಷಿ ಆರಂಭಿಸುವವರು ಗಿಡ ನಾಟಿಗೆ ಬೀಜದಿಂದ ತಯಾರಿಸಿದ ಗಿಡಗಳನ್ನು ಆಯ್ದುಕೊಳ್ಳುವುದು ಒಳ್ಳೆಯದು. ಮೇ ತಿಂಗಳ ಮೊದಲ ವಾರದಲ್ಲಿ ಗಿಡ ನಾಟಿ ಮಾಡಿದರೆ ಮಳೆ ನೀರಿನ ಬಲದಿಂದ ಉತ್ತಮವಾಗಿ ಬೆಳೆದು ನಿಲ್ಲುತ್ತದೆ. ಬೇಸಿಗೆಯಲ್ಲಿ ಗಿಡ ನೆಟ್ಟರೆ ಬೆಳೆಯುವ ಗಿಡಗಳಿಗೆ ನೀರು ಸಾಲದೆ ವಾತಾವರಣದ ಬಿಸಿಲಿಗೆ ಗಿಡ ಹೊಂದಿಕೊಳ್ಳದೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇಳುವರಿಯಲ್ಲಿ ವ್ಯತ್ಯಯವಾಗುತ್ತದೆ. ಗಿಡಗಳ ಆಯಸ್ಸು ಕ್ಷಿಣಿಸುತ್ತದೆ. ಗಿಡ ಹಚ್ಚಿದ ನಂತರ ಬುಡವನ್ನು ಬಿಡಿಸಿಕೊಡಬೇಕು. ಒಣಗಿದ ಗೆಲ್ಲುಗಳನ್ನು ತೆಗೆದುಬಿಡಬೇಕು. ಗಿಡಗಳಿಂದ ಇಳುವರಿ ಪಡೆಯಲುಮೂರು ವರ್ಷ ಕಾಯಬೇಕು. ಈ ಸಂದರ್ಭ ಆ ಭೂಮಿಯಲ್ಲಿ ಉತ್ಪಾದನೆ ಪಡೆಯಲು ಅಂತರ ಬೇಸಾಯವಾಗಿ ಪಪ್ಪಾಯ, ನುಗ್ಗೆ ಕೃಷಿ ಮಾಡಿದರೆ ಉತ್ತಮ

ನಿಂಬೆ ಹಣ್ಣಿನ ಕೃಷಿಯಿಂದ ಪಡೆಯಿರಿ ಹೆಚ್ಚಿನ ಲಾಭ

ಲಿಂಬೆಯನ್ನು ಇತರ ಬಹುವಾರ್ಷಿಕ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದಾಗಿದೆ . ತೆಂಗಿನ ತೋಟದಲ್ಲಿ ಲಿಂಬೆಯನ್ನು ಅಂತರ ಬೆಳೆಯಾಗಿ ಅಳವಡಿಸಬಹುದಾಗಿದೆ . ಎರಡು ತೆಂಗಿನ ಸಾಲುಗಳ ಮಧ್ಯೆ ಬಿಸಿಲು ಸಾಕಷ್ಟು ಬೀಳುವಲ್ಲಿ ಲಿಂಬೆಗಿಡಗಳನ್ನು ಬೆಳೆಸಬಹುದಾಗಿದೆ . ಇದೇ ರೀತಿ ಲಿಂಬೆಯನ್ನು ಕಾಫಿ ಮತ್ತು ಸಪೋಟ ತೋಟಗಳಲ್ಲಿ ಅಂತರ ಬೆಳೆಯಾಗಿ ಬೆಳೆಸಬಹುದಾಗಿದೆ .

ಚೆನ್ನಾಗಿ ನೀರು ಬಸಿದು ಹೋಗುವಂತಹ 2-3 ಮೀ . ( 8-10 ಅಡಿ ) ಆಳವಿರುವ ಗೋಡು ಮಣ್ಣು ಪ್ರದೇಶಗಳನ್ನು ಈ ಬೆಳೆಗಳಿಗೆ ಆಯ್ಕೆ ಮಾಡಬೇಕು . ಲಿಂಬೆಗೆ ತೇವಾಂಶಯುಕ್ತ ಉಷ್ಣ ಹವಾಗುಣ ಸೂಕ್ತ . ಕಡಿಮೆ ತಾಪಮಾನ ಮತ್ತು ಬಿರುಗಾಳಿ ಬೀಸುವ ಪ್ರದೇಶಗಳು ಸೂಕ್ತವಲ್ಲ . ಒಣಹವೆಯಲ್ಲಿ ಇದು ಚೆನ್ನಾಗಿ ಬರುತ್ತದೆ . ಜೂನ್ – ಆಗಸ್ಟ್ ತಿಂಗಳುಗಳು ನಾಟಿಗೆ ಸಕಾಲ. ಸಸಿ ಬೆಳೆಸಲು ಬೇಕಾಗುವ ಬಿತ್ತನೆ ಬೀಜ ಪಡೆಯಲು ದೊಡ್ಡದಾದ ರಸಭರಿತ ತೆಳು ಸಿಪ್ಪೆಯ ಹಣ್ಣುಗಳನ್ನು ಆಯ್ಕೆ ಮಾಡಬೇಕು .ಸಾವಯುವ ಗೊಬ್ಬರವನ್ನು ಒಂದು ಸಸಿಗೆ ಪ್ರಾರಂಭದಲ್ಲಿ 5 ಕೆಜಿ ಕೊಡಬೇಕು ನಂತರ ವರ್ಷದಲ್ಲಿ ಜ್ಯಾಸ್ತಿ ಮಾಡಿಕೊಳ್ಳುತ್ತ ಹೋಗಬೇಕು. ಅಂದರೆ ವರ್ಷ ವರ್ಷ ೫ ಕೆಜಿ ಹೆಚ್ಚು ಮಾಡಿಕೊಳ್ಳುತ್ತಾ ಹೋಗಬೇಕು,

ನಿಂಬೆ ಗಿಡಗಳು ನಾಟಿ ಮಾಡಿದ ಮೂರು ವರ್ಷಕ್ಕೆ ಇಳುವರಿ ನೀಡಲು ಆರಂಭಿಸುತ್ತದೆ. ಸುಲಭ ನಿರ್ವಹಣೆಯಿಂದ ಉತ್ತಮ ಇಳುವರಿ ಪಡೆಯಬಹುದು. ಗಿಡಗಳಿಗೆ ಡ್ರಿಪ್‌ ಮೂಲಕ ನೀರು ಹಾಯಿಸಿಬೇಕು. ಗಿಡದ ಬುಡದಿಂದ ಮೂರು ಅಡಿ ಸುತ್ತಳತೆಯಲ್ಲಿ ಹನಿಹನಿಯಾಗಿ ನೀರು ಬೀಳುವಂತೆ ಮಾಡಬೇಕು. ಹನಿ ನೀರುಣ್ಣುವನಿಂಬೆ ಗಿಡಗಳು ಭರ್ತಿ ಫಸಲನ್ನು ಹೊತ್ತು ನಿಲ್ಲುತ್ತವೆ.

ಒಂದು ತಿಂಗಳಲ್ಲಿ 70ರಿಂದ 400 ರೂ.ಗೆ ನಿಂಬೆ ಹಣ್ಣಾಗಿದೆ. ತರಕಾರಿ ಮಾರಾಟಗಾರರು 1 ನಿಂಬೆ ಹಣ್ಣನ್ನು 10 ರೂ.ಗೆ ನೀಡುತ್ತಿದ್ದಾರೆ.ವಿವಿಧ ರಾಜ್ಯಗಳಲ್ಲಿ ರೈತರು ವಿವಿಧ ತಳಿಯ ನಿಂಬೆಯನ್ನು ಬೆಳೆಯುತ್ತಾರೆ. ನಿಂಬೆ ಗಿಡವನ್ನು ಒಮ್ಮೆ ನೆಟ್ಟರೆ 10 ವರ್ಷಗಳವರೆಗೆ ಇಳುವರಿ ಪಡೆಯಬಹುದು . ನಿಂಬೆ ಗಿಡವು ಸುಮಾರು 3 ವರ್ಷಗಳ ನಂತರ ಚೆನ್ನಾಗಿ ಬೆಳೆಯುತ್ತದೆ. ಇದರ ಸಸ್ಯಗಳು ವರ್ಷವಿಡೀ ಇಳುವರಿಯನ್ನು ನೀಡುತ್ತವೆ.

  • ಮುಖದ ಮೇಲೆ ಉಂಟಾಗುವ ಮೊಡವೆಗಳನ್ನು ಹೋಗಲಾಡಿಸಲು ನಿಂಬೆ ಹಣ್ಣು ಸಹಾಯ ಮಾಡುತ್ತದೆ. ನಿಂಬೆ ಹಣ್ಣಿಗೆ ಒಂದು ಹನಿ ಜೇನುತುಪ್ಪ ಬೆರೆಸಿ, ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ತೊಳೆದರೆ, ಮುಖದ ಮೇಲಿನ ಕಪ್ಪು ಕಲೆಗಳು ಮಾಯವಾಗಿ, ಚರ್ಮ ಕಾಂತಿಯುತವಾಗುತ್ತದೆ. ಡೆಡ್ ಸ್ಕಿನ್ ತೆಗೆಯಲು ನಿಂಬೆ ಹಣ್ಣು ಉತ್ತಮ ಔಷಧ.
  • ಪ್ರತಿ ದಿನ ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಒಂದು ಚಮಚದಷ್ಟು ನಿಂಬೆ ರಸ ಸೇರಿಸಿ ಸೇವಿಸಿದರೆ ನಿಶ್ಶಕ್ತಿ ಕಡಿಮೆಯಾಗುತ್ತದೆ.
  • ನಿಂಬೆರಸದೊಂದಿಗೆ ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಿ ಹಲ್ಲುಜ್ಜುವುದರಿಂದ ದಂತ ಸಮಸ್ಯೆ ನಿಯಂತ್ರಣವಾಗುತ್ತದೆ. ಈ ನೀರಿನಲ್ಲಿ ಬಾಯಿಮುಕ್ಕಳಿಸುವುದರಿಂದ ವಸಡುಗಳು ಶಕ್ತಿಯುತವಾಗುತ್ತವೆ.
  • ನಿಂಬೆ ಹಣ್ಣು, ಹಾಲಿನ ಕೆನೆ, ಜೇನುತುಪ್ಪವನ್ನು ಮಿಶ್ರಣ ಮಾಡಿ, ಅದಕ್ಕೆ ಸ್ವಲ್ಪ ಅರಿಶಿಣ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ಹೆಚ್ಚಿಸುತ್ತದೆ.
  • ನಿಂಬೆರಸವನ್ನು ತಲೆಗೂದಲಿಗೆ ಹಚ್ಚಿ ತಲೆ ಸ್ನಾನ ಮಾಡುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
  • ನಿಂಬೆ ಹಣ್ಣಿಗೆ ಹೋಲಿಸಿದರೆ ನಿಂಬೆಹಣ್ಣಿನ ಸಿಪ್ಪೆಯಲ್ಲಿ ಸುಮಾರು ಐದರಿಂದ ಹತ್ತು ಪಟ್ಟು ಹೆಚ್ಚು ವಿಟಮಿನ್ ಅಂಶಗಳು ಸಿಗುತ್ತವೆ. ನಿಂಬೆಹಣ್ಣು ಕೇವಲ ನಿಮ್ಮ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ಬಹಳಷ್ಟು ಸೋಂಕುಗಳಿಂದ ನಿಮಗೆ ರಕ್ಷಣೆ ನೀಡುತ್ತದೆ.
  • ಲೆಮನ್ ಟೀ ಸೇವಿಸುವುದರಿಂದ ನೆಗಡಿ ಶಮನವಾಗುತ್ತದೆ.
  • ನಿಂಬೆ ಹಣ್ಣಿನಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಲಕ್ಷಣಗಳು ಸಿಗುತ್ತವೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist