ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾಲ್ಕು ಫೋನ್ ಗಳಲ್ಲಿ ಒಂದೇ ವಾಟ್ಸಪ್ ಖಾತೆ ಲಾಗಿನ್; ಇಂದಿನಿಂದ ಹೊಸ ಫೀಚರ್ ಬಿಡುಗಡೆ

Twitter
Facebook
LinkedIn
WhatsApp
whatsapp account in one phone

ಒಂದು WhatsApp ಖಾತೆಯನ್ನು ಒಂದೇ ಸಮಯದಲ್ಲಿ ನಾಲ್ಕು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾದ ಬಹುನಿರೀಕ್ಷಿತ ವೈಶಿಷ್ಟ್ಯವು ಇದೀಗ ಲೈವ್ ಆಗಿದೆ. WhatsApp ಒಡೆತನವನ್ನು ಹೊಂದಿರುವ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ‘ಇಂದಿನಿಂದ ನೀವು ನಾಲ್ಕು ಫೋನ್‌ಗಳಲ್ಲಿ ಒಂದೇ WhatsApp ಖಾತೆಗೆ ಲಾಗಿನ್ ಆಗಬಹುದು’ ಎಂದು ತಿಳಿಸಿದ್ದು, ಈ ಮೊಲಕ ಒಂದಕ್ಕಿಂತ ಹೆಚ್ಚು ಪೋನ್ ಹೊಂದಿರುವವರು ಒಂದೇ WhatsApp ಖಾತೆಯನ್ನು ಎಲ್ಲ ಪೋನ್‌ಗಳಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆ ದೂರವಾಗಿದೆ.

ಈ ಹಿಂದೆ ಒಂದು WhatsApp ಖಾತೆಯನ್ನು ಒಂದು ಫೋನ್ ಜೊತೆಗೆ ಕಂಪ್ಯೂಟರ್‌ನಲ್ಲಿ ಮಾತ್ರ ಲಾಗಿನ್ ಮಾಡಬಹುದಾಗಿತ್ತು. ಎರಡು ಫೋನ್‌ಗಳನ್ನು ಹೊಂದಿರುವ WhatsApp ಗ್ರಾಹಕರು ಏಕಕಾಲದಲ್ಲಿ ಒಂದೇ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ‘ಒಂದು WhatsApp ಖಾತೆ ಈಗ ಮಲ್ಟಿಪಲ್ ಫೋನ್‌ಗಳಲ್ಲಿ’ ಎಂದು ವಿರಿಸಲಾಗಿರುವ ಹೊಸ ವೈಶಿಷ್ಟ್ಯದಲ್ಲಿ WhatsApp ಹೊಸ ಬದಲಾವಣೆಗೆ ನಾಂದಿಹಾಡಿದೆ. ಹಾಗಾದರೆ, ಈ ಹೊಸ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದನ್ನು ನೋಡೋಣ ಬನ್ನಿ.

ನಾಲ್ಕು ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನು ಬಳಸುವುದು ಹೇಗೆ?
ನಾಲ್ಕು ಫೋನ್‌ಗಳಲ್ಲಿ ಒಂದೇ WhatsApp ಖಾತೆಯನ್ನು ಬಳಸಲು ನೀವು ನಿಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇತ್ತೀಚಿನ WhatsApp ಅಪ್ಲಿಕೇಶನನ್ನು ಡೌನ್‌ಲೋಡ್ ಅಥವಾ ಅಪ್‌ಡೇಟ್ ಮಾಡಿಕೊಳ್ಳಿ. ನಿಮ್ಮ ಎರಡನೇ ಪೋನ್‌ನಲ್ಲಿ ವಾಟ್ಸಾಪ್ ಖಾತೆಗೆ ಲಾಗಿನ್ ಆಗುವ ಈ ಹೊಸ ವಿಧಾನದಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗುವ ಅವಶ್ಯಕತೆ ಇಲ್ಲ. ಬದಲಾಗಿ ನಿಮ್ಮ ಪ್ರೈಮರಿ ಪೋನ್ WhatsApp ಖಾತೆಯನ್ನು ತೆರೆದು ಅಪ್ಲಿಕೇಶನ್‌ನ ಮೇಲಿನ ಬಲಭಾಗದಲ್ಲಿರುವ ಮೂರು-ಡಾಟ್ ಮೆನುವಿನಲ್ಲಿ ಟ್ಯಾಪ್ ಮಾಡಿ.

ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿದ ನಂತರ ನಿಮಗೆ ‘link to existing account’ ಎಂಬ ಲಿಂಕ್ ಕಾಣಿಸುತ್ತದೆ. ಇದನ್ನು ಟ್ಯಾಪ್ ಮಾಡಿದರೆ QR ಕೋಡ್ ತೆರೆಯುತ್ತದೆ. ಇದನ್ನು ನಿಮ್ಮ ಪ್ರೈಮೆರಿ ಫೋನ್‌ನಲ್ಲಿ ಸ್ಕ್ಯಾನ್ ಮಾಡಿದರೆ ನಿಮ್ಮ ಎರಡನೇ ಫೋನ್‌ನಲ್ಲಿ ನಿಮ್ಮ ಪ್ರಸ್ತುತದ WhatsApp ಖಾತೆ ತೆರೆಯುತ್ತದೆ. ನೀವು ಕಂಪ್ಯೂಟರ್‌ನಲ್ಲಿ ವೆಬ್‌ನೊಂದಿಗೆ ನಿಮ್ಮ WhatsApp ಖಾತೆಯನ್ನು ಸಿಂಕ್ ಮಾಡುವಾಗ ಅನುಸರಿಸುವ ಅದೇ ವಿಧಾನದಲ್ಲಿ ಈ ಹೊಸ ವೈಶಿಷ್ಟ್ಯವು ಸಹ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ.

ಇಲ್ಲಿ ನಾವು ಗಮನಿಸಬೇಕಿರುವ ಅಂಶಗಳೆಂದರೆ, ಎರಡನೇ ಫೋನ್‌ನಲ್ಲಿ ನಿಮ್ಮ WhatsApp ಖಾತೆ 14 ದಿನಗಳ ಕಾಲ ಲಾಗಿನ್ ಇರುತ್ತದೆ. ಅಂದರೆ, ನಿಮ್ಮ ಫೋನ್‌ನಲ್ಲಿ ನಿಮ್ಮ WhatsApp ಖಾತೆಯು ಕಳೆದ 14 ದಿನಗಳಲ್ಲಿ ಒಮ್ಮೆಯಾದರೂ ಇಂಟರ್ನೆಟ್‌ಗೆ ಸಂಪರ್ಕ ಹೊಂದಿರಬೇಕು. ಒಂದು ವೇಳೆ ಅದು ನಿಷ್ಕ್ರಿಯವಾಗಿದ್ದರೆ, ಉಳಿದ ಮೂರು ಸಾಧನಗಳಲ್ಲಿ ನಿಮ್ಮನ್ನು WhatsApp ನಿಂದ ಲಾಗ್ ಔಟ್ ಮಾಡಲಾಗುತ್ತದೆ. ಜೊತೆಗೆ ನಿಮ್ಮ WhatsApp ಖಾತೆಗೆ ಲಿಂಕ್ ಮಾಡಲಾದ ಸಾಧನಗಳ ಬಗ್ಗೆ ಯಾವಾಗಲೂ ಪರಿಶೀಲಿಸುತ್ತಿರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ