ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!
ಬೆಂಗಳೂರು: ನಿನ್ನೆ ತಡರಾತ್ರಿ ಎಲೆಕ್ಟ್ರಾನಿಕ್ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದ ರೇವ್ ಪಾರ್ಟಿಯಲ್ಲಿ (Rave party) ತೆಲುಗು ನಟಿ ಹೇಮಾ (telugu actress Hema) ಭಾಗಿಯಾಗಿದ್ದು, ಪೊಲೀಸ್ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅಲ್ಲಿ ತಾನಿರಲಿಲ್ಲ ಎಂದು ಹೇಮಾ ವಿಡಿಯೋ ಸಂದೇಶ ಹರಿಬಿಟ್ಟಿದ್ದಾರೆ. ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ಮುಜುಗರ ತಪ್ಪಿಸಲು ಅದೇ ಫಾರಂ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿ ಅವರು ಹರಿಬಿಟ್ಟಿದ್ದಾರೆ ಎನ್ನಲಾಗಿದೆ. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಸದ್ಯ ನಟಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
రేవ్ పార్టీలో తాను ఉన్నట్లు వస్తున్న వార్తలను ఖండించిన నటి హేమ
— Aadhan Telugu (@AadhanTelugu) May 20, 2024
బెంగళూరులో జరిగిన రేవ్ పార్టీలో నేను లేను.. నేను హైదరాబాద్లోనే ఫామ్ హౌస్లో ఎంజాయ్ చేస్తున్నా. బెంగళూరు రేవ్ పార్టీతో నాకు సంబంధం లేదు - నటి హేమ#Tollywood #RaveParty #Bangalore #Actress #Hema #ActressHema… pic.twitter.com/Wibo416DNK
ಕಮೋಡ್‌ನಲ್ಲಿ ಫ್ಲಶ್ ಮಾಡಿದರು!
ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದಾರೆ. ಡ್ರಗ್ಸ್ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದಾರೆ. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಸದ್ಯ ಫಾರ್ಮ್ ಹೌಸಿನ ಇಂಚಿಂಚನ್ನೂ ಬಿಡದೆ ಜಾಲಾಡುತ್ತಿದ್ದಾರೆ.
3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್ ಬೆಂಜ್, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ಪೊಲೀಸರು ರೇವ್ ಪಾರ್ಟಿಯಲ್ಲಿದ್ದ 101 ಮಂದಿಯನ್ನೂ ಕೂರಿಸಿಕೊಂಡು, ಯಾರ್ಯಾರು ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ವೈದ್ಯಕೀಯ ಪರೀಕ್ಷೆ ಮಾಡಿಸುತ್ತಿದ್ದಾರೆ. ಮೆಡಿಕಲ್ ಟೀಮನ್ನು ಫಾರಂ ಹೌಸ್‌ಗೆ ಕರೆಸಲಾಗಿದ್ದು, ಮೆಡಿಕಲ್ ಮುಗಿಯುವವರೆಗೆ ಎಲ್ಲ ಅತಿಥಿಗಳನ್ನೂ ಫಾರಂ ಹೌಸ್ ತೊರೆಯದಂತೆ ನಿರ್ಬಂಧಿಸಲಾಗಿದೆ. ಸದ್ಯ 30 ಜನ ಹುಡುಗಿಯರು, 71 ಜನ ಪುರುಷರು ಹೀಗೆ ಒಟ್ಟು 101 ಜನರ ವಿಚಾರಣೆ ನಡೆಯುತ್ತಿದೆ.
ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿವೆ. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿದೆ. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.
ಸ್ಥಳಕ್ಕೆ ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಳೆದಂಡಿ ಆಗಮಿಸಿ ತನಿಖೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದ ವಾಸು ಈ ಹಿಂದೆ ಕೂಡ ಇದೇ ರೀತಿಯ ರೇವ್ ಪಾರ್ಟಿ ಮಾಡಿರುವ ಶಂಕೆ ಇದೆ. ಇನ್ನಷ್ಟು ಡ್ರಗ್ ಪೆಡ್ಲರ್‌ಗಳ ಪತ್ತೆಗೆ ಸಿಸಿಬಿ ಮುಂದಾಗಿದೆ.
ಕಳೆದ ಶುಕ್ರವಾರದಿಂದಲೇ ಪಾರ್ಟಿಗೆ ಸಿದ್ಧತೆ ನಡೆದಿತ್ತು. ಪಾರ್ಟಿಯಲ್ಲಿ ಭಾಗಿಯಾಗಿರುವ ಬಹುತೇಕರು ಆಂಧ್ರ ಮೂಲದ ಉದ್ಯಮಿಗಳು. ಖ್ಯಾತ ಹೋಟೆಲ್‌ಗಳ ಮಾಲೀಕರ ಮಕ್ಕಳು, ತೆಲುಗು ಸಿನಿರಂಗದ ಕಲಾವಿದರು, ಮಾಡೆಲ್‌ಗಳು, ದಕ್ಷಿಣಭಾರತದ ಖ್ಯಾತ ಡಿಜೆಗಳು ಭಾಗಿಯಾಗಿದ್ದಾರೆ. ಆಂಧ್ರ ಮೂಲದವರಾಗಿದ್ದು ಬೆಂಗಳೂರಿನಲ್ಲಿ ಬಿಝಿನೆಸ್ ಹೊಂದಿರುವ ಬಹುತೇಕರು ಇದ್ದರು. ಫಾರಂ ಹೌಸ್‌ನ ಹೊರಗೆ ನಿಂತಿರುವ ವಿಲಾಸಿ ವಾಹನಗಳಲ್ಲಿ ಆಂಧ್ರ ಮೂಲದ ವಾಹನಗಳೇ ಹೆಚ್ಚಿವೆ.