ಶನಿವಾರ, ಏಪ್ರಿಲ್ 20, 2024
ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್ ಪರ ಇಂದು ದರ್ಶನ್ ಬೃಹತ್ ರೋಡ್ ಶೋ..!-ನದಿಯಲ್ಲಿ ದೋಣಿ ಮುಳುಗಿ ಇಬ್ಬರ ಸಾವು; 7 ಮಂದಿ ನಾಪತ್ತೆ..!-ಇಂದು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರಕ್ಕೆ ಮೋದಿ ಆಗಮನ..!-Rain Alert: ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವೆಡೆ ಇಂದು ಮತ್ತು ನಾಳೆ ಗುಡುಗು ಸಹಿತ ಮಳೆ ಮುನ್ಸೂಚನೆ..!-ಅರವಿಂದ್ ಕೇಜ್ರಿವಾಲ್ ರನ್ನು ಜೈಲಿನಲ್ಲೇ ಹತ್ಯೆಗೆ ಸಂಚು ಮಾಡಲಾಗುತ್ತಿದೆ; ಎಎಪಿ ನಾಯಕಿ ಅತಿಶಿ ಆರೋಪ.!-ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ಕೆ. ತ್ರಿಪಾಠಿ ನೇಮಕ-ಇಂದು ಮೊದಲ ಹಂತದ ಲೋಕಸಭಾ ಚುನಾವಣೆ ಆರಂಭ ; ಯಾವೆಲ್ಲಾ ರಾಜ್ಯಗಳಲ್ಲಿ.!-ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!-ಹಾಡಹಗಲೇ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯನ್ನು ಚಾಕುವಿನಿಂದ ಇರಿದು ಬರ್ಬರ ಕೊಲೆ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ ; ಇಲ್ಲಿದೆ ಚಿನ್ನದ ದರದ ವಿವರ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನವೆಂಬರ್ 12 ರಂದು ಪ್ರೇಮಂ ಪೂಜ್ಯಂ ಚಿತ್ರ ರಾಜ್ಯಾದ್ಯಂತ ಬಿಡುಗಡೆ.

Twitter
Facebook
LinkedIn
WhatsApp
ನವೆಂಬರ್ 12 ರಂದು ಪ್ರೇಮಂ ಪೂಜ್ಯಂ ಚಿತ್ರ ರಾಜ್ಯಾದ್ಯಂತ ಬಿಡುಗಡೆ .

ಚಿಕ್ಕಮಗಳೂರು: ನಟ ಲವ್ಲಿ ಸ್ಟಾರ್ ಪ್ರೇಂ ನಾಯಕನಾಗಿ ನಟಿಸಿರುವ ಪ್ರೇಮಂ ಪೂಜ್ಯಂ ಚಿತ್ರ ನವೆಂಬರ್ 12 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರದ ನಿರ್ದೇಶಕ ಡಾ.ಬಿ.ಎಸ್.ರಾಘವೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ವೈದ್ಯನಾಗಿ ತಮಗೆ ತೃಪ್ತಿ ಇದ್ದರೂ ಚಲನ ಚಿತ್ರ ನಿರ್ಮಾಣ, ಚಿತ್ರಕಥೆ, ಸಂಬಾಷಣೆ ಬರೆಯುವ ಬಗ್ಗೆ ಮೊದಲಿನಿಂದಲೂ ಒಲವಿತ್ತು. ಮಾಸ್ಟರ್ ಆನಂದ್ ಅವರು ಬೆಂಬಲಕ್ಕೆ ನಿಂತು ಹುರಿದುಂಬಿಸಿದ ಪರಿಣಾಮ ಮೊದಲ ಚಿತ್ರ ಪ್ರೇಮಂ ಪೂಜ್ಯಂ ನಿರ್ದೇಶಿಸಿದ್ದೇನೆ ಎಂದರು.

ಈ ಚಿತ್ರ ಪ್ರೇಂ ಅವರ ೨೫ ನೇ ಚಿತ್ರವಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಚಿತ್ರೀಕರಣ ನಡೆದಿದೆ. ಉತ್ತಮ ಹಾಡುಗಳನ್ನು ಒಳಗೊಂಡಿದೆ. ಅದಕ್ಕೆ ಜನಮನ್ನಣೆಯೂ ಸಿಕ್ಕಿದೆ. ಬೃಂದಾ ಆಚಾರ್ಯ, ಸಾಧು ಕೋಕಿಲ ಇನ್ನಿತರೆ ನಟರು ಇದ್ದಾರೆ ಎಂದರು.
ಉತ್ತಮ ಸಾಹಿತ್ಯ, ಸಂಗೀತ, ತಾರಾ ಬಳಗವನ್ನು ಚಿತ್ರ ಒಳಗೊಂಡಿದೆ. ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕರು ಚಿತ್ರೀಕರಣ ಮಾಡಿದ್ದಾರೆ. ಚಿತ್ರೀಕರಣದ ಸಂದರ್ಭ ಖರ್ಚಿನ ವಿಚಾರದಲ್ಲಿ ಯಾವುದೇ ವಿಭಾಗದಲ್ಲೂ ರಾಜಿ ಮಾಡಿಕೊಂಡಿಲ್ಲ. ಊಟಿ, ಪೂನಾ, ಚಿಕ್ಕಮಗಳೂರು, ಮಳವಳ್ಳಿ, ಮಂಡ್ಯ, ಧರ್ಮಶಾಲಾ, ವಿಯೆಟ್ನಾಂ ಇತರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು.

ನಟ ಪ್ರೇಂ ಮಾತನಾಡಿ, ಪ್ರೇಮವನ್ನು ಪೂಜನೀಯ ಭಾವನೆಯಿಂದ ನೋಡುವುದೇ ಪ್ರೇಮಂ ಪೂಜ್ಯಂ. ಪ್ರೇಮಿಗಳ ನಡುವಿನ ಪ್ರೀತಿ ಜೊತೆಗೆ ತಂದೆ ತಾಯಿ, ಸ್ನೇಹಿತರು, ಸಮಾಜ ಜೊತೆಗೆ ನಮ್ಮ ವೃತ್ತಿ ಧರ್ಮವನ್ನು ಯಾವ ರೀತಿ ಪ್ರೀತಿಸುತ್ತೇವೆ ಎನ್ನುವ ಕಥಾ ವಸ್ತು ಇದಾಗಿದ್ದು ಇಡೀ ಕುಟುಂಬ ಕುಳಿತು ವೀಕ್ಷಿಸಬಹುದಾದ ಅದ್ಭುತವಾದ ಸಾಂಸಾರಿಕ ಚಿತ್ರ ವಾಗಿದ್ದು, ಎಲ್ಲಾ ವಯೋಮಾನದವರನ್ನೂ ಇದು ತಲುಪುತ್ತದೆ ಎಂದರು.
ಕೋವಿಡ್‌ನಿಂದ ಇಡೀ ಚಿತ್ರೋದ್ಯಮ ಭಾರೀ ನಷ್ಟ ಅನುಭವಿಸಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕಲಾವಿದರು ಸೇರಿದಂತೆ, ಚಿತ್ರಮಂದಿರಗಳು, ನೌಕರರು ಎಲ್ಲರಿಗೂ ಮತ್ತೆ ಒಳ್ಳೆಯ ಚಿತ್ರಗಳ ಮೂಲಕ ಒಳಿತಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ನಟ ಮಾಸ್ಟರ್ ಆನಂದ್ ಮಾತನಾಡಿ ಚಿತ್ರದಲ್ಲಿ ಉತ್ತಮ ಸ್ನೇಹಿತನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಎಲ್ಲರನ್ನೂ ರಂಜಿಸಲಿದೆ. ಎಲ್ಲರೂ ಚಿತ್ರಮಂದಿರಗಳಿಗೆ ತೆರಳಿ ವೀಕ್ಷಿಸುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!

ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು