ಶನಿವಾರ, ಮೇ 18, 2024
ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನವಾಜುದ್ದೀನ್ ಸಿದ್ದಿಕಿ ಪರ ಬ್ಯಾಟಿಂಗ್ ಮಾಡಿದ ಕಂಗನಾ ರಣಾವತ್

Twitter
Facebook
LinkedIn
WhatsApp
Nawazuddin Siddiqui IIFA 2017 Green Carpet 36349709816 cropped

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಇವರ ಹೆಂಡತಿಯ ಜಗಳ ನಾನಾ ರೂಪ ಪಡೆದುಕೊಳ್ಳುತ್ತಿದೆ. ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಹೆಂಡತಿಯ ವಿರುದ್ಧ ಹಲವು ಪೋಸ್ಟ್ ಗಳನ್ನು ಸಿದ್ದಿಕಿ ಹಾಕಿದ್ದರು. ಹಲವು ದಿನಗಳ ನಂತರ ಮೌನ ಮುರಿದಿದ್ದರು. ನವಾಜುದ್ದೀನ್ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಂತೆಯೇ ನಟಿ ಕಂಗನಾ ರಣಾವತ್ (Kangana Ranaut) ಪ್ರಕರಣದಲ್ಲಿ ಪ್ರವೇಶ ಮಾಡಿದ್ದಾರೆ. ಮೌನ ಯಾವತ್ತು ನೋವನ್ನುಂಟು ಮಾಡುತ್ತಿದೆ. ಎಲ್ಲವನ್ನೂ ಹಂಚಿಕೊಂಡಿದ್ದೀರಿ. ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ.

No photo description available.

ನವಾಜುದ್ದೀನ್ ಸಿದ್ದಿಕಿ ಹಾಗೂ ಪತ್ನಿ ಆಲಿಯಾ (Alia) ನಡುವಿನ ಜಗಳ ಅಕ್ಷರಶಃ ಆಡಿಕೊಳ್ಳುವಂತಾಗಿದೆ. ನವಾಜುದ್ದೀ ನ್ ಮೇಲೆ ಪತ್ನಿ ಆಲಿಯಾ ಅನೇಕ ರೋಪಗಳನ್ನು ಮಾಡಿದ್ದರು. ಅತ್ತೆಯ ಕಿರುಕುಳ ಸೇರಿದಂತೆ, ತನಗೆ ಅನ್ನ ನೀರು ಕೊಡದೇ ಕೂಡಿ ಹಾಕಲಾಗಿತ್ತು ಎಂದೆಲ್ಲ ಹೇಳಿದ್ದರು. ತಮ್ಮಿಂದ ಮಕ್ಕಳನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದೂ ಅವರು ಆರೋಪಿಸಿದ್ದರು.

Aaliya Siddiqui's advocate says Nawazuddin Siddiqui and family did  'everything possible' to remove actor's wife from the house

ಪತ್ನಿಯ ಯಾವ ಮಾತಿಗೂ ಈವರೆಗೂ ಪ್ರತಿಕ್ರಿಯಿಸದ ನವಾಜುದ್ದೀನ್, ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಅಸಲಿಯಾಗಿ ಆಲಿಯಾ ನನ್ನ ಪತ್ನಿಯಲ್ಲ, ಆಕೆ ಡಿವೋರ್ಸ್ ತಗೆದುಕೊಂಡಿದ್ದಾಳೆ. ಆದರೆ, ಆಕೆ ಈಗ ಕೇವಲ ನನ್ನ ಮಕ್ಕಳ ತಾಯಿಯಷ್ಟೇ ಎಂದು ಬರೆದುಕೊಂಡಿದ್ದಾರೆ. ತಿಂಗಳಿಗೆ ಸರಾಸರಿ ಹತ್ತು ಲಕ್ಷ ರೂಪಾಯಿ ಕೊಟ್ಟಿದ್ದೇನೆ. ದುಡ್ಡಿನ ದಾಹಕ್ಕೆ ಆಲಿಯಾ ಆರೋಪಿಸುತ್ತಿದ್ದಾಳೆ ಎಂದು ಹೇಳಿಕೊಂಡಿದ್ದಾರೆ.

Nawazuddin Siddiqui Secret Video Row: Kangana Ranaut Slams Actor's Ex-Wife  Aaliya, Says 'Ye Kya Badmashi Hai' - Filmibeat

ಇನ್ಸ್ಟಾಗ್ರಾಮ್ ಮೂಲಕ ಸಂಸಾರದ ಅನೇಕ ವಿಷಯಗಳನ್ನೂ ಹಂಚಿಕೊಂಡಿರುವ ನವಾಜುದ್ದೀನ್, ‘ಆಲಿಯಾ ಸಿನಿಮಾ ಮಾಡಲು ಕೋಟಿ ಕೋಟಿ ಕಳೆದುಕೊಂಡದ್ದೇನೆ. ಮಕ್ಕಳೊಂದಿಗೆ ಆಕೆ ಚೆನ್ನಾಗಿರಲಿ ಎನ್ನುವ ಕಾರಣಕ್ಕಾಗಿ ದುಬಾರಿ ಫ್ಲ್ಯಾಟ್ ಕೊಡಿಸಿದ್ದೇನೆ. ಅಲ್ಲದೇ, ಮಕ್ಕಳಿಗಾಗಿ ದುಬೈನಲ್ಲೂ ಅಪಾರ್ಟ್ಮೆಂಟ್ ನೀಡಿದ್ದೇನೆ. ಅಲ್ಲಿ ಅವಳೂ ಇದ್ದಳು. ಇಷ್ಟೆಲ್ಲ ಮಾಡಿದರೂ, ನನ್ನ ಮೇಲೆ ಆರೋಪ ಮಾಡಿದ್ದಾಳೆ’ ಎಂದು ಬರೆದುಕೊಂಡಿದ್ದಾರೆ.

ಆಲಿಯಾ ಮಾಧ್ಯಮಗಳ ಮುಂದೆ ತಮ್ಮ ಮಾನ ಹರಾಜು ಮಾಡುತ್ತಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದು, ತಮ್ಮ ಭಾವನೆಗಳ ಜೊತೆ ಅವರು ಆಟವಾಡುತ್ತಿದ್ದಾರೆ ಎಂದು ದೂರಿದ್ದಾರೆ. ಏಕಪಕ್ಷೀಯ ರೀತಿಯ ವಿಡಿಯೋಗಳನ್ನು ಹಾಕುತ್ತಿರುವವರ ಕುರಿತಾಗಿಯೂ ಅವರು ಮಾತನಾಡಿದ್ದಾರೆ. ಮಕ್ಕಳಿಗಾಗಿ ಇವೆಲ್ಲವನ್ನೂ ಸಹಿಸಿಕೊಳ್ಳುತ್ತಿರುವುದಾಗಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ