ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಯನಾಡು: ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಣೆ; ಅಮೃತಾ ಮಹೋತ್ಸವ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಸಹಾಯಾರ್ಥ

Twitter
Facebook
LinkedIn
WhatsApp
ನಯನಾಡು: ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಣೆ; ಅಮೃತಾ ಮಹೋತ್ಸವ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಸಹಾಯಾರ್ಥ

ಸಂತ ಜೋಸೆಪರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ಪಿಲಾತ್ತಬೆಟ್ಟು: 75ನೇ ಅಮೃತ ಮಹೋತ್ಸವವನ್ನು ನಯನಾಡು ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಊರ ಬಾಂಧವರಿಂದ ಗಣ್ಯರೊಡನೆ ನಡೆಯಿತು. ನಯನಾಡು ಜಂಕ್ಷನ್ ನಿಂದ ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯದೊಂದಿಗೆ ಮೆರವಣಿಗೆಯ ಮೂಲಕ ಶಾಲಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ ನಯನಾಡು ಚರ್ಚ್ ಗುರುಗಳಾದ ವಂದನೀಯ ಫಾದರ್ ಡಾ. ರೊಕಿ ರವಿ ಫೆರ್ನಾಂಡಿಸ್ ಹಾಗೂ ಮುಖ್ಯ ಅತಿಥಿಗಳಾಗಿ ನಯನಾಡು ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಪೊಲೀಸ್ ಕಾನ್ಸ್ಟೇಬಲ್ ಶ್ರೀ ಏಕನಾಥರಾವ್ ಹಾಗೂ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಶ್ರೀ ಲಕ್ಷ್ಮೀನಾರಾಯಣ ಹೆಗಡೆ ಮತ್ತು ಗ್ರಾಮ ಪಂಚಾಯತ್ ಸದಸ್ಯರಾದಂತಹ ಶ್ರೀಮತಿ ಶಾರದಾ, ಶ್ರೀ ನೆಲ್ವಿಸ್ಟರ್ ಪಿಂಟೊ ಹಾಗೂ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಮೋಂತಿ ಇವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದಂತಹ ಶ್ರೀ ಜೆರಾಲ್ಡ್ ಮೊರಸ್ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ನಯನಾಡು: ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಣೆ; ಅಮೃತಾ ಮಹೋತ್ಸವ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಸಹಾಯಾರ್ಥ

ಶಾಲಾ ನಾಯಕರು ಧ್ವಜಾರೋಹಣಕ್ಕೆ ಚಾಲನೆ ನೀಡಿ ಮುಖ್ಯ ಅತಿಥಿಗಳಾದ ಶ್ರೀ ಏಕನಾಥ್ ರಾವ್ ರವರು ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯಕ್ಕೆ ಉದ್ದೇಶಿಸಿ ಇವರು ಜಾತಿ ಮತ ಇಲ್ಲದೆ ಎಲ್ಲರೂ ಒಗ್ಗಟ್ಟಾಗಿ ದೇಶ ಬೆಳೆಸಬೇಕೆಂದರು. ಚರ್ಚ್ ಗುರುಗಳು ಅಮೃತ ಮಹೋತ್ಸವಕ್ಕೆ ಶುಭ ಕೋರಿ ಶುಭನುಡಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಹಲವು ಆಕರ್ಷಣೀಯ ಹಾಗೂ ಮನರಂಜನೀಯ ಕಾರ್ಯಕ್ರಮ ನೀಡಿದರು. ಸಣ್ಣ ಪುಟಾಣಿಗಳು ನೃತ್ಯ ಹಲವರ ಗಮನ ಸೆಳೆದವು ಸ್ವಾತಂತ್ರೋತ್ಸವದ ಅಂಗವಾಗಿ ಶಾಲೆಯಲ್ಲಿ ನೆರವೇರಿಸಲಾದ ಹಲವು ಸ್ಪರ್ಧೆಗಳ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಹೀಗೆ ವಿಜೃಂಭಣೆಯಿಂದ ಊರ ಗಣ್ಯರ ಸಹಕಾರದೊಂದಿಗೆ 75ನೇ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಗೆಳೆಯರ ಬಳಗದ ವತಿಯಿಂದ ರೂಪಾಯಿ 10000 ಪ್ರಾಥಮಿಕ ಶಾಲೆಗೆ ನೀಡಿದರು.

ನಯನಾಡು: ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವಿಜೃಂಭಣೆಯಿಂದ ಆಚರಣೆ; ಅಮೃತಾ ಮಹೋತ್ಸವ ಸಂದರ್ಭದಲ್ಲಿ ಗೆಳೆಯರ ಬಳಗದ ವತಿಯಿಂದ ಸಹಾಯಾರ್ಥ

ಸರಕಾರಿ ಪ್ರೌಢಶಾಲೆ ನಯನಾಡು 

ಸರಕಾರಿ ಪ್ರೌಢಶಾಲೆ ನಯನಾಡು ಹಲವಾರು ಹೆಗ್ಗಳಿಕೆ ಹೊಂದಿದ ಒಂದು ಗುಣಮಟ್ಟದ ಶಾಲೆ. ಇಲ್ಲಿ ವಿದ್ಯಾರ್ಥಿಗಳೊಂದಿಗೆ ಹಾಗೂ ಹಳೆ ವಿದ್ಯಾರ್ಥಿಗಳ ಉಪಸ್ಥಿತಿಯೊಂದಿಗೆ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಹರೀಶ್ ಪೂಜಾರಿ ಕಜೆ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಜೊಯೆಲ್ ಲೋಬೋ, ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೊ, ಉಪಾಧ್ಯಕ್ಷರಾದ ಲಕ್ಷ್ಮಿನಾರಾಯಣ, ಸದಸ್ಯರಾದ ಶಾರದಾ, ಎಸ್ಡಿಎಂಸಿ ಸದಸ್ಯರಾದ ಶ್ರೀ ಹರೀಶ್ ಶೆಟ್ಟಿ ಮತ್ತು ಇತರ ಎಸ್ ಡಿ ಎಂ ಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶ್ರೀ ಹರೀಶ್ ಪೂಜಾರಿ ಕಜೆ ಇವರು ಧ್ವಜಾರೋಹಣವನ್ನು ನೆರವೇರಿಸಿ ಅಮೃತ ಮಹೋತ್ಸವದ ಬಗ್ಗೆ ಮಾತುಗಳನ್ನು ಹಾಡಿದರು. ತದನಂತರ ಶಾಲಾ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹತ್ತನೇ ತರಗತಿಯಲ್ಲಿ 90 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಕ್ಷಕರ ವತಿಯಿಂದ ಸನ್ಮಾನಿಸಲಾಯಿತು ಸರಿ ಸುಮಾರು ಒಂದು ಲಕ್ಷದಷ್ಟು ಹಣವನ್ನು ಶಿಕ್ಷಕರು ತಮ್ಮ ಪಠ್ಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಂಚಿದರು. ಇದೊಂದು ಮಾದರಿ ನಡೆ. ಗೆಳೆಯರ ಬಳಗ ಸೇವಾ ಸಂಸ್ಥೆಯು, ಸರಕಾರಿ ಪ್ರೌಢಶಾಲೆ ನಯನಾಡು ಇಲ್ಲಿಗೆ ಅತೀ ಅಗತ್ಯವಾಗಿ ಬೇಕಾಗಿದ್ದ ತರಗತಿ ಕೊಠಡಿಗಳ ಗ್ರೀನ್ ಬೋರ್ಡ್ ಗಳನ್ನು ಒದಗಿಸಿತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ 3 ಗ್ರೀನ್ ಬೋರ್ಡ್ ಗಳನ್ನು ಶಾಲೆಗೆ ಗೆಳೆಯರ ಬಳಗ ಸೇವಾ ಸಂಸ್ಥೆಯ ಅಧ್ಯಕ್ಷರಾದ ಡೋನ್ ಪ್ರವೀಣ್ ಕ್ರಾಸ್ತಾ, ಕಾರ್ಯದರ್ಶಿ ಅನಿಲ್ ಮೋರಸ್, ನಿರ್ದೇಶಕರು ಗಳಾದ ವಸಂತ್ ಸಾಲ್ಯಾನ್, ಮದುಕರ ಶೆಟ್ಟಿ, ಅರುಣ್ ಫೆರ್ನಾಂಡಿಸ್, ವಿನ್ಸಟ್ ಫೆರ್ನಾಂಡಿಸ್, ಅವಿಲ್ ಡಿಸೋಜಾ, ಮತ್ತು ಸರ್ವ ಸದಸ್ಯರು ಉಪಸ್ಥಿತಿತರಿದ್ದು ಹಸ್ತಾಂತರಿಸಲಾಯಿತು.. 

WhatsApp Image 2022-08-16 at 10.15.50 AM
WhatsApp Image 2022-08-16 at 10.15.49 AM

ಗೆಳೆಯರ ಬಳಗ ಸೇವಾ ಸಂಸ್ಥೆ ನಯನಾಡು ಈ ಹೆಸರು ಪಿಲಾತ್ತಬೆಟ್ಟು ಗ್ರಾಮದ ಸುತ್ತಮುತ್ತ ಯಾವಾಗಲೂ ಜನರ ಬಾಯಲ್ಲಿ ಕೇಳಿ ಬರುತ್ತದೆ.. ಇದಕ್ಕೆ ಕಾರಣ ಇವರು ಮಾಡುವ ಸೇವಾ ಚಟುವಟಿಕೆಗಳು.. ಕೊರೋನಾ ಕಾಲ‌ ಘಟ್ಟದಲ್ಲಿ ಆರ್ಥಿಕವಾಗಿ ಸಂಕಷ್ಟದಲದಲ್ಲಿರುವ ಕುಟುಂಬಗಳಿಗೆ ಕಿಟ್ ವಿತರಣೆಯ ಮೂಲಕ ಸಹಾಯಹಸ್ತ ಚಾಚಿತ್ತು.. ಅನೇಕ ಅನಾರೋಗ್ಯ ಪೀಡಿತ ಬಡವರಿಗೆ ಚಿಕಿತ್ಸೆಗೆ ಸಹಾಯಧನ ವಿತರಿಸಿದೆ.. ರಸ್ತೆ ರಿಪೇರಿಯಂತಹ ಅನೇಕ ಶ್ರಮದಾನಗಳನ್ನು ನಡೆಸಿದೆ..

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ