ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಮೀಬಿಯಾದಿಂದ ತರಲಾಗಿದ್ದ ಮತ್ತೊಂದು ಚೀತಾ ಸಾವು

Twitter
Facebook
LinkedIn
WhatsApp
342209727 1587805555027553 6420748993116079768 n 11

ಮಧ್ಯಪ್ರದೇಶ, ಏ 24 : ಕಳೆದ ವರ್ಷ ನಮೀಬಿಯಾದಿಂದ ತರಲಾದ 8 ಚೀತಾಗಳ ಪೈಕಿ ಮತ್ತೊಂದು ಚೀತಾ ಮೃತಪಟ್ಟಿದೆ. ಅನಾರೋಗ್ಯದಿಂದ 6 ವರ್ಷದ ಗಂಡು ಚೀತಾ ‘ಉದಯ್’​ ಮೃತಪಟ್ಟಿದೆ.

ಮಧ್ಯಪ್ರದೇಶದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ‘ಸಾಶಾ’ ಹೆಸರಿನ ಚೀತಾ ಕೆಲತಿಂಗಳ ಹಿಂದೆ ಮೃತಪಟ್ಟಿತ್ತು.ಏಪ್ರಿಲ್​ 23ರ ಭಾನುವಾರ ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 4 ಗಂಟೆ ಸಮಯದಲ್ಲಿ ಚೀತಾ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಉದಯ್ ಚೀತಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಮಾಹಿತಿ ನೀಡಿದ್ದಾರೆ. ಪಶುವೈದ್ಯಕೀಯ ತಂಡ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಿದೆ. ಸಂಪೂರ್ಣ ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮತ್ತು ಛಾಯಾಗ್ರಹಣ ಮಾಡಲಾಗುತ್ತದೆ.

ಭಾರತದಲ್ಲಿ ಚೀತಾ ಸಂತತಿ ಅವಸಾನ ಕಂಡಿದ್ದವು. ದೇಶದಲ್ಲಿ ಮತ್ತೆ ಚೀತಾ ಸಂತತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಚೀತಾಗಳನ್ನು ಮರುಪರಿಚಯಿಸುವ ಕಾರ್ಯಕ್ರಮವನ್ನು ರೂಪಿಸಿತ್ತು. ಅದರಂತೆ ನಮೀಬಿಯಾದಿಂದ ಒಟ್ಟು 8 ಚೀತಾಗಳನ್ನು ತಂದು ಮಧ್ಯಪ್ರದೇಶದ ಕುನೊ ನ್ಯಾಷನಲ್‌ ಪಾರ್ಕ್‌ಗೆ ಬಿಡಲಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ