ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ನನ್ನ ಬಾಳಲ್ಲೂ ಅಂಥ ಪುಟಗಳಿವೆ’; ನಗುಮುಖದ ಸುಂದರಿ ಮೃಣಾಲ್ ಠಾಕೂರ್ ಕಣ್ಣೀರು

Twitter
Facebook
LinkedIn
WhatsApp
file7kz3ooflvhwsmtlldoy1679439394 1

ನಟಿ ಮೃಣಾಲ್ ಠಾಕೂರ್ (Mrunal Thakur) ಅವರಿಗೆ ‘ಸೀತಾ ರಾಮ’ ಸಿನಿಮಾದಿಂದ ದೊಡ್ಡ ಜನಪ್ರಿಯತೆ ಸಿಕ್ಕಿದೆ. ಅವರು ಈ ಗೆಲುವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆದಿದ್ದು ಮಾತ್ರವಲ್ಲ ಬಾಕ್ಸ್​ ಆಫೀಸ್​ನಲ್ಲೂ ಗೆದ್ದಿದೆ. ಈಗ ಅವರು ಕಣ್ಣೀರು ಹಾಕುತ್ತಿರುವ ಸೆಲ್ಫಿ ಪೋಸ್ಟ್ ಮಾಡಿದ್ದಾರೆ. ಇದು ಅನೇಕರಿಗೆ ಆತಂಕ ಮೂಡಿಸಿದೆ.  ತಾವು ಅಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ಅಂದಹಾಗೆ ಮೃಣಾಲ್​ ಕಣ್ಣೀರು ಹಾಕುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದು ಸಿಂಪತಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅಲ್ಲ. ಅದಕ್ಕೆ ಅವರು ಕಾರಣ ನೀಡಿದ್ದಾರೆ.

May be an image of 1 person, standing and body of water

ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರ ಬಾಳಲ್ಲೂ ಒಂದಷ್ಟು ಕಹಿಘಟನೆಗಳು ನಡೆದಿರುತ್ತವೆ. ಆ ದಿನಗಳಿಗೆ ಮರಳಿ ಹೋಗಲು ಅನೇಕರಿಗೆ ಇಷ್ಟವಿರುವುದಿಲ್ಲ. ಹೊರಗಿನಿಂದ ನೋಡುವವರಿಗೆ ಸೆಲೆಬ್ರಿಟಿಗಳಿಗೆ ಕಷ್ಟವೇ ಇರುವುದಿಲ್ಲ ಎನ್ನುವ ಭಾವನೆ ಇರುತ್ತದೆ. ಆದರೆ, ಅಸಲಿಗೆ ಹಾಗಿರುವುದಿಲ್ಲ. ಅನೇಕ ಸೆಲೆಬ್ರಿಟಿಗಳು ತಮ್ಮ ನೋವನ್ನು ಸಮಾಜದ ಎದುರು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಮೃಣಾಲ್ ಇದಕ್ಕೆ ಭಿನ್ನ. ಅವರು ಸದ್ಯ ಹಂಚಿಕೊಂಡಿರೋ ಫೋಟೋ ವೈರಲ್ ಆಗಿದೆ.

May be an image of 1 person and standing

ಅಳುತ್ತಿರುವ ಫೋಟೋನ ಸ್ಟೇಟಸ್​ನಲ್ಲಿ ಶೇರ್ ಮಾಡಿಕೊಂಡಿರುವ ಅವರು ಅದಕ್ಕೆ ಕ್ಯಾಪ್ಶನ್ ನೀಡಿದ್ದಾರೆ. ‘ನಿನ್ನೆ ಕಠಿಣವಾಗಿತ್ತು. ಆದರೆ ಇಂದು ನಾನು ಬಲಶಾಲಿ, ಬುದ್ಧಿವಂತೆ ಮತ್ತು ಸಂತೋಷವಾಗಿದ್ದೇನೆ. ಪ್ರತಿಯೊಬ್ಬರ ಕಥೆಗಯಲ್ಲೂ ದೊಡ್ಡದಾಗಿ ಓದಲಾಗದ ಒಂದಷ್ಟು ಪುಟಗಳು ಇದ್ದೇ ಇರುತ್ತದೆ. ಆದರೆ, ನಾನು ಆ ಪುಟುಗಳನ್ನು ಏರು ಧ್ವನಿಯಲ್ಲಿ ಓದುತ್ತಿದ್ದೇನೆ. ನಾನು ಕಲಿತ ಪಾಠವನ್ನು ಯಾರಾದರೂ ಕಲಿಯಬೇಕಾಗಿ  ಬರಬಹುದು. ನಿಷ್ಕಪಟ ಮತ್ತು ದುರ್ಬಲವಾಗಿರುವುದು ಒಳ್ಳೆಯದೇ’ ಎಂದು ಅವರು ಬರೆದುಕೊಂಡಿದ್ದಾರೆ.

May be an image of 1 person, standing, jewelry and indoor

ನಂತರ ಮತ್ತೊಂದು ವಿಡಿಯೋ ಹಂಚಿಕೊಂಡಿರುವ ಮೃಣಾಲ್, ಕಣ್ಣೀರು ಹಾಕುತ್ತಿರುವುದು ಹಳೆಯ ಫೋಟೋ ಎಂದು ಹೇಳಿದ್ದಾರೆ. ತುಂಬಾನೇ ಕಷ್ಟದ ದಿನಗಳಲ್ಲಿ ತೆಗೆದ ಫೋಟೋ ಎಂಬುದನ್ನು ಅವರು ವಿವರಿಸಿದ್ದಾರೆ. ಜೊತೆಗೆ ಇಂದು ಖುಷಿಯಲ್ಲಿರುವುದಾಗಿ ಅವರು ಹೇಳಿದ್ದಾರೆ.

May be an image of 1 person

ತೆಲುಗಿನ ‘ಸೀತಾ ರಾಮಂ’ ಯಶಸ್ಸಿನ ನಂತರದಲ್ಲಿ ಅವರಿಗೆ ಸಾಕಷ್ಟು ತೆಲುಗು ಸಿನಿಮಾ ಆಫರ್​ಗಳು ಬರುತ್ತಿವೆ. ಈ ಕಾರಣಕ್ಕೆ ಅವರು ಹೈದರಾಬಾದ್​ನಲ್ಲಿ ಮನೆ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ, ನಟಿ ಇದನ್ನು ಸ್ಪಷ್ಟಪಡಿಸಿಲ್ಲ. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಸೀತಾ ರಾಮಂ ಬಳಿಕ ಹಲವು ಆಫರ್ ಅವರ ಹುಡುಕಿ ಬಂದಿವೆ.

May be an image of 1 person and standing

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ