ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್ ಗಾಂಧಿ – ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಮ್ಯಾ ಮಾತು
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅನ್ ಸೀನ್ ಎಪಿಸೋಡ್‌ನಲ್ಲಿ ರಮ್ಯಾ ಈ ಹೇಳಿಕೆ ನೀಡಿದರು. “ನನ್ನ ಜೀವನದ ಮೊದಲ ಪ್ರಭಾವಶಾಲಿ ವ್ಯಕ್ತಿ ನನ್ನ ತಾಯಿ, ಎರಡನೇಯವರು ನನ್ನ ತಂದೆ, ಮೂರನೇ ಅವರು ರಾಹುಲ್ ಗಾಂಧಿ” ಎಂದು ಹೇಳಿಕೊಂಡು ರಮ್ಯಾ ಗದ್ಗದಿತರಾದರು. “ನಾನು ಸುಳ್ಳು ಹೇಳಲ್ಲ. ನನ್ನ ತಂದೆ ನಿಧನ ಹೊಂದಿದಾಗ ನನ್ನ ಜೀವನವನ್ನ ಕೊನೆ ಮಾಡಿಕೊಳ್ಳಬೇಕು ಅಂದ್ಕೊಂಡಿದ್ದೆ. ಆಗ ನನಗೆ ತುಂಬಾ (ರಾಹುಲ್ ಗಾಂಧಿ) ಸಹಾಯ ಮಾಡಿದ್ರು. ಸಾವು ಅಂದ್ರೇನು? ಬದುಕು ಅಂದ್ರೇನು? ನಾವು ಏನಕ್ಕೆ ಬಂದಿದ್ದೇವೆ ಅಂತಾ ಧೈರ್ಯ ತುಂಬಿದ ಮೂರನೇ ಪ್ರಭಾವಶಾಲಿ ಎಂದು ನೆನಪಿಸಿಕೊಂಡು ರಮ್ಯಾ ಹನಿಗಣ್ಣಾದರು.
ನಮ್ಮ ಬದುಕಿನ ಉದ್ದೇಶದ ಬಗ್ಗೆ ರಾಹುಲ್ ಹೇಳಿದ್ರು. ನನಗೆ ರಾಹುಲ್ ಗಾಂಧಿ ಎಮೋಶನಲ್ ಆಗಿ ಸಪೋರ್ಟ್ ಮಾಡಿದ್ರು. ನಾನು ಮೊದಲು ಪಾರ್ಲಿಮೆಂಟ್‌ಗೆ ಹೋದಾಗ ನನಗೆ ಏನೂ ಗೊತ್ತಿರಲಿಲ್ಲ. ನಾನು ಕಲಿತೆ, ಇದಕ್ಕೆ ಮಂಡ್ಯ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಮಂಡ್ಯ ಜನರು ಇಲ್ಲ ಅಂದಿದ್ರೆ ನನಗೆ ಆ ಧೈರ್ಯ ಬರ್ತಿರಲಿಲ್ಲ ಎಂದು ನೆನೆದರು.
ಪೊಲಿಟಿಕಲ್ ಕಮ್ಯುನಿಕೇಶನ್ ತುಂಬಾ ಕಷ್ಟ. ಮನನರಂಜನೆ ತುಂಬಾ ಸುಲಭ. ನ್ಯೂಸ್ ಹಿಂದೆ ಬೀಳುವುದು ಕಷ್ಟ. ನಾವು 24*7 ನ್ಯೂಸ್ ಚಾನೆಲ್ ಥರಾ ಕೆಲಸ ಮಾಡುತ್ತಿದ್ದೆವು ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯ ದಿನಗಳನ್ನ ನೆನಪಿಸಿಕೊಂಡು ಪಕ್ಷ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದರು.