ಶನಿವಾರ, ಮೇ 4, 2024
ಕೋವಿಶೀಲ್ಡ್ ಆತಂಕದ ನಡುವೆ ಕೋವಾಕ್ಸಿನ್ ಸುರಕ್ಷತೆ ಬಗ್ಗೆ ಭಾರತ್ ಬಯೋಟೆಕ್ ಸ್ಪಷ್ಟನೆ ಏನು?-ಜೆಡಿಎಸ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಮೇಲೆ ಅತ್ಯಾಚಾರ ಆರೋಪ ; ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲು..!-4 ವರ್ಷಗಳ ಪದವಿ ಕೋರ್ಸ್ ನಿಯಮ ಸ್ಥಗಿತ: 3 ವರ್ಷದ ಡಿಗ್ರಿ ವ್ಯಾಸಂಗಕ್ಕೆ ಸರ್ಕಾರ ಸೂಚನೆ..!-ಮೊಬೈಲ್ ನಲ್ಲಿ ಅತ್ತೆಯನ್ನೇ ಹೊಡೆದು ಕೊಂದ ಸೊಸೆ; ಕುಸಿದು ಬಿದ್ದು ಸಾವು ಎಂದು ಕಥೆ..!-ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ನನ್ನ ಖಾಸಗಿ ಭಾಗಕ್ಕೆ ಗುದ್ದುತ್ತಿದ್ದ’; ಬಾಯ್​​ಫ್ರೆಂಡ್ ಬಗ್ಗೆ ‘ನಮ್ಮಣ್ಣ’ ಸಿನಿಮಾ ನಟಿಯ ಗಂಭೀರ ಆರೋಪ

Twitter
Facebook
LinkedIn
WhatsApp
mcms 3 1

‘ಕೋದಂಡ ರಾಮ’, ‘ನಮ್ಮಣ್ಣ’ ಸೇರಿ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ ಫ್ಲೋರಾ ಸೈನಿ (ಆಶಾ ಸೈನಿ) ಅವರು ಈಗ ಸುದ್ದಿಯಲ್ಲಿದ್ದಾರೆ. 14 ತಿಂಗಳ ಕಾಲ ಅವರು ನಿರ್ಮಾಪಕ ಗೌರಂಗ್​ (Gaurang Doshi) ಜತೆ ರಿಲೇಶನ್​ಶಿಪ್​ನಲ್ಲಿದ್ದರು. ಆದರೆ, ಈ ರಿಲೇಶನ್​ಶಿಪ್ ತುಂಬಾನೇ ಬೀಭತ್ಸವಾಗಿತ್ತು ಎಂದು ಹೇಳಿದ್ದಾರೆ. 1999ರಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಫ್ಲೋರಾ (Flora Saini) ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಅವರ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

May be an image of 1 person and indoor

1999ರಲ್ಲಿ ಫ್ಲೋರಾ ಸೈನಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ವೃತ್ತಿಜೀವನ ಆರಂಭಿಸಿದ್ದು ತೆಲುಗು ಚಿತ್ರರಂಗದಿಂದ. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು. ಈಗಲೂ ಫ್ಲೋರಾ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರು ತಮ್ಮ ರಿಲೇಶನ್​ಶಿಪ್​ ಬಗ್ಗೆ ಮಾತನಾಡಿದ್ದಾರೆ.

May be an image of 1 person and standing

ಗೌರಂಗ್ ದೋಶಿ ಜತೆ ಫ್ಲೋರಾ 14 ತಿಂಗಳು ಕಳೆದಿದ್ದರು. ಇದು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು. ಈಗ ಹೆಸರನ್ನು ಉಲ್ಲೇಖ ಮಾಡದೆ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನಾನು ಖ್ಯಾತ ನಿರ್ಮಾಪಕನ ಜತೆ ಪ್ರೀತಿಯಲ್ಲಿದ್ದೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದು ನಿಂದನಾತ್ಮಕ ಸಂಬಂಧವಾಗಿ ಬದಲಾಯಿತು. ಆತ ನನ್ನ ಮುಖ ಹಾಗೂ ಖಾಸಗಿ ಭಾಗಕ್ಕೆ ಹೊಡೆಯುತ್ತಿದ್ದ. ನನ್ನ ಮೊಬೈಲ್ ಕಸಿದುಕೊಳ್ಳುತ್ತಿದ್ದ. ನನ್ನನ್ನು ಸಿನಿಮಾ ರಂಗದಿಂದ ದೂರ ಇಡಲು ಪ್ರಯತ್ನಿಸಿದ. 14 ತಿಂಗಳು ನಾನು ಯಾರ ಜತೆಯೂ ಮಾತನಾಡದಂತೆ ನೋಡಿಕೊಂಡ. ಒಂದು ದಿನ ಆತ ನನ್ನ ಹೊಟ್ಟೆಯ ಮೇಲೆ ಹೊಡೆದ. ನಾನು ಓಡಿ ಬಂದೆ’ ಎಂದಿದ್ದಾರೆ ಫ್ಲೋರಾ.

No photo description available.

ಹೀಗೆ ಓಡಿಬಂದ ಫ್ಲೋರಾ ಪಾಲಕರ ಜತೆ ವಾಸಮಾಡೋಕೆ ಆರಂಭಿಸಿದರು. ಈ ಘಟನೆಯಿಂದ ಚೇತರಿಸಿಕೊಳ್ಳೋಕೆ ಅವರಿಗೆ ತಿಂಗಳೇ ಬೇಕಾಯಿತು. ನಂತರ ಅವರು ಮತ್ತೆ ನಟನೆ ಆರಂಭಿಸಿದರು. ‘ಎಲ್ಲದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯಿತು. ಆದರೆ, ನಾನು ಈಗ ಖುಷಿಯಾಗಿದ್ದೇನೆ. ನನಗೆ ಪ್ರೀತಿಯೂ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.

No photo description available.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ