ದೆಹಲಿ: ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಪ್ರತ್ಯೇಕತಾವಾದಿಗಳ ಪರ ಹೇಳಿಕೆ ನೀಡಿ ಎಂಬ ಆರೋಪಗಳ ವಿರುದ್ಧ ಕಿಡಿಕಾರಿದ್ದು, ಅವುಗಳನ್ನು “ಕಾಮಿಡಿ” ಎಂದು ಕರೆದಿದ್ದಾರೆ. ಟೀಕೆಗಳಿಗೆ ಪ್ರತಿಕ್ರಿಯಿಸಿ ದ ಅವರು ತಮ್ಮನ್ನು “ವಿಶ್ವದ ಮಧುರವಾದ ಭಯೋತ್ಪಾದಕ” ಎಂದು ಬಣ್ಣಿಸಿದ್ದಾರೆ. ಎಎಪಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ (Kumar Vishwas) ಅವರು ಕೇಜ್ರಿವಾಲ್ ಪ್ರತ್ಯೇಕ ರಾಜ್ಯದ ಪ್ರಧಾನಿಯಾಗುವ ಬಗ್ಗೆ ಮಾತನಾಡಿದ್ದಾರೆ ಎಂದು ವಿಡಿಯೊ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ (BJP)ಮತ್ತು ಕಾಂಗ್ರೆಸ್ ಕೇಜ್ರಿವಾಲ್ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. “ಅವರೆಲ್ಲರೂ ನನ್ನ ವಿರುದ್ಧ ಗುಂಪು ಗುಂಪಾಗಿ ಸೇರಿಕೊಂಡು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಇದು ಹಾಸ್ಯ – ಇದು ನಗುವ ವಿಷಯ. ಹಾಗಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ-ಜಿ ನನ್ನನ್ನು ಏಕೆ ಬಂಧಿಸುವುದಿಲ್ಲ?” ಕೇಜ್ರಿವಾಲ್ ಕೇಳಿದ್ದಾರೆ. “ನಾನು ವಿಶ್ವದ ಸಿಹಿ ಭಯೋತ್ಪಾದಕನಾಗಿರಬೇಕು. ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆಗಳು, ನೀರು ಒದಗಿಸುವ ಭಯೋತ್ಪಾದಕ .,” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು. ನಾನು ವಿಶ್ವದ ಸಿಹಿ ಭಯೋತ್ಪಾದಕನಾಗಿರಬೇಕು, ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆಗಳು, ನೀರು ಒದಗಿಸುವ ಭಯೋತ್ಪಾದಕ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು. ಕುಮಾರ್ ವಿಶ್ವಾಸ್ ವಿಡಿಯೊ ಬಹಿರಂಗವಾದ ನಂತರ ಗುರುವಾರ, ಪಿಎಂ ಮೋದಿ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಕಿಡಿ ಕಾರಿದ್ದಾರೆ . ವಿಡಿಯೊದಲ್ಲಿ, ವಿಶ್ವಾಸ್ ಅವರು “ಒಂದು ದಿನ, ಅವರು (ಕೇಜ್ರಿವಾಲ್) ಪಂಜಾಬ್ ಸಿಎಂ ಅಥವಾ ಸ್ವತಂತ್ರ ರಾಷ್ಟ್ರ ಖಾಲಿಸ್ತಾನದ ಮೊದಲ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು. ಅವರು ಯಾವುದೇ ಬೆಲೆ ತೆತ್ತು ಅಧಿಕಾರವನ್ನು ಬಯಸುತ್ತಾರೆ ಎಂದಿದ್ದಾರೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist