ನಟ ನಂದಮೂರಿ ತಾರಕ ರತ್ನ ಇನ್ನಿಲ್ಲ; ಫಲಿಸದ ಅಭಿಮಾನಿಗಳ ಪ್ರಾರ್ಥನೆ
ಬೆಂಗಳೂರು: ಹೃದಯಾಘಾತದಿಂದಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕ ರತ್ನ(39) ಅವರು ಕೊನೆಯುಸಿರೆಳೆದಿದ್ದಾರೆ.
ಜನವರಿ 27ರಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಕುಪ್ಪಂ ಬಳಿ ಟಿಡಿಪಿ ಪಾದಯಾತ್ರೆ ವೇಳೆ ಕುಸಿದುಬಿದ್ದಿದ್ದರು. ಆ ವೇಳೆ ತಾರಕರತ್ನಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಶಿಫ್ಟ್ ಮಾಡಲಾಗಿತ್ತು. 23 ದಿನಗಳಿಂದ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ತಾರಕರತ್ನ ಅವರಿಗೆ, ಬೆಂಗಳೂರಿನ ನಾರಾಯಣ ಆಸ್ಪತ್ರೆಯಲ್ಲಿ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದರು. ಇತ್ತ ತಾರಕರತ್ನ ಶೀಘ್ರ ಗುಣಮುಖರಾಗಿ ವಾಪಸ್ ಬರಲಿ ಎಂದು ತೆಲುಗು ದೇಶಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಂದಮೂರಿ ಕುಟುಂಬಸ್ಥರು ಹಾರೈಸಿದ್ದರು. ಆಸ್ಪತ್ರೆಗೆ ಆಂಧ್ರ ಪ್ರದೇಶ ಸಚಿವರು, ಮಾಜಿ ಸಚಿವರು ಸೇರಿದಂತೆ ಹಲವು ರಾಜಕೀಯ ಗಣ್ಯರು ಆಸ್ಪತ್ರೆಗ ಭೇಟಿ ನೀಡಿ ತಾರಕರತ್ನ ಅವರ ಆರೋಗ್ಯದ ಬಗ್ಗೆ ವೈದ್ಯರ ಜೊತೆ ಚರ್ಚಿಸಿದ್ದರು. ಆದ್ರೆ, ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.
1983ರ ಫೆಬ್ರವರಿ 22ರಂದು ಜನಿಸಿದ್ದ ತೆಲುಗು ನಟ ತಾರಕರತ್ನ, ಒಕಟೋ ನಂಬರ್ ಕುರ್ರಾಡು, ಭದ್ರಾದಿ ರಾಮುಡು, ಯುವರತ್ನ ಸೇರಿದಂತೆ 20 ಕ್ಕು ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
39 ವರ್ಷ ವಯಸ್ಸಿನ ನಟ 2002 ರ ತೆಲುಗು ಸಿನಿಮಾ ಒಕಾಟೊ ನಂಬರ್ ಕುರ್ರಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಸಿನಿಮಾಗಳ ಮೂಲಕ ಫೇಮಸ್ ಆದರು. ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸಿರೀಸ್ 9 ಅವರ್ಸ್‌ನಲ್ಲಿ ಕೂಡಾ ಅವರು ನಟಿಸಿದ್ದಾರೆ. ಇನ್ನು ಅಮರಾವತಿ ಚಿತ್ರಕ್ಕಾಗಿ ತಾರಕರತ್ನ ಅವರಿಗೆ 2009ರಲ್ಲಿ ಆಂಧ್ರದ ಪ್ರತಿಷ್ಠಿತ ನಂದಿ ಅವಾರ್ಡ್ (ಬೆಸ್ಟ್ ವಿಲನ್) ಪ್ರಶಸ್ತಿ ದೊರೆತಿದೆ.