ನಟ ದರ್ಶನ್ ಗೆ ಜು.18 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ!
Twitter
Facebook
LinkedIn
WhatsApp
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ (Darshan), ಪವಿತ್ರಾ ಗೌಡ ಸೇರಿ 17 ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲೇ ಗತಿಯಾಗಿದೆ. ಜು.18 ರ ವರೆಗೆ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಜು.18 ರ ತನಕ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಕಾನ್ಫರೆನ್ಸ್ ವೇಳೆಪ್ರತಿಯೊಬ್ಬರ ಹೆಸರನ್ನೂ ಕೋರ್ಟ್ ಸಿಬ್ಬಂದಿ ಕೂಗಿದ್ದರು. ಹೆಸರು ಕೂಗುತ್ತಿದಂತೆ ಎಲ್ಲರೂ ಕೈ ಎತ್ತಿ ಹಾಜರಿ ಖಾತರಿಪಡಿಸಿದ್ದರು.
ಪರಪ್ಪನ ಅಗ್ರಹಾರ ಹಾಗೂ ತುಮಕೂರು ಜೈಲಿನಿಂದ ವೀಡಿಯೋ ಕಾನ್ಫರೆನ್ಸ್ ಮಾಡಲಾಗಿತ್ತು. ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವಂತೆ ಎಸ್ಪಿಪಿ ಕಡೆಯಿಂದ ರಿಮಾಂಡ್ ಅರ್ಜಿ ಸಲ್ಲಿಸಲಾಗಿತ್ತು. ರಿಮಾಂಡ್ ಅರ್ಜಿ ನೀಡುವಂತೆ ಆರೋಪಿಗಳ ಪರ ವಕೀಲರ ಮನವಿ ಮಾಡಿದ್ದರು. ಆರೋಪಿಗಳ ವಕೀಲರು ಸಹಿ ಮಾಡಿ ರಿಮಾಂಡ್ ಅರ್ಜಿ ಪಡೆಯಲು ನ್ಯಾಯಾಧೀಶರು ಸೂಚನೆ ನೀಡಿದರು.