ನಟಿ ರೇಶ್ಮಾ ಪಸುಪಲೇಟಿ ಅಶ್ಲೀಲ ಮಾತಿಗೆ ವಿಜಯ್ ಫ್ಯಾನ್ಸ್ ಗರಂ
ವಿವಾದಿತ ಮಾತುಗಳ ಮೂಲಕವೇ ತಮಿಳು ಸಿನಿಮಾ ರಂಗದಲ್ಲಿ ಫೇಮಸ್ ಆದವರು ನಟಿ ರೇಶ್ಮಾ ಪಸುಪಲೇಟಿ. ಬೋಲ್ಡ್ ಮಾತುಗಳಿಂದಾಗಿಯೇ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅದರಲ್ಲೂ ಅಡಲ್ಟ್ ಮಾತುಗಳನ್ನು ಆಡುವುದೆಂದರೆ ರೇಶ್ಮಾಗೆ ನೀರು ಕುಡಿದಷ್ಟೇ ಸಲೀಸು. ಈ ಬಾರಿ ಅಂಥದ್ದೇ ಮಾತುಗಳಿಂದ ರೇಶ್ಮಾ ವೈರಲ್ ಆಗಿದ್ದಾರೆ. ತಮಿಳಿನ ಖ್ಯಾತ ನಟ ವಿಜಯ್ ಫ್ಯಾನ್ಸ್ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರೇಶ್ಮಾ, ‘ನಿಮಗೆ ಗನ್ ಪಾಯಿಂಟ್ ಇಟ್ಟು, ಯಾರೊಂದಿಗೆ ಸೆಕ್ಸ್ ಮಾಡುತ್ತೀರಿ?’ ಎಂದು ಕೇಳಲಾದ ಪ್ರಶ್ನೆಗೆ ಕ್ಷಣ ಹೊತ್ತೂ ಯೋಚಿಸದೇ, ಖ್ಯಾತ ನಟ ವಿಜಯ್ ಹೆಸರು ಹೇಳುತ್ತಾರೆ. ‘ಅವರು ಬಯಸಿದರೆ ಯಾವತ್ತಿಗೂ ನಾನು ರೆಡಿ’ ಎಂದು ಬೋಲ್ಡ್ ಮಾತುಗಳನ್ನು ಆಡುವ ಮೂಲಕ ರೇಶ್ಮಾ ವಿವಾದದ ಕಿಡಿ ಹೊತ್ತಿಸಿದ್ದಾರೆ. ವಿಜಯ್ ನನಗೆ ತುಂಬಾ ಇಷ್ಟವೆಂದು ಅವರು ಮಾತನಾಡಿದ್ದಾರೆ.
ಇದಕ್ಕೂ ಮುನ್ನ ಇದೇ ಸಂದರ್ಶನದಲ್ಲೇ ನಿರೂಪಕಿಯು ‘ಯಾವ ಮಹಿಳೆಯ ಜೊತೆ ನೀವು ಸೆಕ್ಸ್ ಮಾಡುವುದಕ್ಕೆ ಬಯಸುತ್ತೀರಿ?’ ಎಂದು ಪ್ರಶ್ನೆ ಮಾಡುತ್ತಾರೆ. ‘ನನಗೆ ಮಹಿಳೆಯರ ಜೊತೆ ಸೆಕ್ಸ್ ಇಷ್ಟವಿಲ್ಲ. ಪುರುಷರೇ ಆಗಬೇಕು. ಅದರಲ್ಲೂ ವಿಜಯ್ ಜೊತೆ ಎಷ್ಟು ಸಾರಿ ಬೇಕಾದರೂ ಸೆಕ್ಸ್ ಮಾಡುತ್ತೇನೆ’ ಎಂದು ಬೋಲ್ಡ್ ಆಗಿ ಮಾತನಾಡಿದ್ದಾರೆ. ಈ ಸಂದರ್ಶನ ವೈರಲ್ ಆಗುತ್ತಿದ್ದಂತೆಯೇ ವಿಜಯ್ ಫ್ಯಾನ್ಸ್ ನಟಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಪ್ರಚಾರಕ್ಕಾಗಿ ರೇಶ್ಮಾ ಎಂತಹ ಮಾತುಗಳನ್ನೂ ಆಡುವುದಕ್ಕೆ ಸಿದ್ಧರಿದ್ದಾರೆ. ಹಾಗಾಗಿಯೇ ಅವರ ಸಂದರ್ಶನಗಳು ಆಗಾಗ್ಗೆ ಹೀಗೆ ವಿವಾದಕ್ಕೆ ಕಾರಣವಾಗುತ್ತವೆ. ಇಂತಹ ಮಾತುಗಳನ್ನು ಇವರು ಆಡಿದ್ದು ಇದೇ ಮೊದಲೇನೂ ಅಲ್ಲ. ಇಂತಹ ಪ್ರಶ್ನೆಗಳಿಗೆ ಅವರು ಸದಾ ಕಾಯುತ್ತಿರುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಮಾತುಗಳನ್ನು ಆಡಿಸುವವರ ವಿರುದ್ಧವೂ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ.