ಶನಿವಾರ, ಮೇ 18, 2024
Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಟಿ ಇಲಿಯಾನ ಡಿ ಕ್ರೂಸ್ ಗೆ ಬ್ಯಾನ್ ಬಿಸಿ: ಫಿಲ್ಮ್ ಚೇಂಬರ್ ನಿರ್ಧಾರ

Twitter
Facebook
LinkedIn
WhatsApp
19803fdfa6c53d4bf6b9201c129 1

ರ್ಫಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವ ಕ್ಯೂಟ್ ತಾರೆ ಇಲಿಯಾನಾ ಡಿ ಕ್ರೂಸ್ (Ileana D Cruz) ಅವರಿಗೆ ಸಂಕಷ್ಟ ಎದುರಾಗಿದೆ. ತಮಿಳು ಸಿನಿಮಾವೊಂದರಲ್ಲಿ ನಟಿಸಲು ಹಣ ಪಡೆದು, ಇದೀಗ ಚಿತ್ರೀಕರಣಕ್ಕೆ ಬರುತ್ತಿಲ್ಲವೆಂದು ನಿರ್ಮಾಪಕರೊಬ್ಬರು ಅಲ್ಲಿನ ಫಿಲ್ಮ್ ಚೇಂಬರ್ ಗೆ (Film Chamber) ದೂರು ನೀಡಿದ್ದಾರೆ. ಆ ನಟಿಯಿಂದಾಗಿ ಸಾಕಷ್ಟು ತೊಂದರೆ ಮತ್ತು ಹಾನಿಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

No photo description available.

ಸದ್ಯ ರಣದೀಪ್ ಹೂಡಾ ನಟನೆಯ ಅನ್ ಫೇರ್ ಅಂಡ್ ಲವ್ಲಿ ಸಿನಿಮಾದಲ್ಲಿ ನಟಿಸುತ್ತಿರುವ ಇಲಿಯಾನಾ, ತಮಿಳು ಸಿನಿಮಾ ಮಾಡಲು ಒಪ್ಪಿಕೊಂಡಿದ್ದರಂತೆ. ನಿರ್ಮಾಪಕರಿಂದ ಮುಂಗಡ ಹಣವನ್ನೂ ಪಡೆದಿದ್ದಾರೆ. ಆದರೆ, ಈವರೆಗೂ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಅವರು ಚಿತ್ರತಂಡದ ಕೈಗೂ ಸಿಗುತ್ತಿಲ್ಲವಂತೆ. ವಾಪಸ್ಸು ಹಣ ಹಿಂತಿರುಗಿಸದೇ ಸತಾಯಿಸುತ್ತಿದ್ದಾರಂತೆ. ಇಲಿಯಾನಾ ನಡೆಗೆ ಬೇಸತ್ತ ನಿರ್ಮಾಪಕರು ದೂರು ನೀಡಿದ್ದಾರೆ.

No photo description available.

ಈ ಕುರಿತು ಪರಿಶೀಲನೆ ಮಾಡಿರುವ ಫಿಲ್ಮ್ ಚೇಂಬರ್ ದಕ್ಷಿಣದ ಸಿನಿಮಾಗಳಲ್ಲಿ ಅವರಿಗೆ ಅವಕಾಶ ಕೊಡಬಾರದು ಎಂದು ತೀರ್ಪು ನೀಡಿದ್ದಾರೆ. ದಕ್ಷಿಣದ ಸಿನಿಮಾಗಳಿಂದ ಇಲಿಯಾನಾ ಅವರನ್ನು ಬ್ಯಾನ್ (Ban) ಮಾಡಿರುವುದಾಗಿಯೂ ತಿಳಿಸಿದ್ದಾರೆ. ಈ ವಿಷಯವು ಇಲಿಯಾನಾಗೆ ತಿಳಿದಿದೆಯೋ ಇಲ್ಲವೊ. ಹಾಗಾಗಿ ಈವರೆಗೂ ಅವರು ಬ್ಯಾನ್ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಗೊತ್ತಾದ ಮೇಲೆ ಯಾವ ರೀತಿಯಲ್ಲಿ ಅವರು ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ.

No photo description available.

ಗೋವಾ ಮೂಲದ ಈ ಚೆಲುವು ಮೊದ ಮೊದಲು ದಕ್ಷಿಣದ ಬಹುತೇಕ ಭಾಷೆಗಳಲ್ಲಿ ನಟಿಸಿದವರು. ಆನಂತರ ಬಾಲಿವುಡ್ ಗೆ ಹಾರಿದರು. ಬಾಲಿವುಡ್ ನಲ್ಲೇ ನೆಲೆಯೂರಲು ಪರದಾಡಿ, ಇದೀಗ ಗೆಲುವನ್ನೂ ಪಡೆದಿದ್ದಾರೆ. ಹಾಗಾಗಿ ದಕ್ಷಿಣದ ಸಿನಿಮಾಗಳಿಗೆ ಅವರು ತೊಂದರೆ ನೀಡುತ್ತಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ.

Throwback Tuesday: Ileana D'Cruz is missing the beach and we can totally  relate to her | Hindi Movie News - Times of India

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ