ಶನಿವಾರ, ಏಪ್ರಿಲ್ 27, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಟಿ ಆಕಾಂಕ್ಷಾ ದುಬೆ ಅನುಮಾನಾಸ್ಪದ ಸಾವು!

Twitter
Facebook
LinkedIn
WhatsApp
ನಟಿ ಆಕಾಂಕ್ಷಾ ದುಬೆ ಅನುಮಾನಾಸ್ಪದ ಸಾವು!

ಭೂಜ್​ಪುರಿ ಚಿತ್ರರಂಗದ (Bhojpuri Industry) ಜನಪ್ರಿಯ ನಟಿ ಆಕಾಂಕ್ಷಾ ದುಬೆಯ (Akanksha Dubey) ಮೃತದೇಹ ವಾರಣಾಸಿಯ (Varanasi) ಹೋಟೆಲ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನಟಿಯು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆಕಾಂಕ್ಷಾ ದುಬೆ, ನಾಯಕ್ ಹೆಸರಿನ ಭೋಜ್​ಪುರಿ ಸಿನಿಮಾದ ಚಿತ್ರೀಕರಣಕ್ಕಾಗಿ ವಾರಣಾಸಿಗೆ ತೆರಳಿದ್ದರು. ಈ ವೇಳೆ ಅವರು ಸಾರಾನಾಥ್ ಹೋಟೆಲ್​ನಲ್ಲಿ ತಂಗಿದ್ದರು. ನಿನ್ನೆ ಬೆಳಿಗ್ಗೆ ಹೋಟೆಲ್ ಸಿಬ್ಬಂದಿ ಕೋಣೆಯ ಒಳಗೆ ಹೋದಾಗ ನಟಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿದ್ದಿದ್ದು ಗಮನಿಸಿ, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ನಟಿ ಆಕಾಂಕ್ಷಾ ದುಬೆ ಅನುಮಾನಾಸ್ಪದ ಸಾವು!

ಭೊಜ್​ಪುರಿ ಚಿತ್ರರಂಗದಲ್ಲಿ ಸಪ್ನೋಂಕಿ ರಾಣಿ (ಕನಸಿನ ರಾಣಿ) ಎಂದೇ ಹೆಸರು ಗಳಿಸಿದ್ದ ನಟಿ ಆಕಾಂಕ್ಷಾ ದುಬೆ, ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ನಿನ್ನೆಯಷ್ಟೆ ಅವರ ನಟನೆಯ ಹಾಡೊಂದು ಬಿಡುಗಡೆ ಆಗಿತ್ತು. ಹಾಡನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಮಾತ್ರವೇ ಅಲ್ಲದೆ ತಾವೇ ಬೆಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಒಂದನ್ನು ಸಹ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೇವಲ 19 ಗಂಟೆಗಳ ಹಿಂದೆ ತಮ್ಮ ವಿಡಿಯೋ ಹಂಚಿಕೊಂಡಿದ್ದ ಆಕಾಂಕ್ಷಾ ವಿಡಿಯೋನಲ್ಲಿ ಖುಷಿಯಾಗಿ ನೃತ್ಯ ಮಾಡಿದ್ದರು. ಆದರೆ ವಿಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಇಲ್ಲವಾಗಿದ್ದಾರೆ.

ಆಕಾಂಕ್ಷಾ ದುಬೆ ತಮ್ಮ ನಟನೆ, ಗ್ಲಾಮರಸ್ ಲುಕ್​ಗಳಿಂದ ಭೋಜ್​ಪುರಿ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. ಜೊತೆಗೆ ಅವರ ಪ್ರೇಮ ಪ್ರಕರಣವೂ ಸಖತ್ ಸದ್ದು ಮಾಡಿತ್ತು. ತಮ್ಮ ಸಹನಟ ಸಮರ್ ಸಿಂಗ್ ಅವರನ್ನು ಆಕಾಂಕ್ಷಾ ದುಬೆ ಪ್ರೀತಿಸುತ್ತಿದ್ದರು. ಪ್ರೇಮಿಗಳ ದಿನದಂದು ಸಮೀರ್ ಸಿಂಗ್ ಜೊತೆಗೆ ಕಳೆದ ಆತ್ಮೀಯ ಕ್ಷಣಗಳ ಫೋಟೊಗಳನ್ನು ಆಕಾಂಕ್ಷಾ ಹಂಚಿಕೊಂಡಿದ್ದರು.

ನಟಿ ಆಕಾಂಕ್ಷಾ ದುಬೆ ಅನುಮಾನಾಸ್ಪದ ಸಾವು!

ನಟಿಯ ಸಾವಿಗೆ ಅವರ ಪ್ರೇಮ ಪ್ರಕರಣವೇ ಕಾರಣವಾಗಿರಬಹುದೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸಮರ್​ ಸಿಂಗ್​ ಅನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಸಮರ್ ಸಿಂಗ್ ಪೊಲೀಸರ ಸಂಪರ್ಕಕ್ಕೆ ಸಿಕ್ಕಿಲ್ಲ.

ಮಿರ್ಜಾಪುರ್ ಮೂಲದ ಆಕಾಂಕ್ಷಾ ದುಬೆ ಐಎಎಸ್ ಅಧಿಕಾರಿ ಆಗುವ ಆಸೆಯೊಂದಿಗೆ ಮುಂಬೈಗೆ ಬಂದರು. ಆದರೆ ಅಚಾನಕ್ಕಾಗಿ ಭೋಜ್​ಪುರಿ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. 

ಮೇರಿ ಜಂಗ್ ಮೇರಾ ಫೈಸ್ಲಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಕಾಂಕ್ಷಾ ಆ ಬಳಿಕ ಮುಝ್ಸೆ ಶಾದಿ ಕರೋಗಿ, ಸಾಜನ್, ಮಿಟ್ಟಿ, ವೀರೋಂಕಿ ವೀರಾ, ಕಸಂ ಫೈದಾ ಕರ್ನೆ ವಾಲೇ ಕಿ 2 ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯ ಅಗಲಿಕೆಗೆ ಭೋಜ್​ಪುರಿ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ