ಮಂಗಳವಾರ, ಏಪ್ರಿಲ್ 23, 2024
ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ವಿಟ್ಲ: ಬಾವಿಯೊಂದಕ್ಕೆ ರಿಂಗ್ ಹಾಕುವ ವೇಳೆ ಆಕ್ಸಿಜನ್ ಸಿಗದೇ ಕ್ಲಿನಿಂಗ್ ಗೆ ಇಳಿದ ಇಬ್ಬರು ಇಬ್ಬರು ಕಾರ್ಮಿಕರು ಸಾವು..-ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ವಾಪಸ್ ಬಿಜೆಪಿಗೆ ಬರುತ್ತೇನೆ; ಕೆಎಸ್ ಈಶ್ವರಪ್ಪ-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಮೇ 7 ರವರೆಗೆ ವಿಸ್ತರಣೆ..!-ಗುಣಮಟ್ಟದ ಉದ್ದೇಶದಿಂದ MDH ಮತ್ತು ಎವರೆಸ್ಟ್ ಮಸಾಲೆ ಉತ್ಪನ್ನಗಳ ಪರೀಕ್ಷೆಗೆ ಮುಂದಾದ FSSAI..!-ನಾನು ಯಾವುದೇ ಉಚ್ಛಾಟನೆಗೆ ಹೆದರುವುದಿಲ್ಲ; ಕೆಎಸ್ ಈಶ್ವರಪ್ಪ-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಬಿಜೆಪಿಯಿಂದ ಉಚ್ಚಾಟನೆ.!-ಅಂಪೈರ್ ತೀರ್ಪಿಗೆ ಗರಂ ಆಗಿ ವಾಗ್ವಾದಕ್ಕಿಳಿದ ವಿರಾಟ್ ಕೊಹ್ಲಿಗೆ ಬಿಸಿಸಿಐಯಿಂದ ಬಿತ್ತು ದಂಡ.!-ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಆಗ್ರಹ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಗ್ನವಾಗಿ ವಿದ್ಯಾರ್ಥಿ ನೇಣಿಗೆ ಶರಣು

Twitter
Facebook
LinkedIn
WhatsApp
images

ಧಾರವಾಡ: ಧಾರವಾಡ (Dharwad) ಕೃಷಿ‌ ವಿವಿ ವಿದ್ಯಾರ್ಥಿಯೋರ್ವ ನಗ್ನವಾಗಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.‌

ಕೃಷಿ ವಿವಿ ಅಂತಿಮ ವರ್ಷದ ವಿದ್ಯಾರ್ಥಿ (Student) ರೋಹಿತ್ ಸಿ.ಪಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ನಿನ್ನೆ (ಭಾನುವಾರ) ಮಧ್ಯಾಹ್ನ ಹಾಸ್ಟೆಲ್ ಮೆಸ್‌ನಲ್ಲಿ ಊಟ‌ ಮಾಡಿದ ಈ‌ತ, ನಂತರ ಹಾಸ್ಟೆಲ್ (Hostel) ರೂಂಗೆ ಹೋಗಿದ್ದಾನೆ.‌ ಅದರ ನಂತರ ಆತನ ಗೆಳೆಯರು ಹಾಗೂ ಕುಟುಂಬದವರಯ ಎಷ್ಟೇ ಮೊಬೈಲ್ ಕರೆ‌ ಮಾಡಿದರೂ ಆತ ಕರೆ ಸ್ವೀಕರಿಸಿರಲಿಲ್ಲ.‌ ಈ ಹಿನ್ನೆಲೆಯಲ್ಲಿ ಕಿಟಕಿಯಿಂದ ಓರ್ವ‌ ವಿದ್ಯಾರ್ಥಿ ನೋಡಿದಾಗ ರೋಹಿತ್ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡ‌ ವಿಷಯ ಗೊತ್ತಾಗಿದೆ.

‌ತಕ್ಷಣ ಹಾಸ್ಟೆಲ್ ವಾರ್ಡನ್ ಹಾಗೂ ಕೃಷಿ ವಿವಿ ಆಡಳಿತ ಮಂಡಳಿ ಪೊಲೀಸರಿಗೆ ಹಾಗೂ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ವಿದ್ಯಾರ್ಥಿ ಪೋಷಕರು ತಡ ರಾತ್ರಿ ವಿಜಯನಗರ (Vijayanagar) ಜಿಲ್ಲೆಯ ಕೊಟ್ಟೂರಿನಿಂದ ಧಾರವಾಡಕ್ಕೆ ಆಗಮಿಸಿದ ನಂತರ ಶವ ಕೆಳಗೆ‌ ಇಳಿಸಿ ಆಸ್ಪತ್ರೆಗೆ ಕಳಿಸಲಾಯಿತು. ಆದರೆ ನಗ್ನವಾಗಿ ಈ‌ ವಿದ್ಯಾರ್ಥಿ ಏಕೆ ನೇಣು ಹಾಕಿಕೊಂಡ‌ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ವಿದ್ಯಾರ್ಥಿಯ ಮೊಬೈಲ್ ಕೂಡ ವಶಕ್ಕೆ ಪಡದಿದ್ದಾರೆ. 

ಸದ್ಯ ಉಪನಗರ ಠಾಣೆಯಲ್ಲಿ ರೋಹಿತ್‌ ಪೋಷಕರು ಕೂಡಾ ದೂರು‌ ನೀಡಿದ ಮೇಲೆ ಪ್ರಕರಣ ದಾಖಲಾಗಲಿದ್ದು,‌ ವಿದ್ಯಾರ್ಥಿ ಶವ ಪೋಷಕರು ತಮ್ಮ ಊರಿಗೆ ತೆಗೆದುಕೊಂಡು‌‌ ಹೋಗಲಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ