– ಮುಂದಿನ ಧಾರಾವಾಹಿ ಅಥವಾ ಸಿನಿಮಾ ರಂಗಕ್ಕೆ ಬರುವುದು ಯಾವಾಗ?
ಮುಂದಿನ ಪ್ರಾಜೆಕ್ಟ್ ಯಾವುದು ಎಂದು ಗೊತ್ತಿಲ್ಲ ಆದರೆ ಸದ್ಯಕ್ಕೆ ಇರುವ ಪ್ರಾಜೆಕ್ಟ್ ಮುಗಿಸಬೇಕು. ಲೀಡ್ ಪಾತ್ರದ ಮೂಲಕ ಸಿನಿಮಾ ರಂಗಕ್ಕೆ ಯಾವಾಗ ಎಂಟ್ರಿ ಕೊಡುತ್ತೀನಿ ಗೊತ್ತಿಲ್ಲ. ಒಳ್ಳೆ ಸಿನಿಮಾ ಮೂಲಕ ಎಂಟ್ರಿ ಕೊಡಬೇಕು ಸಿನಿಮಾ ರಿಲೀಸ್ ಆದ್ಮೇಲೆ ಜನರಿಗೆ ತುಂಬಾ ಕನೆಕ್ಟ್ ಆಗಬೇಕು ಅನ್ನೋ ಆಸೆ ತುಂಬಾ ಇದೆ. ಆ ಒಂದು ಪ್ರಾಜೆಕ್ಟ್ ಬರಲಿ ಅಂತ ಕಾಯುತ್ತಿರುವೆ.
– ಯಾರನ್ನು ಮದುವೆ ಆಗಲು ಇಷ್ಟ ಪಡುತ್ತೀರಾ? ನೀವು ಇಷ್ಟ ಪಟ್ಟವರ ಅಥವಾ ನಿಮ್ಮ ಕುಟುಂಬ ಇಷ್ಟ ಪಟ್ಟವರು?
ಇಂಟ್ರೆಸ್ಟಿಂಗ್ ಪ್ರಶ್ನೆ ಇದು. ನನಗೆ ನನ್ನ ಕುಟುಂಬ ತುಂಬಾ ಮುಖ್ಯ. ನನ್ನ ಕುಟುಂಬ ಅಂದ್ರೆ ಕೇವಲ ತಂದೆ-ತಾಯಿ ಮಾತ್ರ. ನಾನು ಇಷ್ಟ ಪಟ್ಟವರನ್ನು ನನ್ನ ಪೋಷಕರು ಇಷ್ಟ ಪಡುತ್ತಾರೆ ಅಥವಾ ನನ್ನ ಪೋಷಕರು ಆಯ್ಕೆ ಮಾಡುವವರನ್ನು ನಾನು ಇಷ್ಟ ಪಡುವೆ. ನಮ್ಮ ಮೂವರ ಮೈಂಡ್ ಒಂದೇ. ನನ್ನ ಸ್ನೇಹಿತರು ನನಗಿಂತ ನನ್ನ ತಂದೆ-ತಾಯಿಗೆ ಕ್ಲೋಸ್. ನಾನು ಮದುವೆ ಆಗುವ ಹುಡುಗ ನನ್ನ ತಂದೆ ತಾಯಿನ ಇಷ್ಟ ಪಡಬೇಕು ಅವರ ಕುಟುಂಬವನ್ನು ನಾನು ಅಷ್ಟೇ ಪ್ರೀತಿ ಮಾಡುತ್ತೀನಿ.
– ಫೋನ್ ನಂಬರ್?
ಫೋನ್ ನಂಬರ್ನ ದೇವರ ಆಣೆ ಕೊಡುವುದಿಲ್ಲ.
– ನೀವು ತುಂಬಾ ಭಯ ಪಡುವುದು ಯಾವ ವಿಚಾರಕ್ಕೆ?
ನನಗೆ ಎತ್ತರ ಅಂದ್ರೆ ಭಯ ತುಂಬಾ ಆಗುತ್ತಿತ್ತು ಆದರೆ ಈ ವೃತ್ತಿಗೆ ಬಂದ ಮೇಲೆ ಏರಿಯಲ್ ಆಕ್ಟಸ್ ಮಾಡಿ, ಬೆಟ್ಟದ ಮೇಲೆ ಶೂಟಿಂಗ್ ಮಾಡಿ ಆ ಭಯ ದೂರ ಆಗಿದೆ.
– ಯಾವ ತರ ಹುಡುಗ ಬೇಕು? ಇಷ್ಟ ಆಗುತ್ತಾರೆ?
ಇಷ್ಟು ವರ್ಷಗಳು ಕಳೆದ ಮೇಲೆ ನನಗೆ ದೈಹಿಕ ನೋಟ ಮುಖ್ಯವಾಗುವುದಿಲ್ಲ. ನನಗೆ ಮುಖ್ಯ ಆಗುವುದು ಅವರು ನಮ್ಮನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಷ್ಟು ಪ್ರೀತಿ ಮಾಡುತ್ತಾರೆ ಅವರ ಜೀವನದಲ್ಲಿ ನಿಮ್ಮ ಆದ್ಯತೆ ಎನು. ಪ್ರೀತಿಸಬೇಕು ಅತಿಯಾಗಿ ಪ್ರೀತಿಸಬೇಕು ಅಷ್ಟೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist