ಸೋಮವಾರ, ಏಪ್ರಿಲ್ 29, 2024
ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!-ನೇಣಿಗೆ ಶರಣಾದ ಖ್ಯಾತ ನಟಿ ಅಮೃತಾ ಪಾಂಡೆ.!-ಪ್ರಜ್ವಲ್ ರೇವಣ್ಣನಿಂದ 300ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ಕೃತ್ಯ ; ಲಕ್ಷ್ಮಿ ಹೆಬ್ಬಾಳ್ಕರ್-Weather Alert: ಮುಂದಿನ 5 ದಿನ ರಾಜ್ಯದಲ್ಲಿ ಹಲವೆಡೆ ಬಿಸಿಗಾಳಿ ಎಚ್ಚರಿಕೆ..!-ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

‘ದೋ ತೇರಾ, ದೋ ಮೇರಾ’ ಅಕ್ಷಯ್ ಕುಮಾರ್ ಸಿನಿಮಾದ ರೀಲ್​ಗೆ ಅಶ್ವಿನ್ - ರವೀಂದ್ರ ಜಡೇಜಾ ಸಖತ್ ರೀಲ್; ವೈರಲ್ ವೀಡಿಯೊದಲ್ಲಿ ನಾಟು ನಾಟುಗೆ ಹೆಜ್ಜೆ!

Twitter
Facebook
LinkedIn
WhatsApp
‘ದೋ ತೇರಾ, ದೋ ಮೇರಾ’ ಅಕ್ಷಯ್ ಕುಮಾರ್ ಸಿನಿಮಾದ ರೀಲ್​ಗೆ ಅಶ್ವಿನ್ - ರವೀಂದ್ರ ಜಡೇಜಾ ಸಖತ್ ರೀಲ್; ವೈರಲ್ ವೀಡಿಯೊದಲ್ಲಿ ನಾಟು ನಾಟುಗೆ ಹೆಜ್ಜೆ!
ಭಾರತ- ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯ ಮುಗಿದು ಅಶ್ವಿನ್ ಸರಣಿಶ್ರೇಷ್ಠ ಪ್ರಶಸ್ತಿಯನ್ನು ಜಡೇಜಾ ಜೊತೆ ಹಂಚಿಕೊಂಡ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಳ್ಳುವ ಮೂಲಕ ಭಾರತ (India vs Australia) ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಸೋಮವಾರ (ಮಾ. 13) ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಅಂತಿಮ ನಾಲ್ಕನೇ ಟೆಸ್ಟ್ ಡ್ರಾನಲ್ಲಿ ಅಂತ್ಯ ಕಂಡ ಪರಿಣಾಮ ಟೀಮ್ ಇಂಡಿಯಾ ಮುನ್ನಡೆ ಸಾಧಿಸಿತು. 

ಇಡೀ ಟೆಸ್ಟ್ ಸರಣಿಯಲ್ಲಿ ಭಾರತೀಯ ಸ್ಪಿನ್ನರ್​ಗಳು ಪರಾಕ್ರಮ ಮೆರೆದರು. ಅದರಲ್ಲೂ ರವಿಚಂದ್ರನ್ ಅಶ್ವಿನ್ (R Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಜೋಡಿ ಈ ಟೆಸ್ಟ್ ಸರಣಿಯನ್ನು ಭಾರತ ವಶಪಡಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದರು. ಸೋಮವಾರ ಇಬ್ಬರೂ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿಕೊಂಡ ನಂತರ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಒಂದು ಹಂಚಿಕೊಂಡಿದ್ದು ಸಖತ್ ವೈರಲ್ ಆಗುತ್ತಿದೆ.

ಬಾಲಿವುಡ್​ನಲ್ಲಿ 2005 ರಲ್ಲಿ ಬಿಡುಗಡೆ ಆದ ಅಕ್ಷಯ್ ಕುಮಾರ್ ಹಾಗೂ ಸುನಿಲ್ ಶೆಟ್ಟಿ ನಟನೆಯ ”ದೀವಾನೆ ಹುಯೇ ಪಾಗಲ್” ಸಿನಿಮಾದ ‘ದೋ ತೇರಾ, ದೋ ಮೇರಾ’ ಫೇಮಸ್ ಕಾಮಿಡಿ ಸೀನ್​ಗೆ ರೀಲ್ಸ್ ಮಾಡಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ವಿಡಿಯೋವನ್ನು ಅಶ್ವಿನ್ ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಹಾರ್ದಿಕ್ ಪಾಮಡ್ಯ, ಸೂರ್ಯಕುಮಾರ್ ಯಾದವ್ ಸೇರಿದಂತೆ ಅನೇಕರು ಕಾಮೆಂಟ್ ಮಾಡಿದ್ದಾರೆ. 

ಬಾರ್ಡರ್-ಗವಾಸ್ಕರ್ ಟ್ರೋಫಿಯ ಟೆಸ್ಟ್ ಸರಣಿಯ 4 ಪಂದ್ಯಗಳಲ್ಲಿ ಅಶ್ವಿನ್ 25 ವಿಕೆಟ್ ಕಿತ್ತರೆ, ಜಡೇಜಾ 22 ವಿಕೆಟ್ ಪಡೆದು ಮಿಂಚಿದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ