ಬುಧವಾರ, ಜೂನ್ 26, 2024
ಚಿಕನ್ ಕಬಾಬ್ ಗೆ ಕೃತಕ ಕಲರ್ ಬಳಸಿದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡ ಫಿಕ್ಸ್..!-Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ-Tzachi Hanegbi - ಗಾಜಾದಲ್ಲಿ ಹಮಾಸ್ ಸರ್ಕಾರವನ್ನು ಬದಲಿಸುವ ಯೋಜನೆಯನ್ನು ಇಸ್ರೇಲ್ ಹೊರತರಲಿದೆ-ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ.!-ಅಯೋಧ್ಯೆಯಲ್ಲಿ ಮೊದಲ ಮಳೆಗೆ ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ..!-ನಂದಿನಿ ಹಾಲಿನ ದರ ಏರಿಕೆ; ಎಷ್ಟು ಹೆಚ್ಚಾಗಲಿದೆ ಇಲ್ಲಿದೆ ಮಾಹಿತಿ-T20 ವಿಶ್ವಕಪ್ 2024: ಐತಿಹಾಸಿಕ ಗೆಲುವಿನೊಂದಿಗೆ ಸೆಮಿಫೈನಲ್​ಗೇರಿದ ಅಫ್ಘಾನಿಸ್ತಾನ; ಆಸ್ಟ್ರೇಲಿಯಾ ಔಟ್!-Sports for change Kho Kho ಪಂದ್ಯಾಟ: ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ನಯನಾಡು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು-T20 ವಿಶ್ವಕಪ್‌: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫ್ಘಾನಿಸ್ತಾನ-ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ದೇವೇಗೌಡರು ಇರೋವರೆಗೂ ಜೆಡಿಎಸ್ ಪಕ್ಷ​ ಮುಗಿಸಲು ಆಗಲ್ಲ: ಹೆಚ್​.ಡಿ ರೇವಣ್ಣ

Twitter
Facebook
LinkedIn
WhatsApp
ದೇವೇಗೌಡರು ಇರೋವರೆಗೂ ಜೆಡಿಎಸ್ ಪಕ್ಷ​ ಮುಗಿಸಲು ಆಗಲ್ಲ: ಹೆಚ್​.ಡಿ ರೇವಣ್ಣ

ಹಾಸನ: ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ಸೇರಿ ಜೆಡಿಎಸ್​ ಪಕ್ಷವನ್ನು ಟಾರ್ಗೆಟ್ ಮಾಡಿದರು. ಈ ಪ್ರಾದೇಶಿಕ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಬಿಜೆಪಿ, ಕಾಂಗ್ರೆಸ್​ನಿಂದಲೂ ಆಗಲ್ಲ ದೇವೇಗೌಡರು ಇರೋವರೆಗೂ ಆಗಲ್ಲ ಎಂದು ಮಾಜಿ ಸಚಿವ ಹೆಚ್​.ಡಿ ರೇವಣ್ಣ  ಬಿಜೆಪಿ ಹಾಗೂ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ಬಿಜೆಪಿ ಗೆಲ್ಲಲು ಕಾಂಗ್ರೆಸ್ ಕಾರಣ. ಬಿಜೆಪಿ ಒಳಜಗಳದಿಂದ ಹಾನಗಲ್​ನಲ್ಲಿ ಕಾಂಗ್ರೆಸ್ ಗೆದ್ದಿದೆ. ಮತದಾರರು ಪ್ರೀತಿಯಿಂದ ಮತ ಹಾಕಿಲ್ಲ, ಮುಖಂಡರಿಂದಲೂ ಗೆದ್ದಿಲ್ಲ. ಕಾಂಗ್ರೆಸ್​ನಿಂದ ಜನ ಬೇಸತ್ತು ಸಿಂಧಗಿಯಲ್ಲಿ 32 ಸಾವಿರ ಮತಗಳಿಂದ‌ ಸೋಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಕರೆದುಕೊಂಡು ಹೋಗಿ ನಿಲ್ಲಿಸಿದ್ದಕ್ಕೆ ಜನರು ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್​ನವರು ಎಲ್ಲಾ ಕಡೆ ಇದೇ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ನಮ್ಮ ಪಕ್ಷದ ಏಳು ಜನ ಕರೆದುಕೊಂಡು ಹೋದರು. ಎಲ್ಲರೂ ಐವತ್ತು ಸಾವಿರದಿಂದ ಸೋತು ಮನೆಗೆ ಹೋದರು. 125 ಸೀಟ್ ಇದ್ದ ಕಾಂಗ್ರೆಸ್ 79ಕ್ಕೆ ಬಂತು. ಜನ ಕಾಂಗ್ರೆಸ್​​ಗೆ ಬುದ್ದಿ ಕಲಿಸಿದರು ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಚುನಾವಣೆಯಲ್ಲಿ ಸೋಲು-ಗೆಲುವ ಸರ್ವೇ ಸಾಮಾನ್ಯ. ಇದಕ್ಕೆಲ್ಲ ಧೃತಿಗೆಡಬೇಕಿಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು