![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಉಳ್ಳಾಲ: ದ.ಕ ಜಿಲ್ಲೆಯವರು ರಾಜಕೀಯವಾಗಿ ಪ್ರಬುದ್ಧತೆ ಇರುವ ಜನ, ಅರ್ಥ ಮಾಡಿಕೊಳ್ಳುವ ಜನ, ಯಾವುದೇ ರಾಜಕೀಯ ಪಕ್ಷವನ್ನು ವಿಚಾರ ಮಾಡದೇ, ವಿಮರ್ಶೆ ಮಾಡದೇ ಬೆಂಬಲಿಸಬಾರದು. ಜನರ ಸಂಕಷ್ಟಗಳಿಗೆ ಸ್ಪಂಧಿಸುತ್ತಾ ಇಲ್ಲವಾ ಅನ್ನುವುದನ್ನು ಗಮನಿಸಿ ಆಯ್ಕೆ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ನಡೆದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಶಿವರಾತ್ರಿ ಹಬ್ಬದ ಶುಭಾಷಯಗಳು. ಉಳ್ಳಾಲ ಉರೂಸ್ ಪ್ರಯುಕ್ತ ಉಳ್ಳಾಲ ಕ್ಷೇತ್ರಕ್ಕೆ ಭೇಟಿ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಕೊಟ್ಟು ರಾಜ್ಯದ ಬಿಜೆಪಿ ಸರಕಾರದ ಅಕ್ರಮಗಳು, ಭ್ರಷ್ಟಾಚಾರಗಳನ್ನು ಎಳೆಎಳೆಯಾಗಿ ಮುಂದಿಡುವ ಪ್ರಯತ್ನ ಮಾಡುತ್ತೇನೆ ಎಂದರು.
ರಾಜ್ಯದ ಸ್ಥಿತಿ ದಿವಾಳಿಯತ್ತ ತಿರುಗಿದೆ. ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಬಿಜೆಪಿಗೆ ಅಧಿಕಾರ ಸಿಕ್ಕಿದ ನಂತರ ಆಗಿರುವ ಭ್ರಷ್ಟಾಚಾರಗಳನ್ನು ಗಮನಿಸಬೇಕಿದೆ. ನಾವು, ಖಾದರ್ ಐದು ವರ್ಷಗಳ ಅಧಿಕಾರ ನಡೆಸಿದ್ದೇವೆ. ಆದರೆ ಎಲ್ಲಿಯೂ ವೈಯಕ್ತಿಕ ಆರೋಪಗಳು ಇರಲಿಲ್ಲ. ಆದರೆ ಇದೀಗ ಭ್ರಷ್ಟಾಚಾರ ಅನ್ನುವುದು ತುಂಬಿ ತುಳುಕುತ್ತಿದೆ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯನವರೇ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರತಿ ಯೋಜನೆಯ ಲಾಭಾಂಶದ ಶೇ.40% ಅನ್ನು ಲಂಚದ ರೂಪದಲ್ಲಿ ನೀಡುವಂತೆ ಹೇಳುತ್ತಿರುವುದು ವಿಪರ್ಯಾಸ. ಇಂತಹ ಸರಕಾರವನ್ನು ಒದ್ದು ಓಡಿಸುವ ದಿನ ಬರಲಿದೆ. ಆ ಸಂದರ್ಭ ಎಲ್ಲವನ್ನು ಬಯಲು ಮಾಡುತ್ತೇವೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆಸಿದಂತಹ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್, ಕೃಷಿಭಾಗ್ಯ, ಶಾದಿಭಾಗ್ಯ ನಿಲ್ಲಿಸಿದ್ದಾರೆ.ನಿವೇಶನರಹಿತರಿಗೆ ನಿವೇಶನವಿಲ್ಲ , ವಿದ್ಯಾರ್ಥಿ ವೇತನವಿಲ್ಲ, ಗಂಗಾ ಕಲ್ಯಾಣ 2-3 ಅಷ್ಟೇ, 3 ಜನಕ್ಕೆ ಕೊಟ್ರೆ 30 ಜನ ನಿಷ್ಠುರ ಆಗುವಂತೆ ಸರಕಾರ ವರ್ತಿಸುತ್ತಿದೆ. ಜನ ಕೇಳಿದಾಗ ಎಲ್ಲದಕ್ಕೂ ದುಡ್ಡಿಲ್ಲ ಅನ್ನುತ್ತಾರೆ. ಆದರೆ ಕೋವಿಡ್ ಹೆಸರಿನಲ್ಲಿ ರೂ. 8,000 ಕೋಟಿ ಖರ್ಚು ಮಾಡಿದ್ದಾರೆಂದು ಹೇಳುತ್ತಿದ್ದಾರೆ. ಜನಪರ ಯೋಜನೆಗೆ ದುಡ್ಡಿಲ್ಲ ಆದರೆ ಎಂಎಲ್ ಎಗಳ ಖರೀದಿಗೆ ದುಡ್ಡಿದೆ, ಇದು ಎಂತಹ ಆಡಳಿತ ಎಂದು ಪ್ರಶ್ನಿಸಿದರು.
ಈ ಸಂದರ್ಭ ಶಾಸಕ ಯು.ಟಿ ಖಾದರ್, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಪುರಸಭೆ ಮಾಜಿ ಸದಸ್ಯ ದಿನೇಶ್ ರೈ, ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಮೊದಲಾದವರು ಉಪಸ್ಥಿತರಿದ್ದರು
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist