ಶುಕ್ರವಾರ, ನವೆಂಬರ್ 22, 2024
ಟೆಸ್ಲಾ ಕಾರು ಅಪಘಾತ, ಗುಜರಾತ್ ಮೂಲದ ನಾಲ್ವರ ದುರ್ಮರಣ!-ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!-ಸ್ನೇಹಿತೆಯರ ಜತೆ ಸೆಲ್ಫಿ: ಕೆರೆ ಕೋಡಿಯಲ್ಲಿ ಕೊಚ್ಚಿ ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ರಕ್ಷಣೆ-ದಾಖಲೆ ಬರೆದ ತೇಜಸ್ವಿ ಸೂರ್ಯ, 'ಐರನ್‌ ಮ್ಯಾನ್‌ 70.3 ರೇಸ್‌' ಪೂರ್ಣಗೊಳಿಸಿದ ಮೊದಲ ಸಂಸದ-ಟೆಕ್ನಾಲಜಿ ಬದಲಾದ್ರೆ ಸಾಕಾ? ರಾಜಕೀಯ, ರಾಜಕಾರಣಿಗಳು ಬದಲಾಗಬಾರದಾ? ಸಂಚಲನ ಸೃಷ್ಟಿಸಿದ ದಳಪತಿ ವಿಜಯ್-ಉಪ ಚುನಾವಣೆಯಲ್ಲಿ ಗೆದ್ದರೆ ಡಿಕೆಶಿ ಸಿಎಂ, ಸಂಚಲನ ಮೂಡಿಸಿದ ಕೈ ಶಾಸಕನ ಹೇಳಿಕೆ!-ಶಿಗ್ಗಾಂವಿ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಬಂಡಾಯ ಶಮನ; ಅಕ್ಟೋಬರ್ 30ರಂದು ನಾಮಪತ್ರ ವಾಪಸ್ ಪಡೆದುಕೊಳ್ಳುತ್ತಾರಾ ಖಾದ್ರಿ?-19 ವರ್ಷದ ಗೆಳತಿಯನ್ನು ಕೊಂದು ಹೂತಿಟ್ಟ ಪ್ರಿಯಕರ, ಸಹಚರನ ಬಂಧನ-ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!-ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ತೈಲ ಬೆಲೆ ಏರಿಕೆಯ ತತ್ತರ, KSRTC ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

Twitter
Facebook
LinkedIn
WhatsApp
ತೈಲ ಬೆಲೆ ಏರಿಕೆಯ ತತ್ತರ, KSRTC ಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ

ಬೆಂಗಳೂರು (ಜು.19): ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿರುವ ಕೆಎಸ್‌ಆರ್‌ಟಿಸಿ ವಿದ್ಯುತ್‌ ಬಸ್‌ಗಳತ್ತ ಮುಖ ಮಾಡುತ್ತಿದ್ದು, ಖಾಸಗಿ ಕಂಪನಿಯಿಂದ ಒಪ್ಪಂದ ಮೇರೆಗೆ 50 ಬಸ್‌ಗಳನ್ನು ಪಡೆದುಕೊಳ್ಳಲು ಮುಂದಾಗಿದೆ. 2022ರ ಡಿಸೆಂಬರ್‌ ತಿಂಗಳಲ್ಲಿ 25 ಬಸ್‌ಗಳು ಮತ್ತು 2023ರ ಮಾರ್ಚ್‌ನಲ್ಲಿ  25 ಬಸ್‌ಗಳು ವಿದ್ಯುತ್‌ ಬಸ್‌ಗಳು ಲಭ್ಯವಾಗಲಿದೆ. 2023ರ ಜನವರಿಯಿಂದ ಬೆಂಗಳೂರು ನಗರದಿಂದ ವಿವಿಧ ಭಾಗಗಳಿಗೆ ಕೆಲ ಬಸ್‌ಗಳು ಕಾರ್ಯಾಚರಣೆ ಮಾಡುವ ನಿರೀಕ್ಷೆಯಿದೆ. ಹೈದ್ರಾಬಾದ್‌ ಮೂಲದ ಒಲೆಕ್ಟ್ರಾ ಕಂಪನಿಯಿಂದ ಹವಾನಿಯಂತ್ರಿತ (ಎಸಿ) 50 ಎಲೆಕ್ಟ್ರಿಕ್‌ ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಬಸ್‌ಗಳು ಪ್ರತಿ ದಿನ 450 ಕಿ.ಮೀ. ಕಾರ್ಯಾಚರಣೆ ಮಾಡಲಿವೆ. ಒಮ್ಮೆ ಚಾರ್ಜಿಂಗ್‌ ಮಾಡಿದಲ್ಲಿ 250 ಕಿ.ಮೀ. ಸಂಚರಿಸುವ ಸಾಮರ್ಥ್ಯ ಹೊಂದಿವೆ. ಬಸ್‌ ಚಾಲಕರನ್ನು ಮತ್ತು ನಿರ್ವಹಣೆಯನ್ನು ಕಂಪನಿಯೇ ಮಾಡಲಿದೆ. ಜತೆಗೆ, ಎಲೆಕ್ಟ್ರಿಕ್‌ ಚಾರ್ಜಿಂಗ್‌ ವೆಚ್ಚವನ್ನು ಕಂಪನಿ ಭರಿಸಲಿದೆ. ಆದರೆ, ನಿರ್ವಾಹಕರನ್ನು ಮಾತ್ರ ಕೆಎಸ್‌ಆರ್‌ಟಿಸಿ ಒದಗಿಸಲಿದ್ದು, ಪ್ರತಿ ಕಿ.ಮೀ. 55 ರು.ಗಳನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಚಾರ್ಜಿಂಗ್‌ ಘಟಕಗಳು: ಎಲೆಕ್ಟ್ರಿಕ್‌ ಬಸ್‌ಗಳನ್ನು ಒದಗಿಸುತ್ತಿರುವ ಒಲೆಕ್ಟ್ರಾ ಕಂಪೆನಿಯವರೇ ಬಸ್‌ನ ಚಾರ್ಜಿಂಗ್‌ ಘಟಕಗಳನ್ನು ಪ್ರಾರಂಭಿಸಲಿದೆ. ಆದರೆ, ಘಟಕಗಳ ನಿರ್ಮಾಣಕ್ಕೆ ಕೆಎಸ್‌ಆರ್‌ಟಿಸಿ ಸ್ಥಳ ನೀಡಬೇಕಾಗಿದೆ. ಇದಕ್ಕಾಗಿ ಹಲವು ಭಾಗಗಳ ಡಿಪೋಗಳನ್ನು ಸ್ಥಳಾವಕಾಶ ಪರಿಶೀಲನೆ ಮಾಡಿದ್ದು, ಶೀಘ್ರದಲ್ಲಿ ಘಟಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್‌ ಮಾಹಿತಿ ನೀಡಿದರು.

ಇತರೆ ನಗರಕ್ಕೂ ಸೇವೆ: ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ಮಾಡುವ ಸಾಮರ್ಥ್ಯವನ್ನು ಪರಿಗಣಿಸಿ ಕಾರ್ಯಾಚರಣೆ ಮಾಡುವ ಸಂಬಂಧ ತೀರ್ಮಾನಿಸಲಾಗಿದೆ. ಬೆಂಗಳೂರು ನಗರದಿಂದ ಮೈಸೂರು, ಚಿಕ್ಕಮಗಳೂರು, ವಿರಾಜಪೇಟೆ, ಮಡಿಕೇರಿ, ಶಿವಮೊಗ್ಗ, ದಾವಣಗೆರೆ ನಡುವೆ ಸಂಚರಿಸಲಿವೆ. ಈ ಎಲ್ಲ ಭಾಗಗಳಲ್ಲಿ ಒಂದೊಂದು ಸ್ಥಳದಲ್ಲಿ ಚಾರ್ಜಿಂಗ್‌ ಘಟಕ ಪ್ರಾರಂಭಕ್ಕೆ ಕೆಎಸ್‌ಆರ್‌ಟಿಸಿ ಸ್ಥಳಾವಕಾಶ ಮಾಡಿಕೊಡಲಿದೆ ಎಂದು ಅವರು ಹೇಳಿದರು.

ಒಲೆಕ್ಟ್ರಾ ಕಂಪನಿಯಿಂದ 50 ಎಲೆಕ್ಟ್ರಿಕ್‌ ಬಸ್‌ಗಳನ್ನು ಒಪ್ಪಂದ ಮೇರೆಗೆ ಪಡೆದುಕೊಳ್ಳುತ್ತಿದ್ದೇವೆ. ಸೆಪ್ಟಂಬರ್‌ ತಿಂಗಳಲ್ಲಿ ಒಂದು ಬಸ್‌ ಬರಲಿದ್ದು, ಅದನ್ನು ಕಾರ್ಯಾಚರಣೆ ನಡೆಸಿ ಅಗತ್ಯವಿರುವ ಬದಲಾವಣೆಗಳನ್ನು ಕಂಪನಿಗೆ ತಿಳಿಸಲಾಗುವುದು. ಅದಕ್ಕೆ ತಕ್ಕಂತೆ ಸಿದ್ಧಪಡಿಸಿ ಒದಗಿಸಲಿದೆ. ಈ ಬಸ್‌ಗಳಿಗೆ ಬೇಕಾಗಿರುವ ಚಾರ್ಜಿಂಗ್‌ ಘಟಕಗಳ ನಿರ್ಮಾಣ ಶೀಘ್ರದಲ್ಲಿ ಪ್ರಾರಂಭವಾಗಲಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

Adhvithi Shetty ರೂಪೇಶ್ ಶೆಟ್ಟಿಯ ‘ಜೈ' ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ!

ರೂಪೇಶ್ ಶೆಟ್ಟಿಯ ‘ಜೈ’ ತುಳು ಸಿನಿಮಾಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಎಂಟ್ರಿ! Twitter Facebook LinkedIn WhatsApp ಮಂಗಳೂರು: ರಾಕ್ ಸ್ಟಾರ್ (Rock Star)  ರೂಪೇಶ್ ಶೆಟ್ಟಿ (Rupesh Shetty) ಅಭಿನಯ ಮತ್ತು ನಿರ್ದೇಶನದ

Prathima ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು!

ಲವರ್ ಜತೆ ಸೇರಿ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ತಾಳಿ ಕಟ್ಟಿದವನನ್ನೇ ಕೊಂದಳು! Twitter Facebook LinkedIn WhatsApp ಉಡುಪಿ: ದಿಲೀಪ್ ಕಾರ್ಕಳದ ಪ್ರತಿಷ್ಠಿತ ಉದ್ಯಮಿ. ಕಾರ್ಕಳ ಪೇಟೆಯಲ್ಲಿರುವ ಬಾಲಾಜಿ ಎಂಬ ಲಾಡ್ಜ್ ಕಮ್

ಅಂಕಣ